ಪಣಜಿ: ಹರ್ಯಾಣದ ಬಿಜೆಪಿ ನಾಯಕಿ ಸೋನಾಲಿ ಫೋಗಟ್ (Sonali Phogat) ಅವರು ಸಾವಿಗೂ ಮುನ್ನಾ ದಿನ ತಾವಿದ್ದ ಹೋಟೆಲ್ಗೆ ಹಿಂತಿರುಗುವ ಮೊದಲು ಗೋವಾದ ಪ್ರಸಿದ್ಧ ಅಂಜುನಾ ಬೀಚ್ನಲ್ಲಿರುವ ರೆಸ್ಟೋರೆಂಟ್ಗೆ ಭೇಟಿ ನೀಡಿದ್ದರು ಎನ್ನಲಾಗಿದೆ. 14 ವರ್ಷಗಳ ಹಿಂದೆ ಈ ರೆಸ್ಟೋರೆಂಟ್ನಲ್ಲಿ ಬ್ರಿಟನ್ನ ಹದಿಹರೆಯದವರೊಬ್ಬರು ಸಾವನ್ನಪ್ಪಿ ಅಶಾಂತಿ ಉಂಟಾಗಿತ್ತು. ಈ ವಿಷಯವಾಗಿ ‘ಕರ್ಲೀಸ್’ ರೆಸ್ಟೋರೆಂಟ್ ಸುದ್ದಿಯಲ್ಲಿತ್ತು.
ಸೋನಾಲಿ ಫೋಗಟ್ (42) ಅವರು ಸೋಮವಾರ ರಾತ್ರಿ ‘ಕರ್ಲೀಸ್’ ರೆಸ್ಟೋರೆಂಟ್ಗೆ ಭೇಟಿ ನೀಡಿದ್ದರು. ನಂತ್ರ, ಆಗಸ್ಟ್ 23 ರಂದು ಅಂದ್ರೆ, ಮಂಗಳವಾರ ಬೆಳಿಗ್ಗೆ ತಮ್ಮ ಹೋಟೆಲ್ನಿಂದ ಉತ್ತರ ಗೋವಾ ಜಿಲ್ಲೆಯ ಅಂಜುನಾದ ಸೇಂಟ್ ಆಂಥೋನಿ ಆಸ್ಪತ್ರೆಗೆ ಕರೆತರಲಾಯಿತು. ಆಕೆಯ ಸಾವನ್ನು ಮೊದಲು ಹೃದಯಾಘಾತದಿಂದ ಸಂಭವಿಸಿದೆ ಎಂದು ಶಂಕಿಸಲಾಗಿತ್ತು. ಈಗ ಅದನ್ನು ಕೊಲೆ ಎಂದು ಶಂಕಿಸಲಾಗಿದ್ದು, ಅವಳ ಇಬ್ಬರು ಸಹಚರರನ್ನು ಅಂಜುನಾ ಪೊಲೀಸರು ಬಂಧಿಸಿದ್ದಾರೆ.
2008 ರಲ್ಲಿ ಬ್ರಿಟಿಷ್ ಹದಿಹರೆಯದ ಸ್ಕಾರ್ಲೆಟ್ ಈಡನ್ ಕೀಲಿಂಗ್ ಸಾವನ್ನಪ್ಪಿದ್ದರು. ಈ ತನಿಖೆಯ ಸಮಯದಲ್ಲಿ ‘ಕರ್ಲೀಸ್’ ರೆಸ್ಟೋರೆಂಟ್ ಸುದ್ದಿಯಲ್ಲಿತ್ತು. ಕೀಲಿಂಗ್ನ ತಾಯಿ ಈ ಬಗ್ಗೆ ಮಾತನಾಡಿದ್ದು, ತನ್ನ ಮಗಳು ಸಾಯುವ ಮೊದಲು ‘ಕರ್ಲೀಸ್’ ಗೆ ಭೇಟಿ ನೀಡಿದ್ದಳು ಎಂದಿದ್ದಾರೆ. ತನಿಖೆಯಲ್ಲಿ, ಕೀಲಿಂಗ್ ಸಾವಿಗೂ ಮುನ್ನ ಮಾದಕವಸ್ತು ಸೇವಿಸಿದ್ದಳು ಎಂದು ಸಾಕ್ಷ್ಯವು ಬಹಿರಂಗಪಡಿಸಿದೆ. ಈ ಕೀಲಿಂಗ್ ಸಾವಿನ ಸುದ್ದಿಯ ಬಳಿಕ, ಇದೀಗ ಸೋನಾಲಿ ವಿಷಯವಾಗಿ ‘ಕರ್ಲೀಸ್’ ರೆಸ್ಟೋರೆಂಟ್ ಮತ್ತೆ ಸುದ್ದಿಯಲ್ಲಿದೆ.
ಸೋನಾಲಿ ಫೋಗಟ್ ಅವರ ಸೋದರಳಿಯ ಮೊಹಿಂದರ್ ಫೋಗಟ್ ಅವರು, ಬಂಧಿತ ಆರೋಪಿಗಳಾದ ಸುಧೀರ್ ಸಗ್ವಾನ್ ಮತ್ತು ಸುಖವಿಂದರ್ ವಾಸಿ ಅವರು ರಾತ್ರಿ ಅವಳನ್ನು ಕರ್ಲೀಸ್ಗೆ ಕರೆದೊಯ್ದಿದ್ದಾರೆ ಎಂದು ಹೇಳಿದ್ದಾರೆ. ಫೋಗಟ್ ಭೇಟಿಯಾಗಲು ಬಯಸಿದ ಹರಿಯಾಣದ ವ್ಯಕ್ತಿಯೊಬ್ಬರು ಕರ್ಲಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಆಕೆಗೆ ತಿಳಿಸಲಾಯಿತ್ತು. ಹೀಗಾಗಿ, ಅಲ್ಲಿಗೆ ಕರೆದೊಯ್ದಿದ್ದಾರೆ ಎಂದು ಅವರು ಹೇಳಿದ್ದಾರೆ.
ಫೋಗಟ್ ಸಾವಿನ ನಂತರ ರೆಸ್ಟೋರೆಂಟ್ನಲ್ಲಿ ಅವರ ಉಪಸ್ಥಿತಿಯ ಬಗ್ಗೆ ವಿಚಾರಿಸಲು ರೆಸ್ಟೋರೆಂಟ್ಗೆ ಸಂಪರ್ಕಿಸಿದಾಗ ಕರ್ಲೀಸ್ ಮಾಲೀಕ ಎಡ್ವಿನ್ ನ್ಯೂನ್ಸ್, ಸೋನಾಲಿ ಫೋಗಟ್ ಇತರರೊಂದಿಗೆ ತನ್ನ ರೆಸ್ಟೋರೆಂಟ್ಗೆ ಬಂದಿರುವುದನ್ನು ದೃಢಪಡಿಸಿದ್ದಾರೆ.
BIGG NEWS: ಇಂದು ದೆಹಲಿಗೆ ಬಿ.ಎಸ್ಯಡಿಯೂರಪ್ಪ; ತೀವ್ರ ಕುತೂಹಲ ಮೂಡಿಸಿದೆ ಬಿಎಸ್ ವೈ ಭೇಟಿ
BIGG NEWS: ಗುತ್ತಿಗೆದಾರರ ವಿರುದ್ಧ ₹ 50 ಕೋಟಿ ಮಾನನಷ್ಟ ಮೊಕದ್ದಮೆ ಹೂಡಲಿರುವ ಸಚಿವ ಮುನಿರತ್ನ