ಕೋಝಿಕ್ಕೋಡ್ (ಕೇರಳ): ರೈಲಿನ ಕಂಪಾರ್ಟ್ಮೆಂಟ್ ಒಂದರಲ್ಲಿ ಹಾವೊಂದನ್ನು ಕಾಣಿಸಿಕೊಂಡ ಪರಿಣಾಮ ಒಂದು ಗಂಟೆಗೂ ಹೆಚ್ಚು ಕಾಲ ರೈಲನ್ನು ನಿಲುಗಡೆ ಮಾಡಿ ಹುಡುಕಿದರೂ ಸರೀಸೃಪ ಪತ್ತೆಯಾಗಿಲ್ಲದ ಘಟನೆ ಕೇರಳ ಕೋಝಿಕ್ಕೋಡ್ನಲ್ಲಿ ನಡೆದಿದೆ.
ತಿರುವನಂತಪುರಂ-ನಿಜಾಮುದ್ದೀನ್ ಎಕ್ಸ್ಪ್ರೆಸ್ನ ಕಂಪಾರ್ಟ್ಮೆಂಟ್ ಒಂದರಲ್ಲಿ ಹಾವೊಂದನ್ನು ಕಾಣಿಸಿಕೊಂಡಿದೆ. ಇದರಿಂದ ಗಾಬರಿಗೊಂಡ ಪ್ರಯಾಣಿಕರು ಟಿಕೆಟ್ ಪರೀಕ್ಷಕರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಹಾವನ್ನು ಹುಡುಕಲು ಕೇರಳದ ಕೋಝಿಕ್ಕೋಡ್ನಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ನಿಲುಗಡೆ ಮಾಡಿ ಹುಡುಕಿದರೂ ಸರೀಸೃಪ ಪತ್ತೆಯಾಗಿಲ್ಲ.
ಬುಧವಾರ ರಾತ್ರಿ ತಿರುರ್ ನಿಲ್ದಾಣದಿಂದ ಹೊರಟ ರೈಲಿನ ಎಸ್ 5 ಕಂಪಾರ್ಟ್ಮೆಂಟ್ನಲ್ಲಿ ಕೆಳಗಿನ ಬರ್ತ್ನ ಕೆಳಗೆ ಸಾಮಾನುಗಳ ನಡುವೆ ಹಾವು ಇದ್ದ ಬಗ್ಗೆ ಪ್ರಯಾಣಿಕರು ಟಿಕೆಟ್ ಪರೀಕ್ಷಕರಿಗೆ ಮಾಹಿತಿ ನೀಡಿದ್ದಾರೆ ಎಂದು ರೈಲ್ವೇ ಮೂಲಗಳು ತಿಳಿಸಿವೆ.
ಹಾವಿನ ಬಗ್ಗೆ ಸುದ್ದಿ ಹರಡುತ್ತಿದ್ದಂತೆ ರೈಲಿನಲ್ಲಿದ್ದ ಪ್ರಯಾಣಿಕರು ಭಯಭೀತರಾದರು. ಕೋಝಿಕ್ಕೋಡ್ ನಿಲ್ದಾಣದಲ್ಲಿ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ತಕ್ಷಣವೇ ಅವರು ಹಾವನ್ನು ಪತ್ತೆಹಚ್ಚಲು ಅರಣ್ಯ ಇಲಾಖೆಯ ತಜ್ಞರನ್ನು ವ್ಯವಸ್ಥೆ ಮಾಡಿದರು.
ರಾತ್ರಿ 10:15 ರ ಸುಮಾರಿಗೆ ಕೋಝಿಕ್ಕೋಡ್ ನಿಲ್ದಾಣದಲ್ಲಿ ಹಾವು ಕಂಡ ಕಂಪಾರ್ಟ್ಮೆಂಟ್ನಲ್ಲಿದ್ದ ಎಲ್ಲಾ ಪ್ರಯಾಣಿಕರು ರೈಲಿನಿಂದ ಕೆಳಗಿಳಿದರು ಮತ್ತು ಇಬ್ಬರು ಹಾವು ಹಿಡಿಯುವವರಿಂದ ಸಂಪೂರ್ಣ ಹುಡುಕಾಟ ನಡೆಸಲಾಯಿತು. ಆದ್ರೂ ಕೊನೆಗೂ ಹಾವು ಪತ್ತೆಯಾಗಲಿಲ್ಲ.
ಮಳೆ ನೀರಿನಿಂದ ಜಲಾವೃತವಾದ ಶಾಲೆ: ವಿದ್ಯಾರ್ಥಿಗಳು ನಿರ್ಮಿಸಿದ ʻಕುರ್ಚಿಗಳ ಸೇತುವೆʼ ಮೇಲೆ ಹಾದುಹೋದ ಶಿಕ್ಷಕಿ ಅಮಾನತು!
Rain In Karnataka : ವಾಯುಭಾರ ಕುಸಿತ : ರಾಜ್ಯದ ಹಲವು ಜಿಲ್ಲೆಗಳಲ್ಲಿ ಇನ್ನೂ ನಾಲ್ಕು ದಿನ ಭಾರೀ ಮಳೆ