ಚಿತ್ರದುರ್ಗ: ಕುಡಿದ ಮತ್ತಿನಲ್ಲಿ ತಾಯಿಯೊಂದಿಗೆ ಜಗಳಕ್ಕೆ ಇಳಿದಂತ ಮಗನೊಬ್ಬ, ಅದೇ ಮತ್ತಿನಲ್ಲಿ ಹೆತ್ತಮ್ಮನನ್ನೇ ಹತ್ಯೆಗೈದ ಬೆಚ್ಚಿ ಬೀಳಿಸೋ ಘಟನೆ ಚಿತ್ರದುರ್ಗದ ಹಿರಿಯೂರಿನ ಹುಲಗಲಕುಂಟೆ ಗ್ರಾಮದಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹುಲಗಲಕುಂಟೆ ಗ್ರಾಮದ ಆರೋಪಿ ಚಿತ್ರಲಿಂಗ(40) ಎಂಬಾತ ತನ್ನ ತಾಯಿ ಮೃತ ಮಹಿಳೆ ಗಂಗಮ್ಮ(65) ಎಂಬುವರ ಜೊತೆಗೆ ಕುಡಿದು ಜಗಳಕ್ಕೆ ಇಳಿದಿದ್ದಾನೆ. ಜಗಳ ತಾರಕಕ್ಕೆ ಏರಿದಂತ ಸಂದರ್ಭದಲ್ಲಿ ತಾಯಿಯನ್ನೇ ಹೊಡೆದು ಕೊಲೆಗೈದಿದ್ದಾನೆ.
ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿರುವಂತ ಪೊಲೀಸರು ಆರೋಪಿ ಚಿತ್ರಲಿಂಗನನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
ಈ ಬಗ್ಗೆ ಹಿರಿಯೂರು ತಾಲ್ಲೂಕು ಘಟಕದ ಕರ್ನಾಟಕ ರಾಜ್ಯ ಕಾರ್ಮಿಕರ ಪರಿಷತ್ ಅಧ್ಯಕ್ಷ ಪರಮೇಶ್ವರ್ ಮಾತನಾಡಿ, ಹಿರಿಯೂರು ತಾಲ್ಲೂಕಿನ ಹುಲಗಲಕುಂಟೆಯಲ್ಲಿ ನಡೆದಿರುವಂತ ಇಂತಹ ದುಷ್ಕೃತ್ಯವು ಬೆಚ್ಚಿ ಬೀಳಿಸುವಂತೆ ಮಾಡಿದೆ. ಇದಕ್ಕೆ ಅಬಕಾರಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ. ಅಕ್ರಮವಾಗಿ ಹಳ್ಳಿಯಲ್ಲಿ ಮದ್ಯ ಮಾರಾಟ ನಿಲ್ಲಿಸಬೇಕು. ಇಲ್ಲವಾದಲ್ಲಿ ಅಬಕಾರಿ ಇಲಾಖೆಯ ಮುಂದೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ
BIG UPDATE: ‘ಮ್ಯಾನ್ಮಾರ್’ ಪ್ರಬಲ ಭೂಕಂಪದಿಂದ 144 ಮಂದಿ ಸಾವು, 732 ಜನರಿಗೆ ಗಾಯ: ಸರ್ಕಾರದ ಅಧಿಕೃತ ಮಾಹಿತಿ
BREAKING: ‘ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ’ ಕೊಲೆಗೆ ಸಂಚು ಪ್ರಕರಣ: ಐವರ ವಿರುದ್ಧ ‘FIR’ ದಾಖಲು