ಮೈಸೂರು : ಅ. 3 ರಂದು ಮೈಸೂರಿಗೆ ಸೋನಿಯಾ ಗಾಂಧಿ ಆಗಮಿಸಲಿದ್ದಾರೆ ಎಂಬ ಅಧಿಕೃತ ಮಾಹಿತಿ ಲಭ್ಯವಾಗಿದೆ.
ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ಭಾರತ್ ಜೋಡೋ ಯಾತ್ರಾ (Bharat Jodo Yatra) 3ನೇ ದಿನಕ್ಕೆ ಕಾಲಿಟ್ಟಿದ್ದು, ಈ ಹಿನ್ನೆಲೆ ಅ.3 ರಂದು ಮೈಸೂರಿಗೆ ಸೋನಿಯಾ ಗಾಂಧಿ ಆಗಮಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
(ಅಕ್ಟೋಬರ್ 3) ನಾಳೆ ಮಧ್ಯಾಹ್ನ 12 :30 ಕ್ಕೆ ದೆಹಲಿಯಿಂದ ಮೈಸೂರು ಏರ್ ಪೋರ್ಟ್ ಗೆ ಆಗಮಿಸಲಿರುವ ಸೋನಿಯಾ ಗಾಂಧಿ ನಂತರ ರಾಹುಲ್ ಗಾಂಧಿ ಜೊತೆ ಕೊಡಗು ಜಿಲ್ಲೆಯೊಂದರ ರೆಸಾರ್ಟ್ ಗೆ ತೆರಳಲಿದ್ದಾರೆ.
ನಾಳೆ ಮೈಸೂರು ನಗರದಿಂದ TS ಛತ್ರದವರೆಗೂ ಪಾದಯಾತ್ರೆ ನಡೆಯಲಿದ್ದು, ನಾಡಿದ್ದು ಮೈಸೂರಿನಲ್ಲಿ ನಡೆಯಲಿರುವ ಜೊಡೋ ಪಾದಯಾತ್ರೆಯಲ್ಲಿ ಸೋನಿಯಾ ಗಾಂಧಿ ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ. ಈ ಮೂಲಕ ರಾಜ್ಯ ಕಾಂಗ್ರೆಸ್ಗೆ ಮತ್ತಷ್ಟು ಹುರುಪು ಸಿಕ್ಕಂತಾಗಿದೆ. ಮೈಸೂರಿನ ಬದನವಾಳು ಗ್ರಾಮದಲ್ಲಿರುವ ರಾಹುಲ್ ಗಾಂಧಿ ಬೆಳಗ್ಗೆ ಗಾಂಧಿಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬಳಿಕ ಖಾದಿ ಗ್ರಾಮೋದ್ಯೋಗದ ಕೇಂದ್ರಕ್ಕೆ ಭೇಟಿ ನೀಡಿ ಮಹಿಳೆಯರ ಜೊತೆ ಸಂವಾದ ನಡೆಸಿದರು.
ಕಾಂಗ್ರೆಸ್ ದೇಶದ್ರೋಹಿ, ಭ್ರಷ್ಟಾಚಾರಿಗಳ ಪಕ್ಷ – BJP MLC ಎನ್. ರವಿಕುಮಾರ್