ದಕ್ಷಿಣ ಕೊರಿಯಾ: ಇಲ್ಲಿನ ನೆಗ್ಲೇರಿಯಾ ಫೌಲೆರಿ ( Naegleria fowleri ) ಅಥವಾ “ಮೆದುಳು ತಿನ್ನುವ ಅಮೀಬಾ” ( brain-eating amoeba ) ದಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿರೋದಾಗಿ ದಕ್ಷಿಣ ಕೋರಿಯಾದ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಥೈಲ್ಯಾಂಡ್ನಿಂದ ಹಿಂದಿರುಗಿದ ನಂತರ ಸಾವನ್ನಪ್ಪಿದ ಕೊರಿಯಾದ ಪ್ರಜೆಗೆ ನೈಗ್ಲೇರಿಯಾ ಫೌಲೆರಿ ಸೋಂಕು ತಗುಲಿದೆ ಎಂದು ಕೊರಿಯಾ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಸಂಸ್ಥೆ (ಕೆಡಿಸಿಎ) ದೃಢಪಡಿಸಿದೆ.
50ರ ಹರೆಯದ ಈ ವ್ಯಕ್ತಿ ನಾಲ್ಕು ತಿಂಗಳ ಕಾಲ ಆಗ್ನೇಯ ಏಷ್ಯಾ ರಾಷ್ಟ್ರದಲ್ಲಿ ತಂಗಿದ್ದ ನಂತರ ಡಿಸೆಂಬರ್ 10 ರಂದು ಕೊರಿಯಾಕ್ಕೆ ಮರಳಿದರು. ಮರುದಿನ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಕಳೆದ ವಾರ ಮಂಗಳವಾರ ನಿಧನರಾದರು ಎಂದು ಯೋನ್ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ದೇಶದಲ್ಲಿ ವರದಿಯಾದ ಮೊದಲ ಸೋಂಕು ಇದಾಗಿದೆ. ಇದು 1937 ರಲ್ಲಿ ಯುನೈಟೆಡ್ ಸ್ಟೇಟ್ಸ್ನಲ್ಲಿ ಮೊದಲ ಬಾರಿಗೆ ವರದಿಯಾಯಿತು.
ನೇಗ್ಲೇರಿಯಾ ಫೌಲೆರಿ ಎಂಬುದು ವಿಶ್ವದಾದ್ಯಂತ ಬೆಚ್ಚಗಿನ ಸಿಹಿನೀರಿನ ಸರೋವರಗಳು, ನದಿಗಳು, ಕಾಲುವೆಗಳು ಮತ್ತು ಕೊಳಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಒಂದು ಅಮೀಬಾವಾಗಿದೆ. ಅಮೀಬಾವನ್ನು ಮೂಗಿನ ಮೂಲಕ ದೇಹವನ್ನು ಪ್ರವೇಶಿಸುತ್ತದೆ. ಈ ಬಳಿಕ ಮೆದುಳಿನ ಅಂಗಾಂಶವನ್ನು ನಾಶಪಡಿಸುತ್ತದೆ ಎಂದು ಹೇಳಲಾಗುತ್ತಿದೆ.
ನೆಗ್ಲೇರಿಯಾ ಫೌಲೆರಿಯ ಮಾನವನಿಂದ ಮನುಷ್ಯನಿಗೆ ಹರಡುವ ಸಾಧ್ಯತೆಗಳು ಕಡಿಮೆ ಎಂದು ಕೆಡಿಸಿಎ ಹೇಳಿದೆ. ಆದರೆ ರೋಗವು ಕಾಣಿಸಿಕೊಂಡಿರುವ ಪ್ರದೇಶಗಳಲ್ಲಿ ನೀರಿನಲ್ಲಿ ಈಜುವುದನ್ನು ನಿಲ್ಲಿಸುವಂತೆ ಸ್ಥಳೀಯ ಆಡಳಿತವು ತಿಳಿಸಿದೆ.
ಅಮೆರಿಕ, ಭಾರತ ಮತ್ತು ಥೈಲ್ಯಾಂಡ್ ಸೇರಿದಂತೆ ವಿಶ್ವದಲ್ಲಿ 2018 ರ ವೇಳೆಗೆ ಒಟ್ಟು 381 ನೆಗ್ಲೇರಿಯಾ ಫೌಲೆರಿ ಪ್ರಕರಣಗಳು ವರದಿಯಾಗಿವೆ.
Froud Alert: ‘ಕ್ರೆಡಿಟ್ ಕಾರ್ಡ್’ ಬಳಕೆದಾರರೇ ಎಚ್ಚರ: ಈಗ ಹೀಗೂ ನಡೆಯುತ್ತೆ ವಂಚನೆ
BIGG NEWS : ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ತಡೆಗೆ ಮಹತ್ವದ ಕ್ರಮ : ಶಿಕ್ಷಣ ಸಚಿವ ಬಿ.ಸಿ.ನಾಗೇಶ್