ಬೆಂಗಳೂರು : ಆ ಮನುಷ್ಯನಿಗೆ ಸಾಬ್ರು ವೋಟ್ ಬೇಕು ಅಷ್ಟೇ. ಸಿದ್ದರಾಮಯ್ಯನವರು ತುಮಕೂರಿಗೆ ಬಂದು ನನ್ನ ವಿರುದ್ಧ ಸ್ಪರ್ಧೆ ಮಾಡಲಿ ನೋಡೋಣ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಕಿಡಿಕಾರಿದ್ದಾರೆ.
ಆರ್ ಎಸ್ ಎಸ್ ಬ್ಯಾನ್ ಮಾಡಬೇಕು ಎಂಬ ಸಿದ್ದರಾಮಯ್ಯರ ಹೇಳಿಕೆಗೆ ರಾಜ್ಯ ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಬಿಜೆಪಿ ನಾಯಕರು ಸಿದ್ದರಾಮಯ್ಯ ವಿರುದ್ಧ ತಿರುಗಿಬಿದ್ದಿದ್ದು, ಸಿದ್ದರಾಮಯ್ಯ ಭಾರೀ ಟೀಕೆಗೊಳಗಾಗಿದ್ದಾರೆ.
ಪಿಎಫ್ ಐ ಸಂಘನೆ ಬ್ಯಾನ್ ಸ್ವಾಗತಾರ್ಹ. ಕೇವಲ ಬ್ಯಾನ್ ಮಾಡಿದ್ರೆ ಆಗಲ್ಲ, ಎಲ್ಲಾರನ್ನು ಹುಡುಕಿ ಹುಡುಕಿ ಜೈಲ್ಗೆ ಹಾಕ್ಬೇಕು.ಓವೈಸಿಯನ್ನು ಬ್ಯಾನ್ ಮಾಡ್ಬೇಕು. ಎಂದು ಕಿಡಿಕಾರಿದರು.
ನಾನೊಬ್ಬ ಹಿಂದೂ ಅವರು ಇಲ್ಲಿಗೆ ಬಂದು ನಿಂತುಕೊಳ್ಳಲಿ. ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದವರು, ಎಲ್ಲಿ ಬೇಕಾದ್ರೂ ನಿಲ್ಲಬಹುದು, ತುಮಕೂರಿನಲ್ಲಿ ಸ್ಪರ್ಧೆ ಮಾಡಲಿ ಎಂದು ಸಿದ್ದರಾಮಯ್ಯಗೆ ಶಿವಣ್ಣ ಆಹ್ವಾನ ನೀಡಿದರು.
BREAKING NEWS: ಚಿಕ್ಕಮಗಳೂರಿನಲ್ಲಿ SDPI ಕಚೇರಿ ಮೇಲೆ ಪೊಲೀಸರ ದಾಳಿ; ದಾಖಲೆಗಳ ಪರಿಶೀಲನೆ | SDPI office raid
BIGG NEWS : ದೆಹಲಿಯಲ್ಲಿ ಫ್ಲೈಓವರ್ ಮೇಲೆ ಹುಟ್ಟುಹಬ್ಬ ಆಚರಣೆ : 21 ಮಂದಿಯ ಬಂಧನ