ಬೆಂಗಳೂರು: ಖ್ಯಾತ ಗಾಯಕ ಸೋನು ನಿಗಮ್ ಕನ್ನಡಿಗರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಕಾನೂನಿನ ಕುಣಿಕೆಗೆ ಸಿಲುಕಿದ್ದಾರೆ. ಇದರ ನಡುವೆ ತಮ್ಮ ಮೊದಲ ಹೇಳಿಕೆಯಲ್ಲಿ ತಮ್ಮ ಕಾರ್ಯಕ್ರಮದ ವೇಳೆ ಕನ್ನಡ ಹಾಡು ಹಾಡುವಂತೆ ಒತ್ತಾಯಿಸಿದರು. ಅದಕ್ಕೆ ಪಹಲ್ಗಾಮ್ ಹೋಲಿಕೆ ಕೊಟ್ಟಿದ್ದಾಗಿ ತಿಳಿಸಿದ್ದಾರೆ. ಇಂತ ಹೇಳಿಕೆ ನೀಡಿದಂತ ಸೋನು ನಿಗಮ್ ವಿರುದ್ಧ ಕನ್ನಡದ ಖ್ಯಾತ ಚಿತ್ರ ಸಾಹಿತಿ ಕವಿರಾಜ್ ಕಿಡಿಕಾರಿದ್ದಾರೆ.
ತಮ್ಮ ಫೇಸ್ ಬುಕ್ ಮುಖ ಪುಟದಲ್ಲಿ ಬರೆದುಕೊಂಡಿರುವಂತ ಚಿತ್ರಸಾಹಿತಿ ಕವಿರಾಜ್ ಅವರು, ಸೋನು ನಿಗಮ್ ಅವರ ವೀಡಿಯೊ ಕ್ಲಿಪ್ ಬಗ್ಗೆ ನನಗೆ ಸ್ವಲ್ಪ ಅನುಮಾನ ಇತ್ತು. ಅದು conclusive ಆಗಿರಲಿಲ್ಲ. ಹಾಗಾಗಿ ನಾನು ಯಾವತ್ತೂ ವಿಧಿಸಿಕೊಂಡಿರುವ ನಿಯಮದಂತೆ ಸರಿಯಾದ ಮಾಹಿತಿ ಬರೋವರೆಗೂ ಅವಸರಕ್ಕೆ ಬಿದ್ದು ಕಾಮೆಂಟ್ ಮಾಡಿರಲಿಲ್ಲ ಎಂದಿದ್ದಾರೆ.
ಈಗಷ್ಟೇ ಸೋನುನಿಗಮ್ ಸ್ಪಷ್ಟೀಕರಣ ನೀಡಿದ ವೀಡಿಯೊ ನೋಡಿದೆ. ಅಲ್ಲಿಗೆ ಕನ್ನಡ ಹಾಡಿಗೆ ಬೇಡಿಕೆ ಇಟ್ಟಿದ್ದನ್ನು ಪೆಹಲ್ಗಾಮ್ ಉಗ್ರಗಾಮಿಗಳ ದಾಳಿಯೊಂದಿಗೆ ಸಮೀಕರಿಸಿದ್ದು ಅವರ ಮೂರ್ಖತನ ಮತ್ತು ದುರಹಂಕಾರವನ್ನು ಇನ್ನಷ್ಟು ಜಾಹೀರು ಮಾಡಿದೆ. ಹಿಂದಿ ಚಿತ್ರೋದ್ಯಮದಿಂದ ಅಘೋಷಿತ ಬಹಿಷ್ಕಾರ ಅನುಭವಿಸಿದ್ದ ಅವರಿಗೆ ಆಸರೆ ಆಗಿದ್ದೆ ಕನ್ನಡ ಹಾಡುಗಳು ಎಂದು ತಿಳಿಸಿದ್ದಾರೆ.
ಅವರೂ ಕೂಡ ಎಲ್ಲಿ ಹೋದರು ಕನ್ನಡ ಹಾಡುಗಳ ಬಗ್ಗೆ ವ್ಯಕ್ತಪಡಿಸುವ ಕೃತಜ್ಞತೆ ಖುಷಿಕೊಡುತ್ತಿತ್ತು. ನಾನು ಬರೆದ ಸುಮಾರು ನೂರು ಹಾಡುಗಳನ್ನು ಸೋನು ಹಾಡಿರಬಹುದು. ಸೋನು ಧ್ವನಿ ನಮ್ಮ ಹಾಡುಗಳಿಗೆ ಮೆರುಗು ನೀಡುತ್ತಿದ್ದದ್ದು ನಿಜಾ. ಆದರೆ ಕನ್ನಡಕ್ಕಿಂತ ಯಾರೂ ದೊಡ್ಡವರಲ್ಲ. ಉಂಡ ಮನೆಗೆ ಎರಡು ಬಗೆಯುವ ಇಂತಹಾ ವರ್ತನೆ ಖಂಡನೀಯ ಮತ್ತು ಅಕ್ಷಮ್ಯ ಎಂಬುದಾಗಿ ಗಾಯಕ ಸೋನು ನಿಗಮ್ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.
ಭೂಕಬಳಿಕೆದಾರರಿಂದ ಶೀಬಿ ಅರಣ್ಯಭೂಮಿ ರಕ್ಷಣೆಗೆ ಸಚಿವ ಈಶ್ವರ ಖಂಡ್ರೆ ಸೂಚನೆ
ದ್ವಿತೀಯ ಪಿಯುಸಿ ಪಾಸ್ ಆಗಿದ್ದೀರಾ.? ಈ ಫ್ಯಾಶನ್ ಡಿಸೈನ್ ಪದವಿ ಕೋರ್ಸ್ ಗೆ ಅರ್ಜಿ ಸಲ್ಲಿಸಿ