ಬೆಂಗಳೂರು: ಪ್ರತಿನಿತ್ಯ ಜನರಿಂದ ತುಂಬಿ ತುಳುಕುತ್ತಿದ್ದ ಜಾಗಗಳು ಇಂದು ಕೇತುಗ್ರಸ್ಥ ಸೂರ್ಯಗ್ರಹಣದ ಎಫೆಕ್ಟ್ ತಟ್ಟಿದಂತಾಗಿದ್ದು ಸಿಟಿಯಲ್ಲಿ ಜನರಿಲ್ಲದೇ ಖಾಲಿ ಖಾಲಿಯಾಗಿದೆ.
ಸೂರ್ಯ ಗ್ರಹಣದ ದಿನ ‘ಅಪ್ಪು’ ಸಮಾಧಿ ದರ್ಶನಕ್ಕೆ ಬಂದ ‘ಪುನೀತ್’ ಫ್ಯಾನ್ಸ್ |Puneeth Rajkumar
ಹೌದು ಕೇತುಗ್ರಸ್ಥ ಸೂರ್ಯಗ್ರಹಣ ಎಫೆಕ್ಟ್ ರಾಶಿಗಳ ಮೇಲೆ ಸಾಕಷ್ಟು ಪರಿಣಾಮ ಬೀರವು ಬಗ್ಗೆ ಹಲವು ಶಾಸ್ತ್ರ ತಜ್ಞರು ಅಭಿಪ್ರಾಯ ಪಟ್ಟಿದ್ದರು. ಆದರೆ ಗ್ರಹಣದ ಎಫೆಕ್ಟ್ ಕೇವಲ ರಾಶಿಗಳಿಗಷ್ಟೇ ಸೀಮಿತವಾಗದೇ, ಬದಲಾಗಿ ಪ್ರತಿನಿತ್ಯ ಚಟುವಟಿಕೆಯಿಂದ ಕೂಡಿರುತ್ತಿದ್ದ ಅನೇಕ ಕಡೆಗೂ ತಟ್ಟಿದೆ. ಗ್ರಹಣದ ಹಿನ್ನೆಲೆ ನಗರದಲ್ಲಿ ಜನರ ಓಡಾಟ ಹಲವೆಡೆ ವಿರಳವಾಗಿದ್ದ ಕಾರಣ ಬಹುತೇಕ ಜನನಿಬಿಡ ಪ್ರದೇಶಗಳು ನಿಶ್ಯಬ್ದವಾಗಿದೆಬೆಂಗಳೂರಿನ ಸಂಚಾರ ನಾಡಿಗೂ ಗ್ರಹಣದ ಎಫೆಕ್ಟ್ ಜೋರಾಗಿಯೇ ತಟ್ಟಿದೆ.
ಸೂರ್ಯ ಗ್ರಹಣದ ದಿನ ‘ಅಪ್ಪು’ ಸಮಾಧಿ ದರ್ಶನಕ್ಕೆ ಬಂದ ‘ಪುನೀತ್’ ಫ್ಯಾನ್ಸ್ |Puneeth Rajkumar
ಪ್ರತಿನಿತ್ಯ ಲಕ್ಷಾಂತರ ಜನ ಬಳಸುವ ಬಿಎಂಟಿಸಿ ಇಂದು ಖಾಲಿ, ಖಾಲಿ ಓಡಾಡುತ್ತಿದ್ದ ದೃಶ್ಯಗಳಂತು ಸಾಮಾನ್ಯವಾಗಿತ್ತು. ಹೋಟೆಲ್ಗಳ ಕಥೆಯು ಇದಕ್ಕೇನು ಹೊರತಾಗಿಲ್ಲ. ಗ್ರಹಣದ ನಡುವೆಯೂ ಹಲವರು ಬೆಳಗ್ಗೆಯೇ ಹೋಟೆಲ್ಗಳನ್ನ ತೆರೆದಿದ್ದರೂ, ಜನ ಮಾತ್ರ ಹೊಟೇಲ್ ನತ್ತ ಮುಖ ಮಾಡಿಲ್ಲ. ಗ್ರಹಣದ ಎಫೆಕ್ಟ್ ಬಗ್ಗೆ ಮುಂಚೆಯೇ ಯೋಚಿಸಿದ್ದ ಕೆಲ ಹೊಟೇಲ್ನವರು ಇತರೆ ದಿನಕ್ಕಿಂತ ಕಡಿಮೆ ಆಹಾರ ಸಿದ್ದತೆ ಮಾಡಿಸಿದರು. ವ್ಯಾಪಾರವಾಗದ ಕಾರಣ ಹೊಟೇಲ್ ಅನ್ನು ಬಂದ್ ಮಾಡಿ ಮನೆಗೆ ಹೋಗುವಂತಾಯಿತು.
ಸೂರ್ಯ ಗ್ರಹಣದ ದಿನ ‘ಅಪ್ಪು’ ಸಮಾಧಿ ದರ್ಶನಕ್ಕೆ ಬಂದ ‘ಪುನೀತ್’ ಫ್ಯಾನ್ಸ್ |Puneeth Rajkumar