ಮೈಸೂರು: ತಂದೆಯವರು ಮಾಡಿಸಿದ್ದಂತ ಎಲ್ಐಸಿಯಿಂದ ಹಣ ಪಡೆಯೋ ಕಾರಣಕ್ಕಾಗಿ ಅವರನ್ನೇ ಕೊಲೆ ಮಾಡಿರುವಂತ ಘಟನೆ ಪಿರಿಯಾಪಟ್ಟಣದಲ್ಲಿ ನಡೆದಿದೆ. ತಂದೆಯನ್ನು ಪುತ್ರನೊಬ್ಬ ಕೊಲೆ ಮಾಡಿದ್ದರ ಕಾರಣ ಮತ್ತೊಬ್ಬ ಮಗ ಈ ಸುದ್ದಿ ಕೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ತಿಳಿದು ಬಂದಿದೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಕೊಪ್ಪದ ಗೆರೋಸಿ ಕಾಲೋನಿಯ ಅಣ್ಣಪ್ಪ ಎಂಬುವರಿಗೆ ಪುತ್ರ ಪಾಂಡು ಎಲ್ಐಸಿ ಪಾಲಿಸಿ ಮಾಡಿಸಿದ್ದರು. ಈ ಹಣವನ್ನು ಪಡೆಯೋ ಕಾರಣದಿಂದಾಗಿ ತಂದೆ ಅಣ್ಣಪ್ಪ ಅವರಿಗೆ ಪುತ್ರ ಪಾಂಡು ಹಿಂಬದಿಯಿಂದ ತಲೆಗೆ ಹೊಡೆದು ಕೊಂದಿರುವುದಾಗಿ ಹೇಳಲಾಗುತ್ತಿದೆ.
ಈ ರೀತಿಯಾಗಿ ತಂದೆಯನ್ನು ಸಾಯಿಸಿ, ಅಪ್ಪನಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಸಾವನ್ನಪ್ಪಿರುವುದಾಗಿ ಕಥೆ ಕಟ್ಟಿದ್ದಾನೆ. ಈ ವಿಷಯ ತಿಳಿದು ಅಣ್ಣಪ್ಪ ಅವರ ಮತ್ತೊಬ್ಬ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇನ್ನೂ ಈ ಸಂಬಂಧ ಬೈಲುಕುಪ್ಪೆ ಪೊಲೀಸರಿಗೆ ದೂರು ಸಹ ಕೊಲೆ ಮಾಡಿದ್ದಂತ ಪಾಂಡುವೇ ನೀಡಿದ್ದಾರೆ. ಈ ದೂರು ಪಡೆದಂತ ಪೊಲೀಸರು ಅಪರಿಚಿತ ವಾಹನ ಡಿಕ್ಕಿಯಾಗಿ ಸಾವು ಅಂತ ಕೇಸ್ ದಾಖಲಿಸಿದ್ದಾರೆ. ಆದರೇ ಯಾಕೋ ಪ್ರಕರಣದ ಸಂಬಂಧ ಅನುಮಾನ ಬಂದ ಹಿನ್ನಲೆಯಲ್ಲಿ ಪಾಂಡುವನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾಗ ತಂದೆಗೆ ಎಲ್ಐಸಿ ಪಾಲಿಸಿ ಮಾಡಿಸಿದ್ದಂತ ಹಣವನ್ನು ಪಡೆಯೋದಕ್ಕಾಗಿ ತಾನೇ ಹೊಡೆದು ಕೊಂದಿರುವ ವಿಷಯವನ್ನು ಬಾಯಿ ಬಿಟ್ಟಿದ್ದಾನೆ.
BREAKING: ಹುಬ್ಬಳ್ಳಿ ಸಿಲಿಂಡರ್ ಸ್ಪೋಟ ಕೇಸ್: ಮತ್ತೊಬ್ಬ ಅಯ್ಯಪ್ಪ ಮಾಲಾಧಾರಿ ಸಾವು, ಮೃತ ಸಂಖ್ಯೆ 4ಕ್ಕೆ ಏರಿಕೆ