ಬೆಂಗಳೂರು : ಕಾನೂನಾತ್ಮಕವಾಗಿ ಮಗುವನ್ನು ದತ್ತು ಪಡೆಯದೆ ಅಕ್ರಮವಾಗಿ ದತ್ತು ಪಡೆದಿದ್ದಕ್ಕೆ ಇಂದು ಬಿಗ್ ಬಾಸ್ ಓಟಿಟಿ ಸೀಸನ್ ಒಂದರ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ನನ್ನು ಬ್ಯಾಡರ ಹಳೆಯ ಪೊಲೀಸ್ ಠಾಣೆ ಅಧಿಕಾರಿಗಳು ಬಂಧಿಸಿದ್ದರು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಗಿರೀಶ್ ಈ ಕುರಿತಂತೆ ಮಾತನಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಿನ್ನೆ ದಿನ ಬ್ಯಾಡರಹಳ್ಳಿಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆ ಅಧಿಕಾರಿಗಳು ಘಟನೆಗೆ ಸಂಬಂಧಿಸಿದಂತೆ ದೂರು ನೀಡಿದ್ದಾರೆ.ಸೋನು ಗೌಡ ಸೆಲೆಬ್ರಿಟಿ ಅವರು ರಾಯಚೂರಿನಿಂದ ಮಗುವನ್ನು ಅಕ್ರಮವಾಗಿ ದತ್ತು ತೆಗೆದುಕೊಂಡಿದ್ದಾರೆ. ಕಾನೂನು ರೀತಿಗಳನ್ನು ಸರಿಯಾಗಿ ಪಾಲಿಸಿಲ್ಲ ಎಂದು ದೂರು ನೀಡಿದ್ದಾರೆ.
ಸೋನು ಗೌಡ ದತ್ತು ಪ್ರಕ್ರಿಯೆ ಸರಿಯಾಗಿ ಮಾಡಿಲ್ಲ ಎಂದು ಬೆಂಗಳೂರಲ್ಲಿ ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಹೇಳಿಕೆ ನೀಡಿದ್ದಾರೆ.ಸೋನು ಗೌಡ ಎಂಟು ವರ್ಷದ ಮಗುವನ್ನು ದತ್ತು ಪಡೆದಿದ್ದಾರೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ದೂರು ನೀಡಿತ್ತು. ಈ ನೆಲೆಯಲ್ಲಿ ಇಂದು ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಫೋನು ಶ್ರೀನಿವಾಸ ಗೌಡರನ್ನು ಬಂಧಿಸಿದ್ದಾರೆ ಎಂದು ಡಿಸಿಪಿ ಗಿರೀಶ್ ತಿಳಿಸಿದರು.
ದತ್ತು ಪ್ರಕ್ರಿಗೆ ಗೊತ್ತಿಲ್ಲ
ದತ್ತು ಪ್ರಕ್ರಿಯ ಹೀಗಿರುತ್ತದೆ ಎಂದು ನನಗೆ ಗೊತ್ತಿರಲಿಲ್ಲ ಎಂದು ಪೊಲೀಸರ ವಿಚಾರಣೆಯ ವೇಳೆ ಸೋನು ಗೌಡ ತಿಳಿಸಿದ್ದಾರೆ.ನನಗೆ ಮದುವೆ ಆಗಿದೆ. ಮಗುವನ್ನ ನೋಡಿಕೊಂಡಿರುತ್ತೇನೆ. ಸೋಶಿಯಲ್ ಮೀಡಿಯಾದಿಂದ ಬಂದ ಹಣ ಅವಳಿಗೆ ಬಳಸುತ್ತೇನೆ. ಮಗುವಿನ ಜೀವನ ರೂಪಿಸಲು ಉಪಯೋಗಿಸುತ್ತೇನೆ ಎಂದು ವಿಚಾರಣೆ ವೇಳೆ ಸೋನುಗೌಡ ಹೇಳಿಕೆ ನೀಡಿದ್ದಾರೆ.