ಶಿವಮೊಗ್ಗ: ದಿನಾಂಕ:05.02.2025ರ ನಾಳೆ ಸೊರಬ ಉಪವಿಭಾಗೀಯ ಕಛೇರಿಯಲ್ಲಿ ನಡೆಯುವ ವಿದ್ಯುತ್ ಗ್ರಾಹಕರುಗಳ ಕುರಿತಾದ “ಜನಸಂಪರ್ಕ ಸಭೆಯನ್ನು ನಡೆಸಲಾಗುತ್ತಿದೆ. ವಿದ್ಯುತ್ ಗ್ರಾಹಕರು ಭಾಗಿಯಾಗಿ, ತಮ್ಮ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಪಡೆಯುವಂತೆ ಸೊರಬ ಮೆಸ್ಕಾಂ ಎಇಇ ಮನವಿ ಮಾಡಿದ್ದಾರೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಅವರು, ಸೊರಬ ಮೆಸ್ಕಾಂ ಉಪವಿಭಾಗೀಯ ಕಛೇರಿಯಲ್ಲಿ ADOB:05.02.2025 ರಂದು “ಜನಸಂಪರ್ಕ ಸಭೆ” ನಡೆಯಲಿದೆ ಎಂದಿದ್ದಾರೆ.
ಸೊರಬ ಮೆಸ್ಕಾಂ ಉಪವಿಭಾಗದಲ್ಲಿ ಜನಸಂಪರ್ಕ ಸಭೆಯನ್ನು ದಿನಾಂಕ:05.02.2025 ರಂದು ಬೆಳಗ್ಗೆ 10:30 ರಿಂದ ಮಧ್ಯಾಹ್ನ 1:00 ರವರೆಗೆ ಮೆಸ್ಕಾಂ ಸೊರಬ ಉಪವಿಭಾಗೀಯ ಕಛೇರಿಯಲ್ಲಿನ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಆದುದರಿಂದ ಈ ಸಭೆಯಲ್ಲಿ ಜನಪ್ರತಿನಿಧಿಗಳು/ಸಾರ್ವಜನಿಕರು/ವಿದ್ಯುತ್ ಗ್ರಾಹಕರು ಭಾಗವಹಿಸಿ” ವಿದ್ಯುತ್ ಸಮಸ್ಯೆಯ ಕುರಿತು ತಮ್ಮ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಶಿವಮೊಗ್ಗ: ಫೆ.6ರಂದು ಸೊರಬ ತಾಲ್ಲೂಕಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut