ಬೆಂಗಳೂರು: ಆನ್ ಲೈನ್ ಗೇಮ್ ಆಡಲು ಮೊಬೈಲ್ ಕೊಡದ ಕಾರಣಕ್ಕೆ ಅಣ್ಣನೇ ತಮ್ಮನನ್ನು ಹತ್ಯೆಗೈದಿರುವಂತ ಘಟನೆ ಬೆಂಗಳೂರಿನ ಸರ್ಜಾಪುರದಲ್ಲಿ ನಡೆದಿದೆ.
ಬೆಂಗಳೂರಿನ ಹೊರ ವಲಯದ ಸರ್ಜಾಪುರದ ನೆರಿಗಾ ಗ್ರಾಮದ ಶಿವಕುಮಾರ್ (18) ಆನ್ ಲೈನ್ ಗೇಮಿನ ಹುಚ್ಚಿಗೆ ಬಿದ್ದಿದ್ದನು. ಈ ಗೇಮ್ ಆಡೋದಕ್ಕೆ ತಮ್ಮನಾದಂತ ಪ್ರಾಣೇಶ್(15) ಮೊಬೈಲ್ ಕೇಳಿದ್ದಾನೆ. ಆದ್ರೇ ತಮ್ಮ ಪ್ರಾಣೇಶ್ ಮೊಬೈಲ್ ಕೊಟ್ಟಿಲ್ಲ.
ಈ ವಿಚಾರವಾಗಿ ತಮ್ಮನ ಮೇಲೆ ಶಿವಕುಮಾರ್ ಸಿಟ್ಟುಗೊಂಡಿದ್ದನು. ತಮ್ಮ ಪ್ರಾಣೇಶ್ ಕೊಲೆ ಮಾಡೋ ಪ್ಲಾನ್ ಮಾಡಿದಂತ ಶಿವಕುಮಾರ್, ನಿರ್ಮಾಣ ಹಂತದ ಕಟ್ಟಡದಿಂದ ಸುತ್ತಿಗೆ ತೆಗೆದುಕೊಂಡು ಹೋಗಿದ್ದಾನೆ. ಪ್ರಾಣೇಶ್ ಬಹಿರ್ದೆಸೆಗೆ ಹೋಗಿದ್ದಾಗ ಆತನ ಮೇಲೆ ದಾಳಿ ಮಾಡಿ ಶಿವಕುಮಾರ್ ಸುತ್ತಿಗೆಯಿಂದ ಹೊಡೆದು ಹತ್ಯೆಗೈದಿದ್ದಾನೆ.
ಪ್ರಾಣೇಶ್ ಕಾಣದೇ ಇದ್ದ ಬಗ್ಗೆ ಪೋಷಕರು ಹುಡುಕಾಡಿದ್ದಾರೆ. ಆ ಬಗ್ಗೆ ಶಿವಕುಮಾರ್ ನನ್ನು ಕೇಳಿದ್ದಾರೆ. ಆದ್ರೇ ನನಗೇನು ಗೊತ್ತೇ ಇಲ್ಲ ಅನ್ನೋ ಹಾಗೆ ನಟನೆ ಮಾಡಿದ್ದಾನೆ. ಸರ್ಜಾಪುರ ಠಾಣೆಗೆ ದೂರು ನೀಡಿದಾಗ, ನರಿಗಾ ಗ್ರಾಮದ ಹೊರ ವಲಯದಲ್ಲಿ ಪ್ರಾಣೇಶ್ ಶವ ಪತ್ತೆಯಾಗಿದೆ. ಈ ಬಳಿಕ ಅಸಲಿ ಪೊಲೀಸರ ಸ್ಟೈಲಲ್ಲಿ ಶಿವಕುಮಾರ್ ವಿಚಾರಿಸಿದಾಗ ತಾನೇ ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಿರೋ ವಿಷಯ ಬೆಳಕಿಗೆ ಬಂದಿದೆ.
ಅಂದಹಾಗೇ ಚನ್ನಮ್ಮ ಮತ್ತು ಬಸವರಾಜ್ ಎಂಬುವರ ಪುತ್ರರೇ ಪ್ರಾಣೇಶ್, ಶಿವಕುಮಾರ್. ಮೂಲತಃ ಆಂಧ್ರ ಪ್ರದೇಶದ ಸೂಳೆಕೆರಿ ಗ್ರಾಮದವರಾಗಿದ್ದರು. ಕೆಲಸ ಅರಸಿಕೊಂಡು ಬಂದು, ಸರ್ಜಾಪುರದ ನೆರಿಗಾ ಗ್ರಾಮದಲ್ಲಿ ವಾಸಿಸುತ್ತಿದ್ದರು.
ಭಾರತದಲ್ಲಿ ನಾಲ್ವರಲ್ಲಿ ಒಬ್ಬರ ಮೇಲೆ ಸೈಬರ್ ದಾಳಿ: ಆತಂಕ ಮೂಡಿಸಿದ ವರದಿ