ಕೊಪ್ಪಳ : ಸದ್ಯ ರಾಜ್ಯದಲ್ಲಿ ವಕ್ಫ್ ವಿವಾಹ ತೀವ್ರ ಸ್ವರೂಪ ಪಡೆದುಕೊಂಡಿದೆ ಸಿಎಂ ಸಿದ್ದರಾಮಯ್ಯ ರೈತರಿಗೆ ನೀಡಿದ ನೋಟಿಸ್ ಪಡೆಯುವಂತೆ ಸೂಚನೆ ನೀಡಿದರು ಕೂಡ ಬಿಜೆಪಿ ನಾಯಕರು ಪ್ರತಿಭಟನೆ ಹೋರಾಟ ನಡೆಸಿದರು. ಇದೀಗ ಕಾಂಗ್ರೆಸ್ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಸಿಎಂ ಸಿದ್ದರಾಮಯ್ಯ ಮಾತ್ರ ನಮ್ಮ ನಾಯಕರು ಸೋನಿಯಾ, ರಾಹುಲ್ ಗಾಂಧಿ ಅವರನ್ನು ನಮ್ಮ ನಾಯಕರೆಂದು ಒಪ್ಪಿಕೊಂಡಿಲ್ಲ ಎಂದು ತಿಳಿಸಿದ್ದಾರೆ.
ಕೊಪ್ಪಳ ನಗರದಲ್ಲಿ ನಿನ್ನೆ ಸಂಜೆ ನಡೆದ ಸ್ವತಂತ್ರ ಹೋರಾಟಗಾರರ ಜಯಂತಿ ಕಾರ್ಯಕ್ರಮದಲ್ಲಿ ಇಕ್ಬಾಲ್ ಅನ್ಸಾರಿ ಮಾತನಾಡಿ,ಸಿದ್ದರಾಮಯ್ಯ ಸಿಎಂ ಇರೋವರಗೆ ನಮ್ಮ ಮುಸ್ಲಿಂ ಸಮಾಜದವರು ಏನಾದ್ರು ಮಾಡಿಕೊಳ್ಳಬೇಕು. ಅವರ ನಂತರ ನಮಗೆ ಚೋಂಬೆ ಗತಿಯಾಗುತ್ತೆ ಎಂದು ಕಾಂಗ್ರೆಸ್ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೇಳಿಕೆಯನ್ನು ನೀಡಿದ್ದಾರೆ.
ಸಿದ್ದರಾಮಯ ಬಳಿ ಸಮಾಜದವರು ಆರು ತಿಂಗಳಿಗೊಮ್ಮೆ ಹೋಗಬೇಕು, ನೂರು ಕೋಟಿ ರೂ. ಅನುದಾನ ತಂದು, ಸಮಾಜದ ಕೆಲಸ ಮಾಡಬೇಕು. ನಾವು ನೀವು, ನಮ್ಮ ಸಮಾಜದವರು ಏನಾದ್ರು ಮಾಡಿಕೊಳ್ಳಬೇಕು. ನಂತರ ಚಂಬೇ ಗತಿಯಾಗುತ್ತದೆ ಎಂದು ಹೇಳಿದ್ದಾರೆ. ಇನ್ನು ನಾನು ಸಿದ್ದರಾಮಯ್ಯರನ್ನು ಮಾತ್ರ ನನ್ನ ನಾಯಕ ಎಂದು ಒಪ್ಪಿಕೊಂಡಿದ್ದೇನೆ. ರಾಹುಲ್ ಗಾಂಧಿ, ಸೋನಿಯಾಗಾಂಧಿರನ್ನು ಕೂಡಾ ನಾನು ನಮ್ಮ ನಾಯಕ ಅಂತ ಒಪ್ಪಿಕೊಂಡಿಲ್ಲ ಎಂದು ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ.