ಕೆಎನ್ ಎನ್ ನ್ಯೂಸ್ ಡೆಸ್ಕ್ : ಮೇಕಪ್ ಅಂದರೆ ಎಲ್ಲ ಹುಡುಗಿಯರಿಗೂ ತುಂಬಾನೇ ಇಷ್ಟ. ಅಷ್ಟೇ ಅಲ್ಲದೆ ಮೇಕಪ್ ಇಲ್ಲದೆ ಹುಡುಗಿಯರು ಹೊರಗೆ ಹೋಗುವುದಿಲ್ಲ. ಅದರಲ್ಲೂ ಹಳ್ಳಿ ಹೆಣ್ಣು ಮಕ್ಕಳ ಹತ್ರ ಮೇಕಪ್ ಕಿಟ್ ಇದ್ದೆ ಇರುತ್ತದೆ.
Bank Holidays 2022: ಆಗಸ್ಟ್ನಲ್ಲಿ ಬ್ಯಾಂಕ್ಗಳು ʻ18 ದಿನʼ ಬಂದ್: ಇಲ್ಲಿದೆ ರಜಾ ದಿನಗಳ ಪಟ್ಟಿ…
ಇನ್ನು ಬೆಳಗ್ಗೆ ಆಫೀಸ್ ಅಂತ ಕನ್ನಡಿ ಮುಂದೆ ಕುಳಿತುಕೊಂಡು ಮೇಕಪ್ ಹಚ್ಚಿ ಮನೆಯಿಂದ ಹೋಗುತ್ತಾರೆ. ಆದರೆ ಸಂಜೆ ಬರುವಷ್ಟರಲ್ಲಿ ಅವರಿಗೆ ಸುಸ್ತಾಗಿ ಆಗುತ್ತದೆ. ಇನ್ನುಕೆಲವರಂತೂ ನಿದ್ದೆಕಣ್ಣಿನಿಂದಲೇ ಮನೆಗೆ ಬಂದಿರುತ್ತಾರೆ. ಹೀಗಾಗಿ ಮೇಕಪ್ ರಿಮೂವ್ ಮಾಡುವ ಮೂಡ್ ಇಲ್ಲದೆ ಹಾಗೆಯೇ ಬಿದ್ದುಕೊಂಡು ನಿದ್ರೆಗೆ ಜಾರುತ್ತಾರೆ. ಆದರೆ ಹೀಗೆ ಮಾಡುವುದರಿಂದ ಅನೇಕ ಅಪಾಯ ಉಂಟಾಗುತ್ತದೆ. ಇಲ್ಲಿದೆ ಕೆಲ ಸಲಹೆಗಳು
Bank Holidays 2022: ಆಗಸ್ಟ್ನಲ್ಲಿ ಬ್ಯಾಂಕ್ಗಳು ʻ18 ದಿನʼ ಬಂದ್: ಇಲ್ಲಿದೆ ರಜಾ ದಿನಗಳ ಪಟ್ಟಿ…
ಮೊಡವೆಗಳು: ಮೇಕಪ್ ಹಾಕಿಕೊಂಡು ಮಲಗುವುದರಿಂದ ಮೊಡವೆಗಳು ಕಾಣಿಸಿಕೊಳ್ಳುತ್ತದೆ. ಇದರಿಂದ ಚರ್ಮದ ಮೇಲೆ ಪರಿಣಾಮ ಬೀರುತ್ತದೆ.
ಇದಲ್ಲದೆ, ಮುಖದಲ್ಲಿ ಎಣ್ಣೆಯಂಶ ಹೆಚ್ಚಾಗುತ್ತದೆ. ಬಳಿಕ ತುರಿಕೆಯೂ ಹೆಚ್ಚಾಗುತ್ತದೆ.
ಕಣ್ಣಿನ ಸೌಂದರ್ಯಕ್ಕೂ ತೊಂದರೆ: ಮೇಕಪ್ ತೆಗೆಯದೆ ಮಲಗುವುದು ಕಣ್ಣುಗಳ ಸುತ್ತಲಿನ ಚರ್ಮಕ್ಕೆ ತುಂಬಾ ಹಾನಿ ಉಂಟಾಗುತ್ತದೆ.
ಕಣ್ಣುಗಳ ಸುತ್ತಲಿನ ಪ್ರದೇಶವು ತುಂಬಾ ಸೂಕ್ಷ್ಮವಾಗಿರುವುದರಿಂದ, ಆ ಪ್ರದೇಶವನ್ನು ನಾವು ಸೂಕ್ಷ್ಮವಾಗಿಯೇ ಕಾಳಜಿ ವಹಿಸಬೇಕು.
ತುಟಿಗಳ ಕಾಳಜಿ ವಹಿಸಿ: ಲಿಪ್ ಸ್ಟಿಕ್ ಬಳಸುವ ಕ್ರೇಝ್ ಕೂಡಾ ನಮ್ಮವರಲ್ಲಿ ಹೆಚ್ಚು. ಕೆಲವೊಬ್ಬರು ದಿನಕ್ಕೆ ಹತ್ತಾರು ಬಾರಿ ಲಿಪ್ಸ್ಟಿಕ್ ಹಚ್ಚಿಕೊಳ್ಳುತಾರೆ. ಏನೇ ಇದ್ದರೂ, ಮಲಗುವ ಮೊದಲು ತುಟಿಗಳನ್ನು ಸ್ವಚ್ಛಗೊಳಿಸಿ. ಇಲ್ಲದಿದ್ದರೆ ತುಟಿಗಳು ಒಣಗುತ್ತವೆ.