ಬೆಳಗಾವಿ: ಪತ್ನಿಯ ಚಿಕಿತ್ಸೆಗಾಗಿ ಹಣ ಕೊಡದ ಸಿಟ್ಟಿನಿಂದಲೇ ಆಕೆಯ ತಾಯಿಯನ್ನೇ ಅಳಿಯ ಚಾಕುವಿನಿಂದ ಏಣ್ಣೆ ಏಟಲ್ಲಿ ಇರಿದು ಹತ್ಯೆ ಮಾಡಿರುವಂತ ಘಟನೆ ಬೆಳಗಾವಿಯ ಖಾಸಾಬಾಗ್ ನಲ್ಲಿ ನಡೆದಿದೆ.
ಬೆಳಗಾವಿಯ ಖಾಸಬಾಗ್ ನಲ್ಲಿ ಏಣ್ಣೆ ಏಟಲ್ಲಿ ಇಂದು ಸಂಕ್ರಾಂತಿಯ ಸಂದರ್ಭದಲ್ಲಿಯೇ ಅತ್ತೆಗೆ ಎಳ್ಳು ಬೆಲ್ಲ ಕೊಡೋದಕ್ಕೆ ತೆರಳಿದಂತ ಅಳಿಯ ಚಾಕುವಿನಿಂದ ಇರಿದು ಹತ್ಯೆ ಮಾಡಿರುವಂತ ಘಟನೆ ನಡೆದಿದೆ.
ಚಾಕು ಇರಿತಕ್ಕೆ ಒಳಗಾದಂತ ರೇಣುಕಾ ಶ್ರೀಧರ್ ಎಂಬಾಕೆ ಸ್ಥಳದಲ್ಲೇ ತೀವ್ರ ರಕ್ತಸ್ತ್ರಾವ ಉಂಟಾಗಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ಪತ್ನಿಯ ಚಿಕಿತ್ಸೆಗಾಗಿ ಅತ್ತೆ ರೇಣುಕಾ ಶ್ರೀಧರ್ ಗೆ ಹಣ ನೀಡುವಂತೆ ಅಳಿಯ ಶುಭಂ ಕಾಟ ಕೊಡುತ್ತಿದ್ದನಂತೆ. ಆದರೂ ಅತ್ತೆ ರೇಣುಕಾ ಹಣವನ್ನು ನೀಡಿರಲಿಲ್ಲವಂತೆ. ಇಂದು ಸಂಕ್ರಾಂತಿಯಂದು ಎಳ್ಳುಬೆಲ್ಲ ಕೊಡಲು ಹೋಗಿ, ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ. ಈ ಸಂಬಂಧ ಶಹಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BREAKING: ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಭೀಕರ ಸ್ಪೋಟ: 6 ಯೋಧರಿಗೆ ಗಾಯ
‘ಸ್ವರ್ಣ ಪ್ರಾಶನ’ ಮಕ್ಕಳ ಸದೃಢ ಆರೋಗ್ಯಕ್ಕೆ ಸಹಕಾರಿಯೇ? ಇಲ್ಲಿದೆ ಸಂಪೂರ್ಣ ಮಾಹಿತಿ | Swarna Bindu Prashana