ಚಿಕ್ಕಮಗಳೂರು : ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲಾ ಪಕ್ಷದ ಅಭ್ಯರ್ಥಿಗಳು ತಮ್ಮ ಕ್ಷೇತ್ರಗಳಲ್ಲಿ ಸಕ್ರಿಯವಾಗಿದ್ದಾರೆ ಅದೇ ರೀತಿಯಾಗಿ ಚಿಕ್ಕಮಗಳೂರಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕ್ಷೇತ್ರದಲ್ಲಿ ಇದೀಗ ಓಡಾಡಿಕೊಂಡಿದ್ದು, ಅವರಿಗೆ ಕೆಲವರು ಗೋ ಬ್ಯಾಕ್ ಶೋಭಾ ಎನ್ನುವ ಅಭಿಯಾನ ಮಾಡುವರ ಮೂಲಕ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
LIFE STYLE: ಟೂತ್‌ಪೇಸ್ಟ್ ಅನ್ನೂ ಹೀಗೂ ಬಳಬಹುದು! ನಿಮಗೆ ಗೊತ್ತಾ..?
ಈ ವಿಷಯವಾಗಿ ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲೂ ಇದೇ ರೀತಿ ಮಾಡಿದ್ದರು. ಈ ಬಾರಿ ಕೂಡ ಅದನ್ನೇ ಮಾಡುವುದಕ್ಕೆ ಹೊರಟಿದ್ದಾರೆ. ಕೆಲವರು ದುಡ್ಡಿನ ಮದದಿಂದ ಇಂತಹ ಕೆಲಸ ಮಾಡುತ್ತಿದ್ದಾರೆ ಎಂದು ಚಿಕ್ಕಮಗಳೂರಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಿಡಿ ಕಾರಿದರು.
ತೀವ್ರ ಬರ:ರಾಜ್ಯದಲ್ಲಿ ಹತ್ತೇ ತಿಂಗಳಲ್ಲಿ 692 ರೈತರು ಆತ್ಮಹತ್ಯೆಗೆ ಶರಣು
ಕೆಲಗಂಡಸರು ಅಧಿಕಾರ ನಮ್ಮ ಬಳಿ ಇರಬೇಕೆಂಬ ಭಾವನೆ ಇರುವುದರಿಂದ ದರ್ಪದಿಂದ ಇಂತಹ ಕೆಲಸವನ್ನು ಮಾಡಿಸುತ್ತಿದ್ದಾರೆ. ನಾನು ಪ್ರಾಮಾಣಿಕವಾಗಿ ನನ್ನ ಕೆಲಸವನ್ನು ಮಾಡಿದ್ದೇನೆ. ಇದಕ್ಕೆಲ್ಲ ಉತ್ತರ ನಾನು ಕೊಡುವುದಿಲ್ಲ ವರಿಷ್ಠರು ಕೊಡುತ್ತಾರೆ.ಯಾರು ಪತ್ರ ಬರೆದ್ರು ಯಾರು ಪೋಸ್ಟ್ ಮಾಡಿದ್ರು ಗೊತ್ತಿದೆ.ವರಿಷ್ಠರು ಎಲ್ಲಾ ವರದಿ ಧರಿಸಿಕೊಂಡಿದ್ದಾರೆ ಅವರೇ ಉತ್ತರಿಸುತ್ತಾರೆ ಎಂದು ಚಿಕ್ಕಮಗಳೂರಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
UPDATE : ರೈತನನ್ನು ಅಪಮಾನ ಮಾಡಿದ್ದ ಪ್ರಕರಣ : ಮೆಟ್ರೋ ಮೇಲ್ವಿಚಾರಕನನ್ನು ವಜಾಗೊಳಿಸಿ ‘BMRCL’ ಆದೇಶ
ಇನ್ನು ಗೋ ಬ್ಯಾಕ್ ಶೋಭಾ ಅಭಿಯಾನದ ಕುರಿತಾಗಿ ನಿನ್ನೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಬೆನ್ನಿಗೆ ನಿಂತಿದ್ದು ಅದಕ್ಕೆ ಯಾವುದೇ ರೀತಿಯಾಗಿ ಹೆದರುವ ಅವಶ್ಯಕತೆ ಇಲ್ಲ. ಕಳೆದ ಬಾರಿ ಕೂಡ ಶೋಭಾ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಹೀಗಾಗಿ ಈ ಬಾರಿಯೂ ಅವರೇ ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ. ಅವರ ಹಿಂದೆ ಷಡ್ಯಂತರ ಹಾಗೂ ಪಿತೂರಿ ನಡೆಯುತ್ತಿದೆ. ಅವರು ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.