ಯುಕೆ: 32 ವರ್ಷದ ಸ್ಕೈಡೈವರ್ ತನ್ನ ಗೆಳೆಯನಿಂದ ಬೇರ್ಪಟ್ಟ ಒಂದು ದಿನದ ನಂತರ 10,000 ಅಡಿ ಎತ್ತರದಿಂದ ಹಾರಿ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಡೈಲಿ ಮೇಲ್ ವರದಿ ತಿಳಿಸಿದೆ.
ಸುಮಾರು 400ಕ್ಕೂ ಹೆಚ್ಚು ಆಕಾಶದಿಂದ ಸ್ಕೈ ಡೈವ್ ಮಾಡಿದ್ದಂತ ಜೇಡ್ ಡಮರೆಲ್ ಎಂಬಾಕೆ ಸ್ಕೈ ಡೈವ್ ನಲ್ಲಿ ಅನುಭವಿಯಾಗಿದ್ದರು. 26 ವರ್ಷದ ಬೆನ್ ಗುಡ್ ಫೆಲೋದೊಂದಿಗೆ ಜೊತೆಗಿದ್ದಂತ ಆಕೆ, ಕೆಲ ದಿನಗಳ ನಂತ್ರ ಬೇರ್ಪಟ್ಟಿದ್ದರು. ಅದಕ್ಕೂ ಮೊದಲು ಆರು ತಿಂಗಳಿಗೂ ಹೆಚ್ಚು ಕಾಲ ಡೇಟಿಂಗ್ ನಲ್ಲಿ ಯುಕೆಯ ವಾಯುನೆಲೆ ಸಮೀಪದ ಪ್ಯಾರಾಚೂಟಿಸ್ಟ್ ಗಳಿಗಾಗಿ ಇದ್ದಂತ ಬಾಡಿಗೆಯ ಮನೆಯಲ್ಲಿ ವಾಸವಿದ್ದರು.
ಅವರಿಬ್ಬರು ಬೇರ್ಪಡುವುದೇ ಇಲ್ಲ ಎನ್ನುವಂತಿದ್ದಂತ ಜೇಡ್ ಡಮರೆಲ್ ಹಾಗೂ ಬೆನ್ ಗುಡ್ ಫೆಲೋ ಕೆಲ ದಿನಗಳ ಹಿಂದಷ್ಟೇ ದೂರಾಗಿದ್ದರು. ತಮ್ಮ ಸಂಬಂಧ ಕಡಿತಗೊಳಿಸಿದ್ದಂತ ಬೆನ್ ಗುಡ್ ಫೆಲೋ ಕೆಲಸಕ್ಕೆ ತೆರಳಿದ್ದರೇ, ಜೇಡ್ ಡಮರೆಲ್ ತನ್ನ ಸ್ಕೈ ಡೈವಿಂಗ್ ಸಾಹಸವನ್ನು ಮುಂದುವರೆಸಿದ್ದರು. ಆದರೇ ವಿಧಿಯಾಟವೇ ಬೇರೆಯಾಗಿತ್ತು.
ಬೆನ್ ಗುಡ್ ಫೆಲೋ ಬೇರ್ಪಟ್ಟ ದಿನವೇ ಸುಮಾರು 10,000 ಅಡಿಗಳ ಎತ್ತರದಿಂದ ಸ್ಕೈ ಡೈವಿಂಗ್ ಸಾಹಸವನ್ನು ಜೇಡ್ ಡಮರಲ್ ಮಾಡುವ ಯತ್ನಕ್ಕೆ ಇಳಿದಿದ್ದಳು. ಈ ವೇಳೆಯಲ್ಲೇ ಭೂಮಿಗೆ ಸಮೀಪಿಸುತ್ತಿದ್ದಂತ ವೇಳೆಯಲ್ಲೇ ತೆರೆದುಕೊಳ್ಳಬೇಕಿದ್ದಂತ ಪ್ಯಾರಾಚೂಟ್ ಮಾತ್ರ ತೆರೆಯಲೇ ಇಲ್ಲ. ಹೀಗಾಗಿ ಸ್ಕೈ ಡೈವಿಂಗ್ ಮಾಡಿದ್ದಂತ ಜೇಡ್ ಡಮರಲ್ ಫ್ಯಾರಾಚೂಟ್ ಕೈಕೊಟ್ಟಿದ್ದರಿಂದ ನೆಲಕ್ಕೆ ಬಿರುಗಾಳಿಯಂತೆ ಅಪ್ಪಳಿಸಿ ಸಾವನ್ನಪ್ಪಿದ್ದಾಳೆ ಎಂಬುದಾಗಿ ಸ್ನೇಹಿತರೊಬ್ಬರು ಡೈಲಿ ಮೇಲ್ ಗೆ ತಿಳಿಸಿದ್ದಾರೆ.
ಅಂದಹಾಗೇ ಇದು ಸಾವಲ್ಲ, ಆತ್ಮಹತ್ಯೆ ಎಂಬುದಾಗಿ ಹೇಳಲಾಗುತ್ತಿದೆ. ಗೆಳೆಯ ಬೆಲ್ ಗುಡ್ ಫೆಲೋನೊಂದಿಗೆ ಸಂಬಂಧ ಕಡಿದುಕೊಂಡ ಕಾರಣ, ಮನನೊಂದು ಜೇಡ್ ಡಮರೆಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಎಂದ ಸ್ನೇಹಿತರು
ಜೇಡ್ ಡಮರೆಲ್ ಸಾವಿಗೆ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಾರೆ ಎಂಬುದಾಗಿ ಆಕೆಯ ಸ್ನೇಹಿತರು ಹೇಳುತ್ತಿದ್ದಾರೆ. ಅಲ್ಲದೇ ಸ್ಕೈ ಡೈವಿಂಗ್ ವೇಳೆ ಪ್ಯಾರಾಚೂಟ್ ಕೈಕೊಟ್ಟು ಸಾವನ್ನಪ್ಪಿರೋದಲ್ಲ. ಇದೊಂದು ಉದ್ದೇಶ ಪೂರ್ವಕ ಕೃತ್ಯ ಎಂಬುದಾಗಿಯೂ ಆರೋಪಿಸಿದ್ದಾರೆ. ಆದರೂ ಯುಕೆಯ ಶಾಟನ್ ಕೊಲಿಯರಿಯಲ್ಲಿನ ವ್ರೆಪೋಡ್ ಫಾರ್ಮ್ ನಲ್ಲಿ ಆಕಾಶದಿಂದ ಫ್ಯಾರಾಚೂಟ್ ಕೈಕೊಟ್ಟ ಕಾರಣ ಕೆಳಗೆ ಬಿದ್ದ ಜೇಡ್ ಡಮರೆಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂಬುದಾಗಿ ಪೊಲೀಸರು ಹೇಳುತ್ತಿದ್ದು, ತನಿಖೆ ಮುಂದುವರೆದಿದೆ.
BIG NEWS : ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಉಚ್ಚಾಟನೆ ಮಾಡಲಾಗಿದೆ : ಬಿವೈ ವಿಜಯೇಂದ್ರ ಫಸ್ಟ್ ರಿಯಾಕ್ಷನ್
BREAKING: ಮರ ಬಿದ್ದು ಸೊರಬ-ಸಾಗರ ರಸ್ತೆ ಸಂಚಾರ ಬಂದ್: ಎಚ್ಚೆತ್ತುಕೊಳ್ಳದ ಅರಣ್ಯ ಇಲಾಖೆ