ಬೆಂಗಳೂರು: ವಿಧಾನಸಭೆಯ ಕಲಾಪದಲ್ಲಿ ಸರ್ಕಾರದ ಗಮನ ಸೆಳೆಯಲು ಶಾಸಕರುಗಳು ಪ್ರಶ್ನೆಗಳನ್ನು ಸಲ್ಲಿಸುತ್ತಾರೆ. ಆದರೆ ನಿಗದಿತ ಸಮಯದಲ್ಲಿ ಉತ್ತರಗಳನ್ನು ಇಲಾಖೆಗಳು ಸಲ್ಲಿಸುತ್ತಿಲ್ಲ . ಮುಂದಿನ ದಿನಗಳಲ್ಲಿ ನಿಗದಿತ ಸಮಯಕ್ಕೆ ಉತ್ತರಗಳನ್ನು ನೀಡುವಂತೆ ಸಭಾಧ್ಯಕ್ಷ ಯು.ಟಿ.ಖಾದರ್ ವಿಧಾನಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಂದು ವಿಧಾನಸಭೆಯ ಕಲಾಪದ ವೇಳೆ ವಿವಿಧ ಇಲಾಖೆಗಳು ನಿಗದಿತ ಸಮಯಕ್ಕೆ ಉತ್ತರಗಳನ್ನು ನೀಡುತ್ತಿಲ್ಲ. ಯಾವ ಯಾವ ಇಲಾಖೆಯಲ್ಲಿ ಎಷ್ಟೆಷ್ಟು ಉತ್ತರಗಳು ಸಲ್ಲಿಸಲ್ಪಟ್ಟಿವೆ ಎಂದು ಸದನಕ್ಕೆ ವಿವರಿಸಿದರು.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ 22 ಗಮನ ಸೆಳೆಯುವ ಸೂಚನೆಗೆ 6 ಉತ್ತರಗಳನ್ನು, ಆರ್ಥಿಕ ಇಲಾಖೆ 33ಕ್ಕೆ 6 ಉತ್ತರಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಇಲಾಖೆ 9ಕ್ಕೆ ಒಂದು ಉತ್ತರ ನೀಡಿರುವುದಿಲ್ಲ, ಯುವ ಸಬಲೀಕರಣ ಇಲಾಖೆ 10ಕ್ಕೆ ಒಂದೂ ಉತ್ತರ ನೀಡಿಲ್ಲ. ಸಹಕಾರ ಇಲಾಖೆ 12ಕ್ಕೆ ಒಂದೂ ಉತ್ತರ ನೀಡಿಲ್ಲ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಒಂದಕ್ಕೆ ಒಂದು ಉತ್ತರ ನೀಡಿದೆ. ಜಲಸಂಪನ್ಮೂಲ ಇಲಾಖೆ 33ಕ್ಕೆ 4, ನಗರಾಭಿವೃದ್ಧಿ ಇಲಾಖೆ 23ಕ್ಕೆ 8 ಉತ್ತರಗಳನ್ನು, ಒಳಾಡಳಿತ 35ಕ್ಕೆ 26 ಉತ್ತರಗಳನ್ನು, ಕಾನೂನು ಇಲಾಖೆ 5ಕ್ಕೆ 3 ಉತ್ತರಗಳನ್ನು, ಪ್ರವಾಸೋದ್ಯಮ ಇಲಾಖೆ 25ಕ್ಕೆ ಒಂದು ಉತ್ತರವನ್ನು, ಸಣ್ಣ ನೀರಾವರಿ ಇಲಾಖೆ 19ಕ್ಕೆ 13 ಉತ್ತರಗಳನ್ನು ನೀಡಿದೆ. ಮಾಹಿತಿ ತಂತ್ರಜ್ಞಾನ ಇಲಾಖೆ 2 ಗಮನ ಸೆಳೆಯುವ ಸೂಚನೆಗೆ 2ಕ್ಕೆ ಉತ್ತರ ನೀಡಲಾಗಿದೆ ಎಂದು ಸಭಾಧ್ಯಕ್ಷರು ತಿಳಿಸಿದರು.
ಈ ಕುರಿತು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ನಿಗದಿತ ಸಮಯಕ್ಕೆ ಉತ್ತರಗಳನ್ನು ನೀಡಲು ಗಮನಹರಿಸುವಂತೆ ಸೂಚಿಸಿದರು.
ಡಿವಿಜಿ ಹಾಕಿಕೊಟ್ಟ ಮಾರ್ಗವೇ ಪತ್ರಕರ್ತರ ಸಂಘಟನೆಗೆ ದಾರಿದೀಪ: KUWJ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು
ಮಂಡ್ಯದಲ್ಲಿ ಗೃಹಬಳಕೆ ಅನಿಲ ಸಿಲಿಂಡರ್ ಕೊರತೆ ಇಲ್ಲ: ಡಿಸಿ ಡಾ.ಕುಮಾರ್ ಮಾಹಿತಿ








