ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿದ್ದ ನಟ ದರ್ಶನ್ 69 ದಿನಗಳ ಬಳಿಕ ನಿನ್ನೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಬಳ್ಳಾರಿಯ ಹೈ ಸೆಕ್ಯೂರಿಟಿ ಸೆಲ್ ನಿಂದ ಕುಂಟುತ್ತಲೇ ಹೊರ ಬರುವ ವೇಳೆ ಜೈಲು ಸಿಬ್ಬಂದಿಗಳಿಗೆ ನಟ ದರ್ಶನವರು ನನ್ನಿಂದ ನಿಮಗೆ ತುಂಬಾ ತೊಂದರೆಯಾಗಿದೆ ಕ್ಷಮಿಸಿ ಎಂದು ಕ್ಷಮೆ ಕೇಳಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಇದಕ್ಕೂ ಮೊದಲು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದರು. ಅಲ್ಲಿ ರಾಜಾತಿಥ್ಯ ಪ್ರಕರಣ ನಡೆದ ಬಳಿಕ ಬಳ್ಳಾರಿ ಜಿಲ್ಲೆಗೆ ಶಿಫ್ಟ್ ಆಗಿದ್ದರು. ಸುಮಾರು 69 ದಿನಗಳ ಬಳಿಕ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ನಿನ್ನೆ ದರ್ಶನ್ ಬಳ್ಳಾರಿ ಜೈಲ್ ನಿಂದ ರಿಲೀಸ್ ಆಗಿದ್ದಾರೆ.
ಬಳ್ಳಾರಿ ಜೈಲಿನಲ್ಲಿ ಇರುವಷ್ಟು ದಿನಗಳ ಕಾಲ ಕೂಡ ಹಲವು ವಸ್ತುಗಳಿಗೆ ನಟ ದರ್ಶನ್ ಬೇಡಿಕೆ ಇಟ್ಟಿದ್ದರು. ಮೊದಲು ಟಿವಿಗಾಗಿ ನಟ ದರ್ಶನ್ ಜೈಲು ಸಿಬ್ಬಂದಿಗೆ ಸಿಕ್ಕಾಪಟ್ಟೆ ಬೇಡಿಕೆ ಇಟ್ಟಿದ್ದರು. ಬೇಡಿಕೆಯಂತೆ ಸಿಬ್ಬಂದಿಗಳು ಟಿವಿ ಕೂಡ ಕೊಟ್ಟಿದ್ದರು. ಬಳಿಕ ನನಗೆ ಚೇರ್ ಬೇಕು, ಹಾಸಿಗೆ ದಿಂಬು ಬೇಕು ಎಂದು ಸಿಬ್ಬಂದಿಗಳಿಗೆ ಪದೇಪದೇ ತೊಂದರೆ ನೀಡಿದ್ದರು.
ಇದೆಲ್ಲವನ್ನು ನೆನಪಿಸಿಕೊಂಡ ನಟ ದರ್ಶನ್ ನಿನ್ನೆ ಜೈಲಿನಿಂದ ಹೊರಬರುವ ವೇಳೆ ದಯವಿಟ್ಟು ನನ್ನನ್ನು ಕ್ಷಮಿಸಿ. ನಾನು ಇರುವಷ್ಟು ದಿನ ನಿಮಗೆ ತುಂಬಾ ತೊಂದರೆ ಕೊಟ್ಟಿದ್ದೇನೆ. ನನ್ನಿಂದ ನಿಮ್ಮ ಮನಸ್ಸಿಗೆ ನೋವಾಗಿದ್ದರೆ ಕ್ಷಮಿಸಿಬಿಡಿ ಎಂದು ಕ್ಷಮೆ ಕೇಳಿದ್ದಾರೆ. ಈ ವೇಳೆ ಜೈಲಿ ಸಿಬ್ಬಂದಿಗಳು ಸಹ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೊಡಿ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.