ಮೈಸೂರು : ಸಾಂಸ್ಕೃತಿಕ ನಗರೀ ಎಂದೇ ಪ್ರಸಿದ್ಧಿ ಪಡೆದ ಮೈಸೂರಿನಲ್ಲಿ ನಂಜನಗೂಡಿನ ರಾಮಸ್ವಾಮಿ ಬಡಾವಣೆಯ 1ನೇ ಬ್ಲಾಕ್ನಲ್ಲಿ ಹಾಡಹಗಲೇ ಒಂಟಿ ಮಹಿಳೆಯ ಮನೆ ದರೋಡೆ ನಡೆಸಿರುವ ಅಘಾತಕಾರಿ ಘಟನೆ ನಡೆದಿದೆ.
ಮನೆಯಲ್ಲಿ ಯಾರು ಇಲ್ಲ ಸಂದರ್ಭದಲ್ಲಿ ಮನೆಗೆ ಅಪರಿಚಿತರು ಬಂದು ನಿಮಗೊಂದು ಪಾರ್ಸೆಲ್ ಇದೆ ಎಂದು ಹೇಳಿಕೊಂಡು ಮಹಿಳೆಗೆ ಬೆದರಿಸಿ, ಕೈಕಾಲು ಕಟ್ಟಿ,ಬಾಯಿಗೆ ಪ್ಲಾಸ್ಟರ್ ಅಂಟಿಸಿ ಮನೆಯಲ್ಲಿದ್ದ ಚಿನ್ನಾಭರಣ ದರೋಡೆ ನಡೆಸಿದ್ದಾರೆ. ಮಹಿಳೆಯ ಬಳಿಯಿದ್ದ ಮಾಂಗಲ್ಯ, ಸರ, ಬಳೆ ಉಂಗುರ, ನೆಕ್ಲೇಸ್ ತಲೆಬೊಟ್ಟು ಸೇರಿ ಒಟ್ಟು 175 ಗ್ರಾಂ ಚಿನ್ನಾಭರಣ ದರೋಡೆ ನಡೆಸಿ ದೋಚಿದ್ದಾರೆ.
ಪ್ರೌಢಶಾಲಾ ಶಿಕ್ಷಕ ಶಂಭು ಸ್ವಾಮೀ ಪತ್ನಿ ದಾಕ್ಷಾಯಿಣಿಗೆ ಸೇರಿದ ಮನೆಯಲ್ಲಿ ದರೋಡೆ ನಡೆಸಲಾಗಿದೆ . ಪೊಲೀಸರಿಗೆ ದರೋಡೆ ಬಗ್ಗೆ ಮಾಹಿತಿ ನೀಡಿದ್ದು, ದರೋಡೆಕೋರರು ಕನ್ನಡ, ತಮಿಳು, ಹಿಂದಿ ಮಾತನಾಡುತ್ತಿದ್ದರು, ಮುಸುಕು ಹಾಕಿಕೊಂಡು ಬಂದಿದ್ದರು ಎಂದು ಪೊಲೀಸರಿಗೆ ಮಾಹಿತಿ ತಿಳಿಸಿದ್ದರು.