ಬಳ್ಳಾರಿ : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಾಂತರ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಸಿಬಿಐ ಎಂಟ್ರಿ ಆಗಿದ್ದು, ಕಳೆದ ವಾರವಷ್ಟೇ ಬಳ್ಳಾರಿಯಲಿರುವ ಉದ್ಯಮಿಗಳ ಮನೆ ಮೇಲೆ ಸಿಬಿಐ ದಾಳಿ ಮಾಡಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿತ್ತು. ಇವರನ್ನು ಶಾಸಕ ಬಿ.ನಾಗೇಂದ್ರ ಆಪ್ತರು ಎಂದು ಹೇಳಲಾಗುತ್ತಿದೆ. ಈ ವಿಚಾರವಾಗಿ ಸಚಿವ ಸ್ಥಾನ ಇದುವರೆಗೂ ದೊರೆಯುವುದಕ್ಕೆ ಬಿ.ನಾಗೇಂದ್ರ ಅವರು ತಮ್ಮ ಆಪ್ತರ ಬಳಿ ಯಾರದೋ ಮಾಡಿದ ತಪ್ಪಿಗೆ ನನಗೆ ಯಾಕೆ ಈ ರಾಜಕೀಯ ಶಿಕ್ಷೆ ಅಂತ ಅಳಲು ತೋಡಿಕೊಂಡಿದ್ದಾರೆ.
ಹೌದು ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರಗೆ ಮತ್ತೆ ನಿರಾಸೆಯಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಪ್ರಕರಣಕ್ಕೆ ಈಗ ಸಿಬಿಐ ಎಂಟ್ರಿ ಕೊಟ್ಟಿದ್ದು ಆಪ್ತರ ಮುಂದೆ ಶಾಸಕ ಬಿ. ನಾಗೇಂದ್ರ ಮತ್ತೆ ಬೇಸರ ತೋಡಿಕೊಂಡಿದ್ದಾರೆ. ಯಾರದೋ ತಪ್ಪಿಗೆ ನನಗೆ ರಾಜಕೀಯ ಶಿಕ್ಷೆ ಅಂತ ಅಳಲು ತೋಡಿಕೊಂಡಿದ್ದಾರೆ. ವಾಲ್ಮೀಕಿ ನಿಗಮದ ವ್ಯವಹಾರದಲ್ಲಿ ಎಸ್ಐಟಿ ಇಡಿ ಬಳಿಕ ಎಂಟ್ರಿ ಆಗಿದೆ ಮತ್ತೊಮ್ಮೆ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ಒತ್ತಡ ಹಾಕುವ ಸಾಧ್ಯತೆ ಎನ್ನಲಾಗುತ್ತಿದೆ.
ಮುಂದಿನ ರಾಜಕೀಯ ನಿರ್ಧಾರದ ಬಗ್ಗೆ ಶಾಸಕ ಬಿ.ನಾಗೇಂದ್ರ ಆಪ್ತರ ಜೊತೆಗೆ ಚರ್ಚಿಸಿದ್ದಾರೆ ಸಚಿವ ಸ್ಥಾನ ನೀಡದಿದ್ದರೆ ಮುಂದಿನ ನಡೆಯ ಬಗ್ಗೆ ಆಪ್ತರ ಬಳಿ ಸಲಹೆ ಪಡೆಯಲಿದ್ದಾರೆ. ಒಂದು ವರ್ಷದಿಂದ ನಾಗೇಂದ್ರ ಸಚಿವ ಸ್ಥಾನಕ್ಕಾಗಿ ತುದಿಗಾಲಿನಲ್ಲಿ ನಿಂತಿದ್ದಾರೆ. ಹೈಕಮಾಂಡ್ ಸಚಿವ ಸ್ಥಾನ ಕೊಡುವುದಾಗಿ ಹೇಳಿ ನಿರಾಸೆ ಮೂಡಿಸಿದ್ದಾರೆ. ಈಗಾಗಲೇ ಐದಾರು ಬಾರಿ ನಾಗೇಂದ್ರಗೆ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿ ನಿರಾಸೆ ಮೂಡಿಸಿದ್ದಾರೆ. ಹಾಗಾಗಿ ರಾಜ್ಯ ನಾಯಕರ ಬಗ್ಗೆ ಆಪ್ತರ ಮುಂದೆ ಬಿ.ನಾಗೇಂದ್ರ ತೀವ್ರ ಬೇಸರ ಹೊರ ಹಾಕಿದ್ದಾರೆ.