ಬೆಂಗಳೂರು: ನಾಡಿನೆಲ್ಲೆಡೆ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಜೋರಾಗಿದೆ. ಎರಡು ವರ್ಷಗಳ ಬಳಿಕ ಹಬ್ಬಕ್ಅದ್ಧೂರಿಯಾಗಿ ಆಚರಣೆ ಮಾಡಲು ಜನರು ತಯಾರಿಯಾಗಿದ್ದಾರೆ. ಆದರೆ ಈ ಬಾರಿ ದೀಪಾವಳಿಯಂದೇ ಸೂರ್ಯಗ್ರಹಣ ಸಂಭವಿಸಿದೆ.
ಬರೋಬ್ಬರಿ 27 ವರ್ಷಗಳ ಬಳಿಕ ದೀಪಾವಳಿಯ ದಿನ ಗ್ರಹಣ ಬಂದಿದ್ರೆ, ಇತ್ತ 3 ವರ್ಷಗಳ ಬಳಿಕ ಕೇತುಗ್ರಸ್ತ ಗ್ರಹಣ ಇಂದು ಸಂಭವಿಸಲಿದೆ. ಇನ್ನು 15 ದಿನಗಳ ಅಂತರದಲ್ಲೇ ಚಂದ್ರಗ್ರಹಣ ಕೂಡ ಇರೋದ್ರಿಂದ ಕುತೂಹಲದ ಜೊತೆಗೆ ಜನಸಾಮಾನ್ಯರಿಗೆ ಆತಂಕವೂ ಎದುರಾಗಿದೆ.ಸೂರ್ಯ ಗ್ರಹಣ ಹಿನ್ನೆಲೆ ಬೆಂಗಳೂರಿನಲ್ಲಿ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ದೇವಾಲಯ ಸಂಪೂರ್ಣ ಬಂದ್ ಆಗಿದ್ರೆ, ಕೆಲ ಜಿಲ್ಲೆಗಳಲ್ಲಿ ಭಕ್ತರಿಗೆ ದೇವಾಲಯ ದರ್ಶನಕ್ಕೆ ಅವಕಾಶ ನೀಡಿದ್ದಾರೆ.ಇಂದು ಬೆಳಗ್ಗೆ 6 ರಿಂದ ಬೆಳಗ್ಗೆ 8ರವರೆಗೆ ಮಾತ್ರ ದೇವಸ್ಥಾನ ಓಪನ್ ಆಗಲಿದ್ದು ಪುನಃ ಗ್ರಹಣ ಮುಗಿದ ಬಳಿಕ ಸಂಜೆ ದೇಗುಲದ ಬಾಗಿಲು ತೆರೆದು ಪೂಜೆ ಸಲ್ಲಿಸಲಾಗುತ್ತದೆ.
ಬೆಂಗಳೂರಿನ ಬಸವನಗುಡಿಯಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ದರ್ಶನಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗಿದೆ. ಇಂದು ಬೆಳಗ್ಗೆ 8ರಿಂದ ದೇಗುಲ ಬಂದ್ ಆಗಲಿದೆ.
ಇಂದು ಕೋಲಾರದ ಮುಜರಾಯಿ ದೇವಾಲಯಗಳಲ್ಲಿ ಭಕ್ತರಿಗೆ ನಿರ್ಬಂಧ ಹೇರಲಾಗಿದೆ. ಜಿಲ್ಲೆಯ ಪ್ರಮುಖ ದೇವಾಲಯಗಳಾದ ಕುರುಡುಮಲೆ ವಿನಾಯಕ, ಕೋಲಾರಮ್ಮ, ಬಂಗಾರು ತಿರುಪತಿ, ಚಿಕ್ಕತಿರುಪತಿ, ಸೋಮೇಶ್ವರ, ಹೊಲ್ಲಂಬಳ್ಳಿ ಚೌಡೇಶ್ವರಿ ದೇವಾಲಯ ಸೇರಿದಂತೆ ಎಲ್ಲಾ ಮುಜರಾಯಿ ದೇವಾಲಯಕ್ಕೆ ಮಧ್ಯಾಹ್ನ 12 ಗಂಟೆಯಿಂದ ಪ್ರವೇಶ ನಿರ್ಬಂಧಿಸಲಾಗಿದೆ. ಗ್ರಹಣ ಮೋಕ್ಷ ಕಾಲದ ನಂತರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತೆ ಎಂದು ತಹಶೀಲ್ದಾರ್ ನಾಗವೇಣಿ ಮಾಹಿತಿ ನೀಡಿದ್ದಾರೆ.
ಉತ್ತರಕನ್ನಡ ಜಿಲ್ಲೆ ಶಿರಸಿಯಲ್ಲಿ ಮಾರಿಕಾಂಬ ದೇವಸ್ಥಾನದಲ್ಲಿ ಹೊರಗಿನಿಂದ ಭಕ್ತರಿಗೆ ಅವಕಾಶ ನೀಡಲಾಗಿದೆ. ವಿಗ್ರಹ ಮೇಲಿದ್ದ ಆಭರಣ ತೆಗೆದು ದರ್ಶನಕ್ಕೆ ಮಾತ್ರ ಅವಕಾಶ ನೀಲಾಗಿದೆ.
ವಿಜಯಪುರದ ಸುಂದರೇಶ್ವರ ದೇವಸ್ಥಾನ, ರಾಮಮಂದಿರ ಬಂದ್ ಆಗಿದೆ. ಶನಿದೇವರ ದೇವಸ್ಥಾನವನ್ನು ಸಹ ಅರ್ಚಕರು ಬಾಗಿಲು ಮುಚ್ಚಿದ್ದಾರೆ. ಆದರೆ ಸಿದ್ದೇಶ್ವರ ದೇವಸ್ಥಾನದಲ್ಲಿ ಎಂದಿನಂತಯೇ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಗ್ರಹಣ ಸ್ಪರ್ಶದಿಂದ ಮೋಕ್ಷದವರೆಗೂ ಅಭಿಷೇಕ ನಡೆಯಲಿದೆ.
ಮೈಸೂರು ಚಾಮುಂಡಿ ಬೆಟ್ಟದಲ್ಲಿ ದರ್ಶನಕ್ಕೆ ಬಂದ್ ಮಾಡಿದ್ದಾರೆ. ನಾಳೆ ಬೆಳಗ್ಗೆಯಿಂದ ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ. ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನದ ಬಾಗಿಲು ಮುಚ್ಚಿದೆ. ಬೆಳಗಾವಿಯ ಕಪಿಲೇಶ್ವರ ದೇವಸ್ಥಾನದ ಬಾಗಿಲು ಕೂಡ ಬಂದ್ ಆಗಿದೆ. ಸಂಜೆ ೬.೩೦ ಕ್ಕೆ ಮಹಾಮೃತ್ಯುಂಜ ಜಪ ನಡೆಯಲಿದೆ. ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಮಂಡ್ಯದಲ್ಲಿ ನಿಮಿಷಾಂಬ ದೇವಸ್ಥಾನ, ರಂಗನಾಥ ಸ್ವಾಮಿ ದೇಗುಲ ಬಂದ್ ಆಗಲಿದೆ. ಮಧ್ಯಾಹ್ನ 12ರಿಂದ ಸಂಜೆ 7ರವರೆಗೆ ನಿಮಿಷಾಂಬ ದೇಗುಲ ಬಂದ್ ಆಗಿದ್ದು,
ಬೆಳಗ್ಗೆ 11ರಿಂದ ಸಂಜೆ 7.30ರವರೆಗೆ ರಂಗನಾಥಸ್ವಾಮಿ ದೇಗುಲ ಬಂದ್ ಆಗಿರಲಿದೆ. ಸೂರ್ಯ ಗ್ರಹಣ ಮುಗಿದ ಬಳಿಕ ಭಕ್ತರಿಗೆ ದೇಗುಲ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುತ್ತೆ.
ಸೂರ್ಯ ಗ್ರಹಣ ಹಿನ್ನಲೆ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ. ಇಂದು ಮತ್ತು ಬುಧವಾರ ಮಾತ್ರ ದರ್ಶನ ವ್ಯವಸ್ಥೆ ಮಾಡಲಾಗಿದೆ. ಗುರುವಾರ ಮಧ್ಯಾಹ್ನ 12 ಗಂಟೆಗೆ ಹಾಸನಾಂಬೆ ಗರ್ಭಗುಡಿ ಬಾಗಿಲು ಮುಚ್ಚಲಾಗುತ್ತೆ.