ಬೆಂಗಳೂರು: ಕನ್ನಡಿಗರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಕೆಂಗಣ್ಣಿಗೆ ಗುರಿಯಾಗಿದ್ದಂತ ಖ್ಯಾತ ಗಾಯಕ ಸೋನು ನಿಗಮ್ ಅವರು ಇಷ್ಟಾದ್ರೂ ಕನ್ನಡಿಗರ ಕ್ಷಮೆಯನ್ನು ಮಾತ್ರ ಕೇಳಿಲ್ಲ. ಬದಲಾಗಿ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಈ ಬಗ್ಗೆ ವೀಡಿಯೋ ರಿಲೀಸ್ ಮಾಡಿರುವಂತ ಅವರು, ಕನ್ನಡ ಹಾಡು ಅನ್ನೋದಕ್ಕೂ ಬೆದರಿಕೆ ಹಾಕೋದಕ್ಕೂ ವ್ಯತ್ಯಾಸವಿದೆ. ಅವರು ನನಗೆ ಬೆದರಿಕೆ ಒಡ್ಡಿದ್ದರು ಎಂಬುದಾಗಿ ಹೇಳಿದ್ದಾರೆ.
ಎಲ್ಲಾ ಕಡೆಯೂ ಇಂಥ ನಾಲ್ಕು ಐದು ಕೆಟ್ಟ ಮಂದಿ ಇದ್ದೇ ಇರ್ತಾರೆ. ಅವರು ಬೆದರಿಕೆ ಒಡ್ಡುವ ರೀತಿಯಲ್ಲಿ ಹಾಡುವಂತೆ ಕೇಳಿದರು. ಕಾಶ್ಮೀರದಲ್ಲಿ ಉಗ್ರರು ಭಾಷೆ ಕೇಳಲಿಲ್ಲ, ಜಾತಿ ಕೇಳಿ ಕೊಂದರು. ಹಾಗಾಗಿ ನಾನು ಪಹಲ್ಗಾಮ್ ಘಟನೆಯನ್ನು ಉದಾಹರಿಸಿದೆ ಎಂಬುದಾಗಿ ವೀಡಿಯೋ ಮೂಲಕ ಸ್ಪಷ್ಟನೆಯನ್ನು ಗಾಯಕ ಸೋನು ನಿಗಮ್ ತಿಳಿಸಿದ್ದಾರೆ.
ಭೂಕಬಳಿಕೆದಾರರಿಂದ ಶೀಬಿ ಅರಣ್ಯಭೂಮಿ ರಕ್ಷಣೆಗೆ ಸಚಿವ ಈಶ್ವರ ಖಂಡ್ರೆ ಸೂಚನೆ
ದ್ವಿತೀಯ ಪಿಯುಸಿ ಪಾಸ್ ಆಗಿದ್ದೀರಾ.? ಈ ಫ್ಯಾಶನ್ ಡಿಸೈನ್ ಪದವಿ ಕೋರ್ಸ್ ಗೆ ಅರ್ಜಿ ಸಲ್ಲಿಸಿ