ಬೆಂಗಳೂರು : ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದುಕೊಂಡಿರುವ ಆರೋಪದ ಮೇಲೆ ಬಿಗ್ ಬಾಸ್ ಓ ಟಿ ಟಿ ಒಂದರ ಸ್ಪರ್ಧಿ ಸೋನು ಗೌಡ ಳನ್ನು ಇದೀಗ ಪೊಲೀಸರು ಬೆಂಗಳೂರಿನ ACMM ಕೋರ್ಟ್ ನಲ್ಲಿರುವ ಸಿಜೆಮ್ ಹಾಲ್ ಗೆ ಹಾಜರುಪಡಿಸಿದ್ದಾರೆ.
“140 ಕೋಟಿ ಭಾರತೀಯರಿಗೆ ಅರ್ಪಿಸ್ತೇನೆ” : ಭೂತಾನ್ ದೇಶದ ‘ಅತ್ಯುನ್ನತ ನಾಗರಿಕ ಪ್ರಶಸ್ತಿ’ ಪಡೆದ ‘ಪ್ರಧಾನಿ ಮೋದಿ’
ಬಿಗ್ ಬಾಸ್ OTT ಒಂದರ ಸ್ಪರ್ಧಿ ಸೋನು ಗೌಡ ಕೋರ್ಟಿಗೆ ಹಾಜರಾಗಿದ್ದು, ಬೆಂಗಳೂರಿನ ACMM ಕೋರ್ಟಿನ ಸಿಜೆಮ್ ಹಾಲಿಗೆ ಪೊಲೀಸರು ಸೋನು ಗೌಡನನ್ನು ಕರೆದುಕೊಂಡು ಹೋಗಿದ್ದಾರೆ ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದ ಆರೋಪ ಹಿನ್ನೆಲೆಯಲ್ಲಿ ಬ್ಯಾಡರಹಳ್ಳಿ ಬಂಧಿಸಿದ್ದರು. ಇದೀಗ ವಿಚಾರಣೆಗಾಗಿ ಬೆಂಗಳೂರಿನ ಕೋರ್ಟಿಗೆ ಪೊಲೀಸರು ಹಾಜರುಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ತಮಿಳರು ಬಂದು ಬಾಂಬ್ ಇಡುತ್ತಾರೆಂಬ ಹೇಳಿಕೆ : ಶೋಭಾ ಕರಂದ್ಲಾಜೆ ವಿರುದ್ಧದ FIR ಗೆ ಹೈಕೋರ್ಟ್ ತಡೆ
ಸಾಮಾಜಿಕ ಜಾಲತಾಣಗಳ ಮೂಲಕ ತಾನು 6 ರಿಂದ 8 ವರ್ಷದ ಮಗುವನ್ನು ದತ್ತು ಪಡೆದಿರೋದಾಗಿ ರೀಲ್ ಸ್ಟಾರ್ ಸೋನು ಗೌಡ ಹೇಳಿಕೊಂಡಿದ್ದರು. ಅವರ ಹೇಳಿಕೆ ವೈರಲ್ ಕೂಡ ಆಗಿತ್ತು.ಈ ಹಿನ್ನಲೆಯಲ್ಲಿ ರಾಜ್ಯ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೀತಾ ಎಂಬುವರು ಬ್ಯಾಡರಹಳ್ಳಿ ಠಾಣೆಗೆ ರೀಲ್ ಸ್ಟಾರ್ ಸೋನು ಗೌಡ ವಿರುದ್ಧ ದೂರು ನೀಡಿದ್ದರು.
ಬೆಂಗಳೂರಲ್ಲಿ ಚುನಾವಣಾಧಿಕಾರಿಗಳ ಭರ್ಜರಿ ಕಾರ್ಯಚರಣೆ : ದಾಖಲೆ ಇಲ್ಲದ ‘7.86’ ಕೋಟಿ ಮೌಲ್ಯದ ‘ಮದ್ಯ’ ಜಪ್ತಿ
ಈ ದೂರನ್ನು ಆಧರಿಸಿ, ಸೋನು ಗೌಡ ವಿರುದ್ಧ ಜೆ.ಜೆ ಆ್ಯಕ್ಟ್ ಅಡಿಯಲ್ಲಿ ಬ್ಯಾಡರಹಳ್ಳಿ ಠಾಣೆಯ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು. ಆ ಬಳಿಕ ಇಂದು ಸೋನು ಗೌಡ ಅವರನ್ನು ಬಂಧಿಸಿರೋದಾಗಿ ತಿಳಿದು ಬಂದಿದೆ. ಇದೀಗ ಪೊಲೀಸರು ಸೋನು ಗೌಡನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.