ಬೆಂಗಳೂರು : ಕಿರುತೆರೆ ನಟಿ ವೈಷ್ಣವಿ ಗೌಡ ನಿಶ್ಚಿತಾರ್ಥದ ವಿವಾದ ಬೆನ್ನಲ್ಲೇ ವೈಷ್ಣವಿ ತಂದೆ ರವಿಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿ,ಉದ್ಯಮಿ ವಿದ್ಯಾಭರಣ ಬಗ್ಗೆ ಮೊದಲೇ ಗೊತ್ತಾಗಿದ್ದು ಒಳ್ಳೆಯದಾಯ್ತು. ಕಿರುತೆರೆ ನಟಿ ವೈಷ್ಣವಿ ಗೌಡ ಮದುವೆ ಕ್ಯಾನ್ಸಲ್ ಆಗಿದೆ. ಈ ಸಂಬಂಧ ಮುಂದುವರಿಯುವುದು ಬೇಡ, ನಮಗೂ ಈ ಬಗ್ಗೆ ಶಾಕ್ ಆಗಿ ಈ ವಿಚಾರ ಇಲ್ಲಿಗೆ ಬಿಟ್ಟುಬಿಡಿಪ್ರತಿಕ್ರಿಯಿಸಿದ್ದಾರೆ
ಈ ವಿಚಾರ ತಿಳಿದು ವೈಷ್ಣವಿ ರೂಂನಿಂದ ಹೊರ ಬಂದಿಲ್ಲ. ತುಂಬಾ ಫೆಡ್ ಅಪ್ ಆಗಿದ್ದಾರೆ. ನಮಗೂ ಕೂಡ ಈ ಬಗ್ಗೆ ಮೊದಲೂ ಏನೂ ಗೊತ್ತಿರಲಿಲ್ಲ. ಆಡಿಯೋ ಬಗ್ಗೆ ಟಿವಿಯಲ್ಲಿ ನೋಡಿದಾಗ ಗೊತ್ತಾಗಿದ್ದು. ಆ ಆಡಿಯೋ ಕೇಳಿ ತುಂಬಾ ಬೇಜಾರಾಗಿದೆ. ಜನವರಿಯಲ್ಲಿ ಎಂಗೇಜ್ಮೆಂಟ್ ಮಾಡಲು ತೀರ್ಮಾನ ಮಾಡಿದ್ದೇವು. ಸದ್ಯ ಇವಾಗ ಬೊಟ್ಟು ಇಡುವ ಶಾಸ್ತ್ರ ಮಾಡಿದ್ದೇವು.
ಯಾರೋ ಆಗದೇ ಇರೋರು ಈ ರೀತಿ ಮಾಡಿರಬಹುದು. ಇದು ನನ್ನ ಮಗಳ ಜೀವನ. ಅವಳಿಗೆ ಸಂಪೂರ್ಣ ನಿರ್ಧಾರಕ್ಕೆ ಬಿಟ್ಟಿದ್ದೇನೆ. ಅವಳು ಏನು ನಿರ್ಧಾರ ತಗೋತ್ತಾಳೆ ಅನ್ನೋದು ಅವಳಿಗೆ ಬಿಟ್ಟಿದ್ದು ಎಂದು ವೈಷ್ಣವಿ ತಂದೆ ಮಾತನಾಡಿದ್ದಾರೆ