ಚಿಕ್ಕಬಳ್ಳಾಪುರ: ಮನೆ ಮಾರಿದ ಹಣದ ವಿಚಾರಕ್ಕಾಗಿ ಗಲಾಟೆಗೆ ಇಳಿದಂತ ಪುತ್ರನೊಬ್ಬ, ಜಗಳ ತಾರಕಕ್ಕೇರಿದಂತ ಸಂದರ್ಭದಲ್ಲಿ ದೊಡ್ಡಪ್ಪನನ್ನೇ ಹತ್ಯೆಗೈದ ಘಟನೆ ಚಿಂತಾಮಣಿಯ ಗುರ್ರಂಪಲ್ಲಿಯಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಗುರ್ರಂಪಲ್ಲಿಯಲ್ಲಿ ಮಾರಾಟ ಮಾಡಿದ ಮನೆ ಹಣಕಾಸಿನ ವಿಚಾರಕ್ಕೆ ದೊಡ್ಡಪ್ಪನನ್ನೇ ಹತ್ಯೆಯನನ್ನು ಪಾಪಿ ಪುತ್ರ ಮಧುಸೂದನ್ ಎಂಬಾತ ಮಾಡಿದ್ದಾನೆ.
ಹಣದ ವಿಚಾರಕ್ಕಾಗಿ ದೊಡ್ಡಪ್ಪ ನಾರಾಯಣಸ್ವಾಮಿ ಹಾಗೂ ಪುತ್ರ ಮಧುಸೂದನ್ ನಡುವೆ ಗಲಾಟೆಯಾಗಿದೆ. ಈ ವೇಳೆಯಲ್ಲಿ ನಾರಾಣಯಸ್ವಾಮಿಯನ್ನು ಮಧುಸೂದನ್ ತಳ್ಳಿದ್ದಾನೆ. ಈ ವೇಳೆ ಮನೆ ಗೇಟ್ ತಗುಲಿ ನಾರಾಯಣಸ್ವಾಮಿ ಸಾವನ್ನಪ್ಪಿದ್ದಾರೆ. ದೊಡ್ಡಪ್ಪ ನಾರಾಯಣಸ್ವಾಮಿ ಸಾವನ್ನಪ್ಪುತ್ತಿದ್ದಂತೆ ಮಧುಸೂದನ್ ಸ್ಥಳದಿಂದ ಪಾರಿಯಾಗಿದ್ದಾನೆ. ಈ ಸಂಬಂಧ ಕೆಂಚರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BREAKING : ಕೆಲಸದ ನಂತರ ಕರೆ-ಇಮೇಲ್ ಗೆ ಉತ್ತರಿಸುವ ಅಗತ್ಯವಿಲ್ಲ : ಸಂಸತ್ತಿನಲ್ಲಿ ಮಂಡನೆಯಾಯ್ತು ಹೊಸ ಮಸೂದೆ!








