ಬೆಂಗಳೂರು : ರಾಜ್ಯದ ಜನರಿಗೆ ಸರ್ಕಾರ ಮತ್ತೊಂದು ಶಾಕ್ ನೀಡಿದ್ದು ಈಗಾಗಲೇ ಮೆಟ್ರೋ ಕೆಎಸ್ಆರ್ಟಿಸಿ ಟಿಕೆಟ್ ದರ ಏರಿಕೆ ಮಾಡಿದ ಬೆನ್ನಲ್ಲೆ ರಾಜ್ಯದ 8 ಜಿಲ್ಲೆಗಳಲ್ಲಿ ವಿದ್ಯುತ್ ಸ್ಮಾರ್ಟ್ ಮೀಟರ್ ಅಳವಡಿಕೆಯನ್ನು ಬೆಸ್ಕಾಂ ಕಡ್ಡಾಯಗೊಳಿಸಿದೆ. ಇದೇ ವಿಚಾರವಾಗಿ ಬಿಜೆಪಿಯ ಮಾಜಿ ಸಚಿವ ಡಾ. ಅಶ್ವಥ್ ನಾರಾಯಣ್ ಇದರಲ್ಲಿ ಒಟ್ಟು 15,000 ಕೋಟಿ ಸ್ಕ್ಯಾಮ್ ನಡೆದಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಹೌದು ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯಗೊಳಿಸಿದ ಬೆಸ್ಕಾಂ, ಫೆಬ್ರವರಿ 15 ರಿಂದ ಅನ್ವಯ ಆಗುವಂತೆ ಆದೇಶ ಕೂಡ ಹೊರಡಿಸಿದೆ. ರಾಜ್ಯದ ಒಟ್ಟು 8 ಜಿಲ್ಲೆಗಳಲ್ಲಿ ಸ್ಮಾರ್ಟ್ ಮೀಟರ್ ಬಳಕೆ ಕಡ್ಡಾಯವಾಗಿದೆ ಕಡ್ಡಾಯವಾಗಿದೆ. ಈಗಾಗಲೇ ಮೆಟ್ರೋ ಮತ್ತು ಕೆಎಸ್ಆರ್ಟಿಸಿ ಬಸ್ ಟಿಕೆಟ್ ಪ್ರಯಾಣ ದರ ಏರಿಕೆ ಮಾಡಿದ ಬೆನ್ನೆಲು ಸರ್ಕಾರ ಗ್ರಾಹಕರ ಜೇಬಿಗೆ ಮತ್ತಷ್ಟು ಕತ್ತರಿ ಹಾಕಿದೆ.
ಇದು 15000 ಕೋಟಿಗೂ ಹೆಚ್ಚು ಸ್ಕ್ಯಾಮ್ ಆಗಿದೆ ಎಂದು ಬಿಜೆಪಿ ಶಾಸಕ ಡಾ. ಅಶ್ವತ್ ನಾರಾಯಣ್ ಗಂಭೀರವಾದ ಆರೋಪ ಮಾಡಿದ್ದಾರೆ. ಜನರ ಜೆಬಿನಿಂದಲೇ ಕಳ್ಳತನ ಮಾಡಲು ಹೊರಟಿದ್ದಾರೆ. ಸರ್ಕಾರ ಭಂಡತನದಿಂದ ವರ್ತಿಸುತ್ತಿದೆ. ಟೆಂಡರ್ ಟ್ಯಾಂಪರಿಂಗ್ ಕೂಡ ನಡೆದಿರುವ ಆರೋಪವಿದೆ. ಈ ಒಂದು ಸ್ಮಾರ್ಟ್ ಮೀಟರ್ ಅಳವಡಿಕೆಗೆ ಕಂಬ ಹಾಕುವವನಿಗೆ ಕೊಟ್ಟಿದ್ದಾರೆ ಎಂದು ಆರೋಪಿಸಿದರು.
ಸ್ಮಾರ್ಟ್ಮೀಟರ್‌ಗಳ ದರಗಳಲ್ಲಿ ಬೇರೆ ರಾಜ್ಯಗಳಿಗೂ ನಮಗೂ ಬಹಳ ವ್ಯತ್ಯಾಸವಿದೆ. ಒಂದು ಮೀಟರ್‌ಗೆ ನಮ್ಮಲ್ಲಿ 8,160 ರೂ. ತೆಗೆದುಕೊಳ್ಳುತ್ತಾರೆ. ನಮ್ಮಲ್ಲಿ ತಿಂಗಳಿಗೆ ಕೊಡುವ ದರ ಹತ್ತು ವರ್ಷಗಳಿಗೆ ಲೆಕ್ಕ ಹಾಕಿದರೆ ಪ್ರತೀ ಮೀಟರ್‌ಗೆ 17 ಸಾವಿರ ರೂ. ಆಗಲಿದೆ. ಬೇರೆ ರಾಜ್ಯಗಳಲ್ಲಿ 7,400 ರೂ.ಯಿಂದ 9,260 ಆಗಲಿದೆ. ಸ್ಮಾರ್ಟ್ಮೀಟರ್ ದರ, ಸಾಫ್ಟ್ವೇರ್ ನಿರ್ವಹಣೆ ದರ ಹಾಗೂ ಸಿಬ್ಬಂದಿ ವೇತನ ದರಗಳನ್ನು ಸೇರಿಸಿ ಹತ್ತು ವರ್ಷಕ್ಕೆ ಜನರಿಂದ ಸಂಗ್ರಹ ಮಾಡುತ್ತಿದ್ದಾರೆ ಎಂದರು.
ಸ್ಮಾರ್ಟ್ಮೀಟರ್‌ಗೆ ಗ್ಲೋಬಲ್ ಟೆಂಡರ್ ಕರೆಯಬೇಕಿತ್ತು. ಆದರೆ ಇವರು ಕರೆದಿಲ್ಲ. ಭಂಡತನದಿಂದ ಕಣ್ಮುಂದೆ ಸುಳ್ಳು ಹೇಳಿ ಅವ್ಯವಹಾರ ಮಾಡಿದ್ದಾರೆ. ರಾಜಶ್ರೀ, ಸಹ್ಯಾದ್ರಿ ಹಾಗೂ ವಿಆರ್ ಪಾಟೀಲ್ ಕಂಪನಿಗಳು ಬಿಡ್ ಹಾಕಿದ್ದವು. ಇವರ ಟೆಂಡರ್ ದಾಖಲೆ ಪ್ರಕಾರ ಒಂದೇ ಒಂದು ಕಂಪನಿ ಅರ್ಹವಾಗಿದ್ದು, ಅದೇ ರಾಜಶ್ರೀ ಕಂಪನಿ ಎಂದಿದ್ದಾರೆ. ನಾವು ರಾಜಕೀಯ ಪ್ರೇರಿತ ಆರೋಪ ಮಾಡುತ್ತಿಲ್ಲ. ಸತ್ಯ ಹೇಳಿದ್ದೀವಿ. ಸರ್ಕಾರ ಎಚ್ಚೆತ್ತುಕೊಳ್ಳಬೇಕು, ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಾವು ಬಿಸಿ ಮುಟ್ಟಿಸಬೇಕಾಗುತ್ತದೆ. ಹಗಲು ದರೋಡೆ ನಿಲ್ಲಿಸಬೇಕು, ಈಗ ಆಗಿರುವ ಟೆಂಡರ್ ರದ್ದು ಮಾಡಬೇಕು. ಮತ್ತೆ ನಿಯಮಾನುಸಾರ ಟೆಂಡರ್ ಕರೆಯಲಿ ಎಂದು ಆಗ್ರಹಿಸಿದರು.