ಬೆಂಗಳುರು : ಸಿಲಿಕಾನ್ ಸಿಟಿಯ 30ಕ್ಕಿಂತ ಹೆಚ್ಚು ಆಸನವಿರುವ ಹೋಟೆಲ್ಗಳಲ್ಲಿ ಸ್ಮೋಕಿಂಗ್ ಝೋನ್ ಮಾಡುವಂತೆ ಬಿಬಿಎಂಪಿ ಮಹತ್ವದ ಆದೇಶ ಹೊರಡಿಸಿದೆ
ಧೂಮಪಾನ ಮತ್ತು ಮಧ್ಯಪಾನ ಕೆಟ್ಟದ್ದು ಎಂದು ಗೊತ್ತಿದ್ದರೂ ಸಹ ಇಂದಿನ ಯುವಜನತೆ ಇದರ ದಾಸ್ಯಕ್ಕೆ ಒಳಗಾಗಿ ತಮ್ಮ ಜೀವನವನ್ನು ತಾವೇ ಕೈಯಾರೆ ಹಾಳು ಮಾಡಿಕೊಳ್ಳುತ್ತಿದ್ದಾರೆ. ಧೂಮಪಾನ ನಿಯಂತ್ರಣಕ್ಕಾಗಿ ಇದೀಗ ಬಿಬಿಎಂಪಿ ಹೊಸ ಪ್ಲ್ಯಾನ್ ಮಾಡಿದ್ದು, ಇನ್ಮುಂದೆ ಬೆಂಗಳೂರಿನ ಹೋಟೆಲ್ಗಳಲ್ಲಿ ಸ್ಮೋಕಿಂಗ್ ಝೋನ್ (Smoking Zone)ಕಡ್ಡಾಯ ಮಾಡಬೇಕೆಂದು ಆದೇಶ ನೀಡಿದೆ. ಹೋಟೆಲ್ ಎಂಟ್ರಿ ಕೊಡುವವರು ಇನ್ಮುಂದೆ ಯಾವುದೇ ಕಾರಣಕ್ಕೂ ಎಲ್ಲೆಂದರಲ್ಲಿ ಸ್ಕೂಕ್ ಮಾಡುವಂತಿಲ್ಲ ಇದನ್ನು ಕಡಿವಾಣ ಹಾಕೋದಕ್ಕೂ ಹೋಟೆಲ್ನವರಿಗೆ ಹೇಳೋದಕ್ಕೆ ಸಾಧ್ಯವಾಗುತ್ತಿರಲಿಲ್ಲ ಇದೀಗ ಬಿಬಿಎಂಪಿ ಬೆಂಗಳೂರಿನ ಹೋಟೆಲ್ಗಳಿಗೆ ಈ ನೋಟಿಸ್ ನೀಡಿದ್ದು, ಹೊಸ ನಿಯಮವನ್ನು ಜಾರಿಗೆ ತಂದಿದೆ.
ಬೆಂಗಳೂರು ಬಿಬಿಎಂಪಿ ಆದೇಶದಲ್ಲಿ ಕೆಲವೊಂದು ಅಂಶಗಳಿದ್ದು ಇಲ್ಲಿದೆ ಓದಿ
- 30ಕ್ಕಿಂತ ಹೆಚ್ಚು ಆಸನವಿರುವ ಹೋಟೆಲ್ಗಳಲ್ಲಿ ಸ್ಮೋಕಿಂಗ್ ಝೋನ್ ಕಡ್ಡಾಯ
- COTPA 2003ರ ಅಡಿಯಲ್ಲಿ ಪ್ರತ್ಯೇಕ ಸ್ಮೋಕಿಂಗ್ ಝೋನ್ ಮಾಡುವುದು ಕಡ್ಡಾಯ
- ಬಾರ್, ರೆಸ್ಟೋರೆಂಟ್, ಕಾಫಿ ಡೇಗಳಲ್ಲಿ ಕೂಡ ಸ್ಮೋಕಿಂಗ್ ಝೋನ್ ಮಾಡಬೇಕು
- ನಿಗದಿತ ಧೂಮಪಾನ ಪ್ರದೇಶ ಮೀಸಲಿಡುವುದು ಕಾನೂನಿನಲ್ಲಿ ಕಡ್ಡಾಯವಾಗಿದೆ
- ಸ್ಮೋಕಿಂಗ್ ಝೋನ್ ಮಾಡದೇ ಉದ್ಯಮ ನಡೆಸುತ್ತಿರುವ ಕಾನೂನಿನ ಉಲ್ಲಂಘನೆ
- ಶ್ರೀಘ್ರದಲ್ಲಿ ಸ್ಮೋಕಿಂಗ್ ಝೋನ್ ಮಾಡಬೇಕು ತಪ್ಪಿದ್ರೆ ಲೈಸೆನ್ಸ್ ರದ್ದು ಮಾಡಲಾಗುತ್ತೆ
- ಹೋಟೆಲ್ಗಳಿಗೂ ಈ ನಿಯಮ ಅನ್ವಯ ಅಂತ ಬಿಬಿಎಂಪಿಯಿಂದ ನೋಟಿಸ್https://kannadanewsnow.com/kannada/in-gadag-district-mask-price-is-out-of-control-negligence-of-market-customers-traders/
ಬಿಬಿಎಂಪಿ ನೋಟಿಸ್ ಬೆನ್ನಲ್ಲೆ ಇದೀಗ ಕೆಲ ಹೋಟೆಲ್ ಮಾಲೀಕರು ವಿರೋಧ ವ್ಯಕ್ತಪಡಿಸಲಾಗಿದೆ . ಮುಂದಿನ ದಿನಗಳಲ್ಲಿ ಸಿಲಿಕಾನ್ ಸಿಟಿಯ ಎಲ್ಲಾ ಹೋಟೆಲ್ಗಳು ಈ ಸ್ಲೋಕಿಂಗ್ ಝೋನ್ ನಿಯಮವನ್ನು ಪಾಲಿಸುತ್ತಾ ಅನ್ನೋದನ್ನು ಕಾದುನೋಡಬೇಕಾಗಿದೆ.