ಮೈಸೂರು : ಮೈಸೂರಿನಲ್ಲಿ Mysore Dasara 2022ಇಂದು ಬೆಳಗ್ಗೆ 9 ಗಂಟೆಗೆ ‘ಗ್ರಾಮೀಣ ದಸರಾ’ಗೆ ಚಾಲನೆ ಸಿಗಲಿದ್ದು, ಬೆಳಗ್ಗೆ 9 ಗಂಟೆಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ನಿನ್ನೆ ನಡೆಯಬೇಕಿದ್ದ ಗ್ರಾಮೀಣ ದಸರಾಗೆ ಇಂದು ದಾರಿಪುರದ ದೇಗುಲದಲ್ಲಿ ಚಾಲನೆ ದೊರೆಯಲಿದ್ದು, ಸುಮಾರು 2 ಕಿಲೋ ಮೀಟರ್ ಅದ್ಧೂರಿ ಮೆರವಣಿಗೆ ನಡೆಯಲಿದೆ. ಸರ್ಕಾರದ ಯೋಜನೆಗಳ ಸ್ತಬ್ಧಚಿತ್ರ, ಸಾಂಸ್ಕೃತಿಕ ಕಲಾ ತಂಡಗಳು ಗ್ರಾಮೀಣ ದಸರಾ’ಗೆ ಇನ್ನಷ್ಟು ಮೆರುಗು ನೀಡಲಿದೆ.
ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಪುಷ್ಟಾರ್ಚನೆ ಮಾಡುವ ಮೂಲಕ ವೃಶ್ಚಿಕ ಲಗ್ನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿಶ್ವವಿಖ್ಯಾತ ಮೈಸೂರು ದಸರಾಗೆ ಚಾಲನೆ ನೀಡಿದ್ದು, ಮೈಸೂರಿನಲ್ಲಿ ದಸರಾ ಹಬ್ಬದ ಸಂಭ್ರಮ ಮನೆ ಮಾಡಿದೆ.
ರಾಜ್ಯದಲ್ಲಿ ದಸರಾ ಹಬ್ಬದ ಆಚರಣೆ ಜೋರಾಗಿದ್ದು, . ಅದರಲ್ಲೂ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿದೆ.ವಿಶ್ವವಿಖ್ಯಾತ ಮೈಸೂರು ದಸರಾ 2022 ಹಿನ್ನೆಲೆ ಈ ಬಾರಿ 41 ಸ್ತಬ್ದಚಿತ್ರಗಳಿಗೆ ಅವಕಾಶ ನೀಡಲಾಗಿದೆ.
ಪ್ರತಿ ಜಿಲ್ಲೆಯ ಒಂದು ಸ್ತಬ್ದಚಿತ್ರ. ಸ್ತಬ್ದಚಿತ್ರ ಉಪಸಮಿತಿಯಿಂದ 03, ಮೈಸೂರು ವಿವಿ 01, ಚೆಸ್ಕಾಂ 01, ಸಮಾಜ ಕಲ್ಯಾಣ ಇಲಾಖೆ 01, ಪ್ರವಾಸೋದ್ಯಮ ಇಲಾಖೆ 01, ಲಿಡಕರ್ 01, ಕೌಶಲ್ಯ ಕರ್ನಾಟಕ 01, ಕೆಎಂಎಫ್ 01, ಕಾವೇರಿ ನೀರಾವರಿ ನಿಗಮದ ಒಂದು ಸ್ತಬ್ಧಚಿತ್ರ, ಆಜಾದಿ ಕಾ ಅಮೃತ ಮಹೋತ್ಸವ ಸಾರುವ ಸ್ತಬ್ದಚಿತ್ರ ಸೇರಿ ಹಲವು ಸ್ತಬ್ದಚಿತ್ರಗಳು ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಜನರ ಗಮನ ಸೆಳೆಯಲಿದೆ.
ಬೆಂಗಳೂರಿಗರೇ ಗಮನಿಸಿ : ನಗರದ ಈ ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ |Power Cut