ಬಾಗಲಕೋಟೆ : ತಿರುಪತಿ ಲಡ್ಡು ತಯಾರಿಕೆಯಲ್ಲಿ ದನದ ಕೊಬ್ಬು ಹಂದಿಯ ಮಾಂಸ ಹಾಗೂ ಮೀನನ ಎಣ್ಣೆ ಬಳಸಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸನಾತನ ಧರ್ಮವನ್ನು ಮುಗಿಸಲು ಕೆಲವರು ಹೊರಟಿದ್ದಾರೆ ಹಾಗಾಗಿ ನಾವೆಲ್ಲ ಒಂದಾಗಬೇಕು ಎಂದು ಹಿಂದೂಗಳಿಗೆ ಕರೆ ನೀಡಿದರು.
ಇಂದು ಅವರು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಜಕನೂರು ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸನಾತನ ಧರ್ಮ ಮುಗಿಸಲು ಕೆಲವರು ಹೊರಟಿದ್ದಾರೆ. ತಿರುಪತಿಯ ಬಾಲಾಜಿ ಮಂದಿರದಲ್ಲಿ ದನದ ಕೊಬ್ಬು, ಹಂದಿಯ ಕೊಬ್ಬು ಮತ್ತು ಮೀನಿನ ಎಣ್ಣೆ ಬಳಸಿ ಲಡ್ಡು ತಯಾರಿಸಲಾಗುತ್ತಿತ್ತು.
ಇಂದು ಆಘಾತಕಾರಿ ಸುದ್ದಿ ಬಂದಿದ್ದು, ಗುಜರಾತಿನ ಎಟಿಎಂಸಿ ಒಂದು ಇದನ್ನು ದೃಢಪಡಿಸಿದೆ ಆಹಾರ ಗುಣಮಟ್ಟ ಪರೀಕ್ಷಾ ಏಜೆನ್ಸಿಯೇ ಇದನ್ನು ದೃಢಪಡಿಸಿದೆ. ನಮ್ಮ ಧರ್ಮ ನಾಶ ಮಾಡಬೇಕು ಅಂತಿರುವ ಈ ವೇಳೆ ನಾವೆಲ್ಲ ಒಂದಾಗಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಕರೆ ನೀಡಿದರು.