ಚಾಮರಾಜನಗರ: ಪೊಲೀಸರಿಂದ ಆರ್ಮಿ ಸ್ಟ್ಯಾಪ್ ಮಾರಾಟದ ನೆಪದಲ್ಲಿ ಸುಲಿಗೆ ಎಂಬ ಸುದ್ದಿ ಬಿತ್ತರ ಮಾಡಲಾಗಿತ್ತು. ಇದರ ಅನ್ವಯ ವಿಡಿಯೊ ಪರಿಶೀಲಿಸಿ ಎಎಸ್ಐ ಒಬ್ಬರನ್ನ ಚಾಮರಾಜನಗರ ಪೊಲೀಸ್ ಅದೀಕ್ಷಕರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಚಾಮರಾಜನಗರ ಜಿಲ್ಲಾ ಪೊಲೀಸ್ ಇಲಾಖೆಯ ಎಎಸ್ಐ , ಆರ್ಮಿಯ ಸ್ಟ್ಯಾಂಪ್ ಮಾರಾಟ ಮಾಡಲು ನೀಡಿದ್ದರು. ಠಾಣೆಯಸ್ಟಿಕ್ಕರ್ ಪಡೆದ ಎಎಸ್ಐ ರಾಮು ಹಾಗೂ ಪೇದೆ ರವಿ ಬರುವ ವಾಹನಗಳನ್ನ ತಡೆದು ಇದು ಆರ್ಮಿ ಸ್ಟಿಕ್ಕರ್ ಪಡೆಯಬೇಕು ಎಂದು ಸವಾರರಿಗೆ ಒತ್ತಡ ಹೇರುತ್ತಿದ್ದಲ್ಲದೆ ಮುಖಬೆಲೆ 10 ರೂ ಇರೊದನ್ನ 50 ರೂ ಕೊಟ್ಟು ಪಡೆಯಲೇಬೇಕು ಎಂದು ದುಂಬಾಲು ಬಿದ್ದಿದ್ದರು. ವಾಹನ ಸವಾರರೊಬ್ಬರು ಘಟನೆ ಬಗ್ಗೆ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದರು. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಪರಿಶೀಲಿಸಿದಾಗ ಹೆಚ್ಚುವರಿಯಾಗಿ ಮಾರಾಟ ಮಾಡಿರೊದು ಕಂಡು ಬಂದ ಹಿನ್ನಲೆಯಲ್ಲಿ ರಾಮಾಪುರದ ಎಎಸ್ಐ ರಾಮು ಎಂಬುವರನ್ನು ಅಮಾನತ್ತು ಮಾಡಿ ಎಸ್ಪಿ ಶಿವಕುಮಾರ್ ಆದೇಶ ಹೊರಡಿಸಿದ್ದಾರೆ. ಮುಖಬೆಲೆಗಿಂತ ಐದೈದು ಪಟ್ಟು ಹೆಚ್ಚು ಬೆಲೆಗೆ ಮಾರಾಟ ಮಾಡಿ ಚಾಮರಾಜನಗರ ಜಿಲ್ಲಾ ಪೊಲೀಸರು ಹಗಲುದರೋಡೆಗೆ ಇಳಿದಿರೋದು ನಾಚಿಗೇಡಿತನದ ಸಂಗತಿ ಎಂದು ಸುದ್ದಿಯನ್ನ ಕನ್ನಡ ನ್ಯೂಸ್ ನೌ ಪ್ರಕಟ ಮಾಡಿತ್ತು, ಸುದ್ದಿ ಪ್ರಕಟವಾದ ಬೆನ್ನಲೇ ಎಚ್ಚೆತ್ತುಕೊಂಡ ಎಸ್ಪಿ ಸಂಬಂಧಪಟ್ಟ ಅಧಿಕಾರಿಯನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.