ಬೆಂಗಳೂರು : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಪ್ರಜ್ವಲ್ ರೇವಣ್ಣ ಅವರು ಜರ್ಮನಿಯ ಮ್ಯೂನಿಕ್ ವಿಮಾನ ನಿಲ್ದಾಣದಿಂದ ಹೊರಟಿದ್ದಾರೆ. ಮಧ್ಯರಾತ್ರಿ 12:30 ಕ್ಕೆ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ.
ಹಾಗಾಗಿ ಎಸ್ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಏರ್ಪೋರ್ಟ್ ಟರ್ಮಿನಲ್ ಒಳಗೆ ತೆರಳಲು ಪಾಸ್ ನೀಡುವಂತೆ ಎಸ್ ಎಸ್ಐಟಿ ಭದ್ರತಾ ಪಡೆಗೆ ಪತ್ರ ಬರೆದಿದೆ. 8 ರಿಂದ 10 ಅಧಿಕಾರಿಗಳಿಗೆ ಪಾಸ್ ನೀಡುವಂತೆ ಪತ್ರ ಬರೆಯಲಾಗಿದೆ ಎಂದು ಹೇಳಲಾಗುತ್ತಿದೆ.
ಇದೀಗ ಏರ್ಪೋರ್ಟ್ ನ ಟರ್ಮಿನಲ್ ನ ಇಮಿಗ್ರೇಶನ್ ವರೆಗೆ ಹೋಗಲು ಪಾಸ್ ವ್ಯವಸ್ಥೆ ಮಾಡಲಾಗುತ್ತಿದ್ದೂ, ಪಾಸ್ ನೀಡಿದ ನಂತರ ಏರ್ ಪೋರ್ಟ್ ಗೆ ಆಗಮಿಸುವ ಎಸ್ ಐ ಟಿ ಅಧಿಕಾರಿಗಳು. ರಾತ್ರಿ 10ರ ಸುಮಾರಿಗೆ ಕೆಐಎಬಿಗೆ ಎಸ್ಐಟಿ ಅಧಿಕಾರಿಗಳು ಆಗಮಿಸಲಿದ್ದಾರೆ. ಅಧಿಕಾರಿಗಳ ಆಧಾರ್ ಕಾರ್ಡ್ ಜೊತೆ ವಿವರಣೆ ನೀಡಿರುವ ಎಸ್ಐಟಿ ಪಾಸ್ ಮಾಡಿಕೊಡುವ ಕೆಲಸದಲ್ಲಿ ಇದೀಗ ಸಿಬ್ಬಂದಿಗಳು ನಿರತರಾಗಿದ್ದಾರೆ.