ಬೆಂಗಳೂರು : ನಮ್ಮ ಮೆಟ್ರೋಗೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವುದರ ಮೂಲಕ ಟಿಕೆಟ್ ಖರೀದಿಸುವ ವ್ಯವಸ್ಥೆಗೆ ಚಾಲನೆ ನೀಡಲಾಗಿತ್ತು. ಈ ವ್ಯವಸ್ಥೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವುದರಿಂದ ಶೀಘ್ರದಲ್ಲೇ ಮುಂದಿನ ಹಂತದ ಯೋಜನೆಗೆ ಬಿಎಂಆರ್ಸಿಎಲ್ (BMRCL) ಸಿದ್ಧವಾಗಿದೆ.
BIGG NEWS: ಮುಂಬೈ ಸಮೀಪದ ಜನವಸತಿ ಪ್ರದೇಶದಲ್ಲಿ ಚಿರತೆ ದಾಳಿ ; ಮೂವರಿಗೆ ಗಾಯ | Leopard Attacks in Mumbai
ಹೌದು, ನಮ್ಮ ಮೆಟ್ರೋದ ಆ್ಯಪ್ ಮತ್ತು ವಾಟ್ಸ್ಆ್ಯಪ್ನಲ್ಲಿ ಬಿಡುಗಡೆಯಾದ ಕ್ಯೂಆರ್ ಟಿಕೆಟ್ಗಳು ಯಶಸ್ಸಿಯಾಗಿವೆ. ಇದರ ಬೆನ್ನಲ್ಲೇ ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಶೀಘ್ರದಲ್ಲೇ ಒಂದು ಟಿಕೆಟ್ ಬಳಸಿ ಪ್ರಯಾಣಿಸಲು ಆರು ಮಂದಿ ಪ್ರಯಾಣಿಕರು ಮೆಟ್ರೋ ಬಳಸಲು ಅವಕಾಶ ನೀಡಲಿದೆ.
BIGG NEWS: ಮುಂಬೈ ಸಮೀಪದ ಜನವಸತಿ ಪ್ರದೇಶದಲ್ಲಿ ಚಿರತೆ ದಾಳಿ ; ಮೂವರಿಗೆ ಗಾಯ | Leopard Attacks in Mumbai
ಈ ಮೊದಲು ಒಂದು ಕ್ಯೂಆರ್ ಕೋಡ್ ಟಿಕೆಟ್ ಬಳಸಿ ಒಬ್ಬರು ಮಾತ್ರ ಪ್ರಯಾಣಿಸಲು ಸಾಧ್ಯವಿತ್ತು. ಈಗ ಒಂದು ಟಿಕೆಟ್ ಬಳಸಿ ಗರಿಷ್ಠ ಆರು ಪ್ರಯಾಣಿಕರ ಮೆಟ್ರೋ ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಒಂದೇ ಟಿಕೆಟ್ನಲ್ಲಿ ಕುಟುಂಬ, ಸ್ನೇಹಿತರ ಜೊತೆ ಪ್ರಯಾಣಿಸಿ
ಕುಟುಂಬದ ಜೊತೆಗೆ, ಗುಂಪಿನಲ್ಲಿ ಒಟ್ಟಾಗಿ ಪ್ರಯಾಣಿಸುವವರು ಸ್ವಯಂಚಾಲಿತ ಶುಲ್ಕ ಸಂಗ್ರಹ ಗೇಟ್ಗಳಲ್ಲಿ ಸ್ಥಾಪಿಸಲಾದ QR ರೀಡರ್ನಲ್ಲಿ ಒಂದು ಮೊಬೈಲ್ನಲ್ಲಿ ಒಂದೇ ಬಾರಿಗೆ ಆರು ಮಂದಿಗೂ ಟಿಕೆಟ್ ಬುಕ್ ಮಾಡಬಹುದು. ಈ ಬಗ್ಗೆ ಮಾಹಿತಿ ನೀಡಿರುವ ಬಿಎಂಆರ್ಸಿಎಲ್ನ ಡಿಪೋಗಳ ಮುಖ್ಯ ಇಂಜಿನಿಯರ್ ಬಿ.ಎಲ್. ಯಶವಂತ ಚವಾಣ್, “ಪ್ರಸ್ತುತ ಪ್ರಾಯೋಗಿಕ ಪ್ರಯೋಗಗಳು ನಡೆಯುತ್ತಿವೆ. ಇನ್ನೂ ಕೆಲವು ವಾರಗಳವರೆಗೆ ಪ್ರಯೋಗ ನಡೆಸಲಾಗುತ್ತದೆ. ಜನವರಿ 15 ರೊಳಗೆ ಒಂದು ಟಿಕೆಟ್ ಬಳಸಿ ಆರು ಮಂದಿ ಪ್ರಯಾಣಿಸುವ ವ್ಯವಸ್ಥೆ ಪ್ರಾರಂಭಿಸಬಹುದು” ಎಂದಿದ್ದಾರೆ.
BIGG NEWS: ಮುಂಬೈ ಸಮೀಪದ ಜನವಸತಿ ಪ್ರದೇಶದಲ್ಲಿ ಚಿರತೆ ದಾಳಿ ; ಮೂವರಿಗೆ ಗಾಯ | Leopard Attacks in Mumbai
ಪ್ರಯಾಣೀಕರಿಂದ ಉತ್ತಮ ಪ್ರತಿಕ್ರಿಯೆ ಪಡೆದ ಕ್ಯೂಆರ್ ಟಿಕೆಟಿಂಗ್
ಈ ನವೆಂಬರ್ 1 ರಂದು ಪ್ರಾರಂಭಿಸಲಾದ ಕ್ಯೂಆರ್ ಟಿಕೆಟಿಂಗ್ ವ್ಯವಸ್ಥೆಯು ಇಷ್ಟು ಕಡಿಮೆ ಸಮಯದಲ್ಲಿ ಅದ್ಭುತ ಪ್ರತಿಕ್ರಿಯೆಯನ್ನು ಪಡೆದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಈ ವ್ಯವಸ್ಥೆ ಜಾರಿಯಾದ ದಿನ ಸುಮಾರು 1,800 ಪ್ರಯಾಣಿಕರು ಕ್ಯೂಆರ್ ಟಿಕೆಟ್ ಅನ್ನು ಬಳಸಿದ್ದರು. ಆದರೆ, ನವೆಂಬರ್ 20 ರಂದು 12,787 ಕ್ಯೂಆರ್ ಟಿಕೆಟ್ಗಳನ್ನು ಖರೀದಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ
BIGG NEWS: ಮುಂಬೈ ಸಮೀಪದ ಜನವಸತಿ ಪ್ರದೇಶದಲ್ಲಿ ಚಿರತೆ ದಾಳಿ ; ಮೂವರಿಗೆ ಗಾಯ | Leopard Attacks in Mumbai
‘ಇಲ್ಲಿವರೆಗೆ ಕ್ಯೂಆರ್ ಟಿಕೆಟ್ ಬಗ್ಗೆ ದೂರು ಬಂದಿಲ್ಲ’
ಇಲ್ಲಿಯವರೆಗೆ ಒಟ್ಟು 1,35,564 ಕ್ಯೂಆರ್ ಟಿಕೆಟ್ಗಳನ್ನು ಪ್ರಯಾಣಕ್ಕಾಗಿ ಬಳಸಲಾಗಿದೆ ಎಂದು ಮುಖ್ಯ ಇಂಜಿನಿಯರ್ ಬಿ ಎಲ್ ಯಶವಂತ ಚವಾಣ್ ಹೇಳಿದ್ದಾರೆ. “ಮೆಟ್ರೋನ ಕ್ಯೂಆರ್ ಟಿಕೆಟಿಂಗ್ ವ್ಯವಸ್ಥೆ ಬಗ್ಗೆ ಸಾರ್ವಜನಿಕರಿಂದ ಉತ್ತಮ ಅಭಿಪ್ರಾಯ ಬಂದಿದೆ. ಇಲ್ಲಿಯವರೆಗೆ ನಾವು ಯಾವುದೇ ದೂರುಗಳನ್ನು ಸ್ವೀಕರಿಸಿಲ್ಲ.
ಜೊತೆಗೆ ಯಾವುದೇ ಪ್ರಮುಖ ದೋಷಗಳು ಕಂಡುಬಂದಿಲ್ಲ” ಎಂದು ಮಾಹಿತಿ ನೀಡಿದ್ದಾರೆ. ಮಟ್ರೋ ಟಿಕೆಟ್ ಖರೀದಿಸಲು ನಮ್ಮ ಮೆಟ್ರೋ ಅಪ್ಲಿಕೇಶನ್ಗೆ ಲಾಗ್ ಇನ್ ಆಗಬಹುದು ಅಥವಾ ವಾಟ್ಸಾಪ್ ಚಾಟ್ಬಾಟ್ ಸಂಖ್ಯೆಯನ್ನು (810 555 66 77) ಅನ್ನು ಬಳಸಬಹುದು. ನಮ್ಮ ಮೆಟ್ರೋ ಅಥವಾ ವಾಟ್ಸಾಪ್ ಬಳಸಿ ಹಣ ಪಾವತಿ ಮಾಡಬಹುದು. ಇನ್ನು, ಮೆಟ್ರೋ ಪ್ರಯಾಣಿಕರ ಸಂಖ್ಯೆ ಗಗನಕ್ಕೇರುತ್ತಿದೆ. ನವೆಂಬರ್ 14 ರಿಂದ ನವೆಂಬರ್ 19 ರವರೆಗಿನ ಪ್ರಯಾಣಿಕರ ಅಂಕಿಅಂಶಗಳು ಪ್ರತಿದಿನ 5.44 ಲಕ್ಷ ದಾಟಿದೆ.
BIGG NEWS: ಮುಂಬೈ ಸಮೀಪದ ಜನವಸತಿ ಪ್ರದೇಶದಲ್ಲಿ ಚಿರತೆ ದಾಳಿ ; ಮೂವರಿಗೆ ಗಾಯ | Leopard Attacks in Mumbai
ಇನ್ನೂ ಹೆಚ್ಚಾಗಲಿದೆ ಮೆಟ್ರೋ ಪ್ರಯಾಣಿಕರ ಸಂಖ್ಯೆ
ಬೈಯಪ್ಪನಹಳ್ಳಿ-ವೈಟ್ಫೀಲ್ಡ್ ಮಾರ್ಗದಲ್ಲಿ ಪರೀಕ್ಷೆ ಮತ್ತು ಕಾರ್ಯಾರಂಭವನ್ನು ವೈಟ್ಫೀಲ್ಡ್ ಮತ್ತು ಗರುಡಾಚಾರ್ಪಾಳ್ಯ ನಿಲ್ದಾಣಗಳ ನಡುವೆ ನಡೆಯಲಿದೆ ಎಂದು ಹಿರಿಯ ಮೆಟ್ರೋ ಅಧಿಕಾರಿ ತಿಳಿಸಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ಬೈಯಪ್ಪನಹಳ್ಳಿ- ವೈಟ್ಫೀಲ್ಡ್ ಮಾರ್ಗವು ಸಾರ್ವಜನರಿಕರಿಗೆ ಬಳಕೆಗೆ ತೆರಯಲಿದ್ದು, ನಂತರ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುವ ನಿರೀಕ್ಷೆಯಿದೆ. (ಮಾಹಿತಿ ಕೃಪೆ: ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್)