ನ್ಯೂಜೆರ್ಸಿ: ಸೋಮವಾರ ಫ್ಲೋರಿಡಾದ ಟ್ಯಾಂಪಾ ನಗರದಿಂದ ನ್ಯೂಜೆರ್ಸಿಗೆ ತೆರಳುತ್ತಿದ್ದ ಯುನೈಟೆಡ್ ವಿಮಾನದಲ್ಲಿ ಹಾವು ಕಾಣಿಸಿಕೊಂಡಿದ್ದು, ಪ್ರಯಾಣಿಕರು ಭಯಭೀತರಾಗಿರುವ ಘಟನೆ ನಡೆದಿದೆ.
ಯುನೈಟೆಡ್ ಫ್ಲೈಟ್ 2038ರಲ್ಲಿದ್ದ “ಗಾರ್ಟರ್ ಹಾವು”ವನ್ನು ವಿಮಾನ ನಿಲ್ದಾಣದ ವನ್ಯಜೀವಿ ಕಾರ್ಯಾಚರಣೆ ಸಿಬ್ಬಂದಿ ಮತ್ತು ಬಂದರು ಪ್ರಾಧಿಕಾರದ ಪೊಲೀಸ್ ಇಲಾಖೆ ಅಧಿಕಾರಿಗಳು ಹಿಡಿದು, ಕಾಡಿಗೆ ಅದನ್ನು ಸುರಕ್ಷಿತವಾಗಿ ಬಿಟ್ಟಿದ್ದಾರೆ ಎಂದು ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿಯ ಪೋರ್ಟ್ ಅಥಾರಿಟಿ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಯಾಣಿಕರಿಗೆ ಹಾಗೂ ಕಾರ್ಯಾಚರಣೆಗೆ ಯಾವುದೇ ತೊಂದರೆಯಾಗಿಲ್ಲ. ಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ. ಈ ಹಾವು ವಿಷಕಾರಿಯಲ್ಲ ಎಂದು ವರದಿಯಾಗಿದೆ.
SHOCKING NEWS: ಹೈದರಾಬಾದ್ನ ಶಾಲೆಯೊಂದರಲ್ಲಿ 4 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಪ್ರಾಂಶುಪಾಲ, ಬಸ್ ಚಾಲಕ ಅರೆಸ್ಟ್