ನವದೆಹಲಿ: ರಾಕೆಟ್ ಉಡಾವಣೆಯ ಪರೀಕ್ಷೆಯಲ್ಲಿ ಎಕ್ಸ್ ಸ್ಟಾರ್ ಶಿಪ್ ಯಶಸ್ವಿಯಾಗಿದೆ. ಅಲ್ಲದೇ ಸೂಪರ್ ಹೆವಿ ಬೂಸ್ಟರ್ ಅನ್ನು ಉಡಾವಣಾ ಗೋಪುರಕ್ಕೆ ಮರಳಿ ತರುವ ಪ್ರಯತ್ನದಲ್ಲೂ ಸಕ್ಸಸ್ ಆಗಿದೆ.
ಈ ಬಗ್ಗೆ ಎಕ್ಸ್ ನಲ್ಲಿ ಎಲೋನ್ ಮಸ್ಕ್ ವೀಡಿಯೋವನ್ನು ಸೇರ್ ಮಾಡಿದ್ದು, ಸ್ಪೇಸ್ ಎಕ್ಸ್ ನ ಸ್ಟಾರ್ ಶಿಪ್ ಭಾನುವಾರ ತನ್ನ ಐದನೇ ಪರೀಕ್ಷಾ ಹಾರಾಟದಲ್ಲಿ ಯಶಸ್ವಿಯಾಗಿ ಉಡಾವಣೆಯಾಗಿದೆ. ಟೆಕ್ಸಾಸ್ ಉಡಾವಣಾ ಪ್ಯಾಡ್ ನಿಂದ ರಾಕೆಟ್ ಅನ್ನು ಉಡಾವಣೆ ಮಾಡಲಾಯಿತು. ಸ್ಪೇಸ್ ಎಕ್ಸ್ ತನ್ನ ಸೂಪರ್ ಹೆವಿ ಬೂಸ್ಟರ್ ಅನ್ನು ಗಾಳಿಯಲ್ಲಿ ಯಶಸ್ವಿಯಾಗಿ ಹಿಡಿದಿದೆ ಎಂದಿದ್ದಾರೆ.
ಇಂದು ರಾಕೆಟ್ನ ಸೂಪರ್ ಹೆವಿ ಬೂಸ್ಟರ್ ಅನ್ನು ಉಡಾವಣಾ ಗೋಪುರಕ್ಕೆ ಮರಳಿ ತರುವ ಕಂಪನಿಯ ಮೊದಲ ಪ್ರಯತ್ನವಾಗಿದೆ ಎಂಬುದಾಗಿ ವೀಡಿಯೊ ಹಂಚಿಕೊಂಡು ಎಲೋನ್ ಮಸ್ಕ್ ಸಂತಸ ವ್ಯಕ್ತ ಪಡಿಸಿದ್ದಾರೆ.
The tower has caught the rocket!!
pic.twitter.com/CPXsHJBdUh— Elon Musk (@elonmusk) October 13, 2024
ದೇವರು-ಧರ್ಮದ ಹೆಸರಲ್ಲಿ ದೇಶ, ರಾಜ್ಯವನ್ನು ಒಡೆಯುವ ಬಿಜೆಪಿಯನ್ನು ಮೊದಲು ದೂರ ಇಡಿ: ಸಿದ್ದರಾಮಯ್ಯ ಕರೆ
‘ರಿಲಯನ್ಸ್ ಜಿಯೋ ಬಳಕೆದಾರ’ರಿಗೆ ಮತ್ತೊಂದು ಗುಡ್ ನ್ಯೂಸ್: ಹೊಸ ‘ISD ಪ್ಲಾನ್ಸ್’ ಘೋಷಣೆ