ಹಾಸನ : ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ಇಂದು ಹಾಸನದ ಹೊಳೆನರಸೀಪುರದಲ್ಲಿರುವ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಮನೆಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಈಗ ಸ್ಥಳೀಯ ಪೊಲೀಸ್ರು ಅವರ ಮನೆಗೆ ಭೇಟಿ ನೀಡಿದ್ದಾರೆ.
ಸಂತ್ರಸ್ಥರು ನೀಡಿದ ದೂರಿನ ಮೇರೆಗೆ ಇಂದು ಅವರ ಸಮ್ಮುಖದಲ್ಲಿಯೇ ಹೊಳೆನರಸೀಪುರದಲ್ಲಿರುವ ಎಚ್ ಡಿ ರೇವಣ್ಣ ಅವರ ಮನೆಯಲ್ಲಿ ಎಸ್ಐಟಿ ಅಧಿಕಾರಿಗಳು ಸ್ಥಳ ಮಹಜರು ನಡೆಸಲ್ಲಿದ್ದಾರೆ. ಹೀಗಾಗಿ ಸ್ಥಳೀಯ ಪಿಎಸ್ಐ ಅಜಯ್ ನೇತೃತ್ವದ ಪೊಲೀಸ್ ತಂಡ ಇದೀಗ ಅವರ ಮನೆಗೆ ಭೇಟಿ ನೀಡಿ ಭವಾನಿ ರೇವಣ್ಣ ಅವರ ಜೊತೆಗೆ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಂಸದರ ನಿವಾಸದ ಕೊಠಡಿಯಲ್ಲಿ ಅತ್ಯಾಚಾರ ಮಾಡಲಾಗಿದೆ ಎಂದು ಮಹಿಳಾ ಸಂತ್ರಸ್ಥೆ ಒಬ್ಬಳು ದೂರು ನೀಡಿದ್ದಾಳೆ. ಹೀಗಾಗಿ ಎಸ್ಐಟಿ ಅಧಿಕಾರಿಗಳು ಇಂದು ಹಾಸನ ಜಿಲ್ಲೆಯ ಆರ್ ಸಿ ರಸ್ತೆಯಲ್ಲಿರುವ ಸಂಸದರ ನಿವಾಸದಲ್ಲಿ ಕೂಡ ಇಂದು ದೂರು ನೀಡಿದ ಸಂತ್ರಾಸ್ತೆಯ ಮಹಿಳೆಯ ಸಮ್ಮುಖದಲ್ಲಿ ಸ್ಥಳ ಮಹಜರು ನಡೆಸಲಿದೆ ಆದರೆ ಅದಕ್ಕೂ ಮುನ್ನ ಇದೀಗ ಸಂಸದರ ನಿವಾಸಕ್ಕೆ ಪೊಲೀಸರು ಬೀಗ ಹಾಕಿದ್ದಾರೆ ಎಂದು ತಿಳಿದು ಬಂದಿದೆ.