Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಿಮಗಿಷ್ಟವಾದ ಹಣ್ಣು ಯಾವುದು? ನೀವು ನಾಯಕ ಗುಣದವರೇ ಅಥವಾ ಸೃಜನಶೀಲರೇ? ಇಲ್ಲಿದೆ ಕುತೂಹಲಕಾರಿ ಮಾಹಿತಿ

45ರ ಪ್ರಾಯದಲ್ಲಿ 20ರ ಯುವಕನ ಮೇಲೆ ಕ್ರಶ್: ಈ ಆಕರ್ಷಣೆಯ ಹಿಂದಿನ ಅಸಲಿ ಕಾರಣವೇನು ಗೊತ್ತೇ?

BREAKING: ಪಂಜಾಬ್ ನಲ್ಲಿ 25 ಅಡಿ ಆಳದ ಕೊಳವೆಬಾವಿಗೆ ಬಿದ್ದ 4 ವರ್ಷದ ಮಗು; ರಕ್ಷಣಾ ಕಾರ್ಯಾಚರಣೆ ತೀವ್ರ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ವಿಶೇಷ ಚೇತನ ಮಕ್ಕಳು ಸಮಾಜದ ಆಸ್ತಿ, ಆರೈಕೆ ಪುಣ್ಯದ ಕೆಲಸ: ಸಾಗರ ನಗರಸಭೆ ಸದಸ್ಯ ಎಲ್.ಚಂದ್ರಪ್ಪ
KARNATAKA

ವಿಶೇಷ ಚೇತನ ಮಕ್ಕಳು ಸಮಾಜದ ಆಸ್ತಿ, ಆರೈಕೆ ಪುಣ್ಯದ ಕೆಲಸ: ಸಾಗರ ನಗರಸಭೆ ಸದಸ್ಯ ಎಲ್.ಚಂದ್ರಪ್ಪ

By ವಸಂತ ಬಿ ಈಶ್ವರಗೆರೆ

ಶಿವಮೊಗ್ಗ : ವಿಶೇಷ ಚೇತನ ಮಕ್ಕಳು ಸಮಾಜದ ಆಸ್ತಿ. ಅವರನ್ನು ಆರೈಕೆ ಮಾಡುವುದು, ಅವರ ಶೈಕ್ಷಣಿಕ ಚಟುವಟಿಕೆಗೆ ಪ್ರೇರಣೆ ನೀಡುವುದು ಪುಣ್ಯದ ಕೆಲಸ ಎಂದು ಸಾಗರ ನಗರಸಭೆ ಸದಸ್ಯ ಎಲ್. ಚಂದ್ರಪ್ಪ ತಿಳಿಸಿದರು.

ಇಂಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಭೀಮನಕೋಣೆಯಲ್ಲಿ ಲಯನ್ಸ್ ಕ್ಲಬ್ ಸಾಗರ ಶ್ರೀಗಂಧ ಸಂಸ್ಥೆ ವತಿಯಿಂದ ಚೈತನ್ಯ ವಿಶೇಷ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಮಾನಸಿಕ ಆರೋಗ್ಯ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದಂತ ಅವರು, ಮುಂಗರವಳ್ಳಿಯ ಚೈತನ್ಯ ವಿಶೇಷ ಶಿಕ್ಷಣ ಸಂಸ್ಥೆ ಮಾಡುತ್ತಿರುವ ಕೆಲಸ ಸುವರ್ಣಾಕ್ಷರದಲ್ಲಿ ಬರೆದಿಡುವಂತಹದ್ದಾಗಿದೆ. ವಿಶೇಷ ಚೇತನ ಮಕ್ಕಳಿಗೆ ಶಿಕ್ಷಣ ನೀಡುವ ಜೊತೆಗೆ ಅವರ ಆಸಕ್ತಿದಾಯಕ ಕ್ಷೇತ್ರವನ್ನು ಗುರುತಿಸಿ, ಅವರಿಗೆ ಅದರಲ್ಲಿ ಕೃಷಿ ಮಾಡಲು ಅವಕಾಶ ನೀಡುತ್ತಿದೆ. ಮಕ್ಕಳಲ್ಲಿರುವ ಕ್ರೀಡಾ ಪ್ರತಿಭೆ, ಸಾಂಸ್ಕೃತಿಕ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ವೇದಿಕೆ ಕಲ್ಪಿಸಲಾಗುತ್ತಿದೆ. ಈ ಶಾಲೆಯ ಮಕ್ಕಳು ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ರಾಷ್ಟçಮಟ್ಟದಲ್ಲಿ ಮಾಡಿರುವ ಸಾಧನೆ ವಿಶೇಷವಾಗಿದೆ ಎಂದರು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಲಯನ್ಸ್ ಕ್ಲಬ್ ಸಾಗರ ಶ್ರೀಗಂಧ ಸಂಸ್ಥೆ ಅಧ್ಯಕ್ಷೆ ಸರಸ್ವತಿ ನಾಗರಾಜ್ ವಿಶೇಷ ಚೇತನ ಮಕ್ಕಳ ಆರೈಕೆ ಸವಾಲಿನದ್ದು, ದೈಹಿಕವಾಗಿ ಸರಿ ಇರುವ ಮಕ್ಕಳನ್ನು ನಿಭಾಯಿಸುವುದೇ ಕಷ್ಟಕರವಾಗಿರುವಾಗ ವಿಶೇಷ ಚೇತನ ಮಕ್ಕಳಿಗೆ ಶಿಕ್ಷಣ ನೀಡಿ ಅವರನ್ನು ಆರೈಕೆ ಮಾಡುತ್ತಿರುವ ಶಿಕ್ಷಕರ ಪಾತ್ರ ಸಮಾಜಕ್ಕೆ ಅನುಕರಣೀಯವಾದದ್ದು ಎಂದು ಹೇಳಿದರು.

ವಿಶೇಷ ಚೇತನ ಮಕ್ಕಳಿಗೆ ಅನುಕಂಪ ತೋರಿಸುವುದಕ್ಕಿಂತ ಅವರು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವಂತೆ ಮಾಡಬೇಕು. ಪೋಷಕರು ಇಂತಹ ಮಕ್ಕಳನ್ನು ಹೆಚ್ಚು ಮುತುವರ್ಜಿಯಿಂದ ಆರೈಕೆ ಮಾಡಬೇಕು. ಇಂತಹ ಮಕ್ಕಳ ಜನ್ಮ ಆಕಸ್ಮಿಕವಾಗಿ ಆಗಿರುತ್ತದೆ. ಅವರ ಮನಸ್ಸಿಗೆ ನೋವಾಗದಂತೆ ನೋಡಿಕೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ನವದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಮತ್ತು ಕಂಚಿನ ಪದಕ ಪಡೆದ ವಿಶೇಷ ಮಕ್ಕಳಾದ ಶರತ್ ಶೆಟ್ಟಿ, ಅನುಷಾ, ಲೀಲಾವತಿ ಹಾಗೂ ತರಬೇತುದಾರರಾದ ಉಮೇಶ್ ಭೀಮನಕೋಣೆ, ಆದರ್ಶ, ಗೀತಾ ಅವರನ್ನು ಸನ್ಮಾನಿಸಲಾಯಿತು.

ಸಂಸ್ಥಾಪಕಿ ಶಾಂತಲಾ, ಸಾಗರ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷರಾದಂತ ಗಿರೀಶ್ ಗೌಡ, ಶೈಲೇಶ್, ಅಕ್ಷಯ ಕುಮಾರ್, ನವೀನ್, ಸುರೇಶ ಕುಮಾರ್, ಪವನ್ ಇನ್ನಿತರರು ಹಾಜರಿದ್ದರು. ಸಿಂಧೂಜಾ ಪ್ರಾರ್ಥಿಸಿದರು. ಮೇಜರ್ ನಾಗರಾಜ್ ಸ್ವಾಗತಿಸಿದರು. ವೆಂಕಟೇಶ್ ವಂದಿಸಿದರು.

ಶಿವಮೊಗ್ಗ: ಸಾಗರದ ಶೃಂಗೇರಿ ಶಂಕರಮಠದ ಪ್ರಧಾನ ಅರ್ಚಕ ವೇದಬ್ರಹ್ಮ ಮಹಾಬಲೇಶ್ವರ ಭಟ್ ವಿಧಿವಶ

BREAKING: ಅ.31ರವರೆಗೆ ರಾಜ್ಯಾಧ್ಯಂತ ‘ಜಾತಿಗಣತಿ ಸಮೀಕ್ಷೆ’ ವಿಸ್ತರಣೆ, ಶಿಕ್ಷಕರನ್ನು ಗಣತಿಕಾರ್ಯದಿಂದ ಬಿಡುಗಡೆ

Share. Facebook Twitter LinkedIn WhatsApp Email

Related Posts

ಪೆಟ್ರೋಲ್, ಡೀಸೆಲ್ ದರ ಏರಿಕೆ, ಬಡವರ ಮೇಲೆ ಗದಾಪ್ರಹಾರ: ಸಚಿವ ಈಶ್ವರ ಖಂಡ್ರೆ

2 Mins Read

ಸಾಗರದಲ್ಲಿ ನಗರಸಭೆಯ ಜನವಿರೋಧಿ ಆಡಳಿತ ವಿರೋಧಿಸಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ

2 Mins Read

ಸಾಗರದ ‘ಬೇಸೂರು ಅಣು ವಿದ್ಯುತ್ ಸ್ಥಾವರ’ ವಿರೋಧಿ ಜನಾಂದೋಲನ: ಸರಣಿ ಹೋರಾಟಕ್ಕೆ ‘ಮಲೆನಾಡು ಸಜ್ಜು’

2 Mins Read
Recent News

ನಿಮಗಿಷ್ಟವಾದ ಹಣ್ಣು ಯಾವುದು? ನೀವು ನಾಯಕ ಗುಣದವರೇ ಅಥವಾ ಸೃಜನಶೀಲರೇ? ಇಲ್ಲಿದೆ ಕುತೂಹಲಕಾರಿ ಮಾಹಿತಿ

45ರ ಪ್ರಾಯದಲ್ಲಿ 20ರ ಯುವಕನ ಮೇಲೆ ಕ್ರಶ್: ಈ ಆಕರ್ಷಣೆಯ ಹಿಂದಿನ ಅಸಲಿ ಕಾರಣವೇನು ಗೊತ್ತೇ?

BREAKING: ಪಂಜಾಬ್ ನಲ್ಲಿ 25 ಅಡಿ ಆಳದ ಕೊಳವೆಬಾವಿಗೆ ಬಿದ್ದ 4 ವರ್ಷದ ಮಗು; ರಕ್ಷಣಾ ಕಾರ್ಯಾಚರಣೆ ತೀವ್ರ

ಇತಿಹಾಸದಲ್ಲೇ ಮೊದಲ ಬಾರಿಗೆ 96ರ ಗಡಿ ದಾಟಿದ ಡಾಲರ್ ಎದುರು ರೂಪಾಯಿ ಮೌಲ್ಯ: ಸಾರ್ವಕಾಲಿಕ ಕುಸಿತದಿಂದ ಭಾರತೀಯ ಮಾರುಕಟ್ಟೆಗೆ ಭಾರಿ ಆಘಾತ!

State News
KARNATAKA

ಪೆಟ್ರೋಲ್, ಡೀಸೆಲ್ ದರ ಏರಿಕೆ, ಬಡವರ ಮೇಲೆ ಗದಾಪ್ರಹಾರ: ಸಚಿವ ಈಶ್ವರ ಖಂಡ್ರೆ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೀದರ್ : ಪಂಚರಾಜ್ಯ ಚುನಾವಣೆ ಮುಗಿಯುತ್ತಿದ್ದಂತೆ ವಾಣಿಜ್ಯ ಅಡುಗೆ ಅನಿಲ ದರ, ಚಿನ್ನದ ಮೇಲಿನ ಆಮದು ಸುಂಕ ಹೆಚ್ಚಿಸಿದ ಎನ್.ಡಿ.ಎ.…

ಸಾಗರದಲ್ಲಿ ನಗರಸಭೆಯ ಜನವಿರೋಧಿ ಆಡಳಿತ ವಿರೋಧಿಸಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ

ಸಾಗರದ ‘ಬೇಸೂರು ಅಣು ವಿದ್ಯುತ್ ಸ್ಥಾವರ’ ವಿರೋಧಿ ಜನಾಂದೋಲನ: ಸರಣಿ ಹೋರಾಟಕ್ಕೆ ‘ಮಲೆನಾಡು ಸಜ್ಜು’

BREAKING: ಕೊಪ್ಪಳ ಟ್ರ್ಯಾಕ್ಟರ್ ದುರಂತ: ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.