ಮೈಸೂರು : ಮುಡಾ ಅಗರಣಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ದಾಖಲಾಗಿದೆ. ಇದೀಗ ಲೋಕಾಯುಕ್ತ ಎಸ್ ಪಿ ಉದೇಶ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ನಾಲ್ಕು ತಂಡಗಳನ್ನು ರಚನೆ ಮಾಡಿದ್ದಾರೆ.ಇದೆ ವೇಳೆ ಸಿದ್ದರಾಮಯ್ಯ ಎಲ್ಲವನ್ನು ಸಹಿಸಿಕೊಳ್ಳಬೇಕಾಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ. ಹಾಗಾದರೆ ಸಿದ್ದರಾಮಯ್ಯ ಏನು ಹೇಳಿದ್ದಾರೆ ಎಂಬುದರ ಮಾಹಿತಿ ಇಲ್ಲಿದೆ.
ಇಂದು ಮೈಸೂರು ವಿಶ್ವವಿದ್ಯಾನಿಲಯ ಮಾನಸಗಂಗೋತ್ರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ ಮತ್ತು ಕಲ್ಯಾಣ’ ಕೃತಿ ಬಿಡುಗಡೆಗೊಳಿಸಿ, ಸಂವಾದದಲ್ಲಿ ಪಾಲ್ಗೊಂಡು ಸಿಎಂ ಸಿದ್ದರಾಮಯ್ಯ ಮಾತನಾಡಿ, ಅವಕಾಶಗಳಿಂದ ವಂಚಿತರಾಗಿರುವವರಿಗೆ ಸಮಾನ ಅವಕಾಶಗಳು ಸಿಕ್ಕಾಗ ಸಮ ಸಮಾಜ ನಿರ್ಮಾಣ ಸಾಧ್ಯ. ಬಸವಾದಿ ಶರಣರು, ಬುದ್ದ ಕೂಡ ಸಮ ಸಮಾಜದ ಬಗ್ಗೆ ಹೇಳಿದ್ದಾರೆ. ಕೇವಲ ಭಾಷಣಳಿಂದ ಸಮ ಸಮಾಜದ ಆಶಯ ಈಡೇರಲ್ಲ. ಈ ಕಾರಣಕ್ಕೇ ಮೊದಲ ಬಾರಿ ಮುಖ್ಯಮಂತ್ರಿ ಆದಾಗಲೂ ಹಲವು ಭಾಗ್ಯಗಳನ್ನು ಜಾರಿ ಮಾಡಿದೆ.
ಆದರೂ ಕೂಡ ಗ್ಯಾರಂಟಿಗಳಲ್ಲಿ ಜಾರಿ ಮಾಡಿದಾಗ ಹಲವು ಟೀಕೆ ಮಾಡುತ್ತಿದ್ದರು. ಬಹಳಷ್ಟು ಜನರು ಟೀಕೆ, ತಮಾಷೆ, ಅವಹೇಳನ ಮಾಡಿದರು. ಕೆಲವೊಮ್ಮೆ ಎಲ್ಲವನ್ನು ಸಹಿಸಿಕೊಳ್ಳಬೇಕಾಗುತ್ತದೆ.ಅನ್ನಕ್ಕಾಗಿ ಯಾರ ಮನೆ ಮುಂದೆ ನಿಲ್ಲಬಾರದೆಂದು ಅನ್ನಭಾಗ್ಯ ಜಾರಿ ಮಾಡಲಾಯಿತು.ಅನ್ನ ಭಾಗ್ಯದಿಂದ ಜನ ಸೋಮಾರಿಯಾಗಿದ್ದಾರೆ ಎಂದು ಚರ್ಚೆಯಾಯಿತು. ಅನ್ನಭಾಗ್ಯ ಜಾರಿ ಮಾಡಿದ್ದು ಓಟು ಪ್ರಚಾರಕ್ಕಾಗಿ ಅಲ್ಲ. ಐದು ಕೆಜಿ ಅಕ್ಕಿ ಸಾಲಲ್ಲ ಎಂದು 10 ಕೆಜಿ ಕೊಡಬೇಕೆಂದು ತೀರ್ಮಾನಿಸಲಾಯಿತು.
ಮೋದಿ ಗ್ಯಾರಂಟಿ ಯೋಜನೆ ಜಾರಿ ಮಾಡಲು ಆಗಲ್ಲ ಎಂದಿದ್ದರು. ಗ್ಯಾರಂಟಿಯಿಂದ ರಾಜ್ಯ ಆರ್ಥಿಕವಾಗಿ ದಿವಾಳಿ ಅಂತ ಹೇಳಿದ್ದರು. ನಮಗೂ ಕಷ್ಟ ಅಂತ ಗೊತ್ತಿತ್ತು. ಆದರೂ ಜಾರಿ ಮಾಡಿದ್ದೇವೆ ಕೊಟ್ಟ ಮಾತಿನಂತೆ ಒಂದು ವರ್ಷದಲ್ಲಿ ಐದು ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ಎಂದು ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು.