ಬೆಂಗಳೂರು : ಬೆಳಕಿನ ಹಬ್ಬ ದೀಪಾವಳಿ ಬಂದಿದ್ದು, ರಾಜ್ಯದಲ್ಲಿ ಎಲ್ಲೆಡೆ ಸಂಭ್ರಮ ಮನೆ ಮಾಡಿದೆ. ದೇಶದ ಹಲವು ಕಡೆ ಪಟಾಕಿ ಬ್ಯಾನ್ ಮಾಡಲಾಗಿದೆ. ಆದರೂ ಜನರು ಕದ್ದು ಮುಚ್ಚಿ ಪಟಾಕಿ ಹೊಡೆಯೋದು ಮಾತ್ರ ತಪ್ಪಿಲ್ಲ. ಪಟಾಕಿ ಸಿಡಿಸಲು ಹೋಗಿ ಏನಾದರೂ ಅಪಾಯ ತಂದುಕೊಳ್ಳುತ್ತಲೇ ಇರುತ್ತಾರೆ. ಆದ್ದರಿಂದ ಪಟಾಕಿ ಸಿಡಿಸುವುದಕ್ಕಿಂತ ಮುಂಚೆ ಪಟಾಕಿ ಸುಡುವಿಕೆಯಿಂದ ಉಂಟಾದ ಸುಟ್ಟಗಾಯಕ್ಕೆ ಹೇಗೆ ಚಿಕಿತ್ಸೆ ನೀಡಬೇಕು ಎಂಬ ಬಗ್ಗೆ ಗೊತ್ತಿದ್ದರೆ ಒಳ್ಳೆಯದು.
1) ಪಟಾಕಿಯಿಂದ ಸುಟ್ಟ ಗಾಯ ಉಂಟಾದರೆ ಆ ಭಾಗವನ್ನು ತಣ್ಣೀರಿಗೆ ಹಿಡಿಯಿರಿ. ಅಥವಾ ಆ ಪ್ರದೇಶಕ್ಕೆ ಕೋಲ್ಡ್ ಕಂಪ್ರೆಸ್ ಅನ್ನು ಆರಿಸಿಕೊಳ್ಳಿ. ಸುಟ್ಟ ಗಾಯವನ್ನು ತಂಪಾಗಿಸುವುದರಿಂದ ನೋವು, ಊತ ಕಡಿಮೆ ಮಾಡುತ್ತದೆ
2) ತೆಂಗಿನ ಎಣ್ಣೆಯು ಕೂಡ ಪಟಾಕಿ ಸುಟ್ಟ ಗಾಯಕ್ಕೆ ಉಪಶಮನಕಾರಿಯಾಗಿದೆ. ತೆಂಗಿನ ಎಣ್ಣೆಯು ವಿಟಮಿನ್ ಇ ಅನ್ನು ಹೊಂದಿರುತ್ತದೆ, ಇದು ಚರ್ಮದ ಮೇಲೆ ಸುಟ್ಟ ನಂತರದ ಗುರುತುಗಳನ್ನು ನಿಭಾಯಿಸಲು ಅತ್ಯುತ್ತಮವಾಗಿದೆ.
3) ಅಲೋವೆರಾ ಕೂಡ ಸುಟ್ಟಗಾಯಗಳಿಗೆ ಚಿಕಿತ್ಸೆ ನೀಡಲು ಉತ್ತಮವಾಗಿದೆ. ಅಲೋವೆರಾದ ಆಂಟಿ-ಬ್ಯಾಕ್ಟೀರಿಯಲ್ ಮತ್ತು ಉರಿಯೂತದ ಗುಣಲಕ್ಷಣಗಳು ಸುಟ್ಟಗಾಯಗಳ ಸುತ್ತ ರಕ್ತಪರಿಚಲನೆಯನ್ನು ಉತ್ತೇಜಿಸುತ್ತದೆ
4) ಸುಟ್ಟ ಗಾಯಗಳಿಗೆ ಜೇನುತುಪ್ಪವನ್ನು ಕೂಡ ಬಳಸಬಹುದಾಗಿದೆ. ಇದು ಮೊದಲ ಹಂತದ ಸುಟ್ಟಗಾಯಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
5) ಪಟಾಕಿ ಸಿಡಿತದಿಂದ ಕಣ್ಣಿಗೆ ಹಾನಿಯಾದರೆ ನೇರವಾಗಿ ಆಸ್ಪತ್ರೆಗೆ ಹೋಗಿ. ಗಾಯಗೊಂಡ ಕಣ್ಣಿಗೆ ಐ ಪ್ಯಾಡ್ ಅಥವಾ ಕ್ಲೀನ್ ಡ್ರೆಸ್ಸಿಂಗ್ ಅನ್ನು ಹಾಕಿಸಿಕೊಳ್ಳಿ. ವೈದ್ಯರನ್ನು ಕೇಳದೆ ಯಾವುದೇ ಕ್ರೀಮ್, ಲೋಷನ್ ಅಥವಾ ಉತ್ಪನ್ನವನ್ನು ಬಳಸಬೇಡಿ. ಅಲ್ಲದೆ, ವೈದ್ಯರು ಸೂಚಿಸಿದ ನಂತರವೇ ನಿವಾರಕಗಳನ್ನು ಬಳಸಬೇಕು.
6) ಸುಟ್ಟ ಪ್ರದೇಶದ ಮೇಲೆ ಸ್ವಚ್ಛ ಮತ್ತು ಒದ್ದೆ ಬಟ್ಟೆ ಹಾಕುವುದು, ನೋವು ಮತ್ತು ಊತವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಪ್ರತಿ 5 ರಿಂದ 15 ನಿಮಿಷಗಳ ಕಾಲ ಸುಟ್ಟ ಗಾಯಕ್ಕೆ ನೀವು ಕೋಲ್ಡ್ ಕಂಪ್ರೆಸ್ ಅನ್ನು ಅನ್ವಯಿಸಬಹುದು. ನೀವು ಮತ್ತು ನಿಮ್ಮ ಮಕ್ಕಳು ದೀಪಾವಳಿಯಂದು ಜಾಗ್ರತೆಯಿಂದ ಪಟಾಕಿ ಸಿಡಿಸಿ ಆರೋಗ್ಯಕರವಾಗಿ ದೀಪಾವಳಿ ಆಚರಿಸಿ.
ಹಸಿರು ಪಟಾಕಿ ಕೂಡ ಸುರಕ್ಷಿತವಲ್ಲ..!
ಹಸಿರು ಪಟಾಕಿಯಲ್ಲಿ ರಾಸಾಯನಿಕ ಅಂಶ ಇರುವುದಿಲ್ಲ, ಕಣ್ಣು, ಮೈಕೈ ಭಾಗಕ್ಕೆ ಹಾನಿಯಾಗುವುದಿಲ್ಲ ಎಂಬ ತಪ್ಪು ಕಲ್ಪನೆಗಳಿವೆ, ಆದರೆ ತಜ್ಞರ ಪ್ರಕಾರ ಹಸಿರು ಪಟಾಕಿಯಿಂದ ಕೂಡ ಸಾಕಷ್ಟು ಅಪಾಯಗಳಿದೆಯಂತೆ. ಹಸಿರು ಪಟಾಕಿ ಹೆಸರಲ್ಲಿ ಸಾಮಾನ್ಯ ಪಟಾಕಿಯೇ ಹೆಚ್ಚು ಮಾರಾಟವಾಗುತ್ತಿರುವುದು ಆಘಾತಕಾರಿ ವಿಷಯವಾಗಿದೆ.
ಹಸಿರು ಪಟಾಕಿಗಳು ಮಾಲಿನ್ಯ ಕಡಿಮೆ ಮಾಡಬಹುದೇ ಹೊರತು ಕಣ್ಣಿನ ಹಾನಿ ಪ್ರಮಾಣವಲ್ಲ. ಹಸಿರು ಪಟಾಕಿಗಳು ಸಿಡಿದಾಗ ಬರುವ ಬೆಂಕಿ ಕಿಡಿ, ಉಷ್ಣ ಪ್ರಮಾಣ ಸಾಮಾನ್ಯ ಪಟಾಕಿಯಂತೆಯೇ ಇರುತ್ತದೆ. ಸಿಡಿದಾಗ ರಾಸಾಯನಿಕಗಳು ಕಣ್ಣಿಗೆ ಸೇರಿದರೆ ದೃಷ್ಟಿಕಳೆದುಕೊಳ್ಳುವ ಸಾಧ್ಯತೆಗಳಿರುತ್ತವೆ. ಹೀಗಾಗಿ, ಹಸಿರು ಪಟಾಕಿಯಿಂದ ಯಾವುದೇ ತರಹದ ಹಾನಿಯಾಗುವುದಿಲ್ಲಎಂಬ ತಪ್ಪು ಕಲ್ಪನೆ ಬೇಡ ಎನ್ನುತ್ತಾರೆ ನುರಿತ ನೇತ್ರ ತಜ್ಞರು.
ಹಸಿರು ಪಟಾಕಿಯಿಂದ ಹೆಚ್ಚು ಹಾನಿಯಾಗದು ಎಂಬ ಮನೋಭಾವ ಬೇಡ. ಹಸಿರು ಪಟಾಕಿಗಳೂ ರಾಸಾಯನಿಕ ಒಳಗೊಂಡಿವೆ. ಇದರಿಂದ ಅಪಾಯವಿಲ್ಲಎಂದು ಯಾವುದೇ ಅಧ್ಯಯನ ತಿಳಿಸಿಲ್ಲ. ಹೀಗಾಗಿ, ಪಟಾಕಿ ಸಿಡಿಸುವಾಗ ಜಾಗರೂಕರಾಗಿರಬೇಕು ಎಂದು ಮಿಂಟೋ ಕಣ್ಣಾಸ್ಪತ್ರೆಯ ನಿರ್ದೇಶಕಿ ಡಾ. ಸುಜಾತಾ ರಾಥೋಡ್ ತಿಳಿಸಿದ್ದಾರೆ.
ಮೇಲುಕೋಟೆಗೆ ಬರುವ ಭಕ್ತರೇ ಗಮನಿಸಿ : ಗ್ರಹಣದ ದಿನ ದೇವರ ದರ್ಶನಕ್ಕಿಲ್ಲ ಅವಕಾಶ |Melukote Temple
HEALTH TIPS: ‘ಮಲಬದ್ಧತೆ’ ಸಮಸ್ಯೆಗೆ ಕಾರಣಗಳೇನು? ಇದರ ಲಕ್ಷಣ ಹಾಗೂ ಪರಿಹಾರಗಳೇನು? ಇ್ಲಲಿದೆ ಅಗತ್ಯ ಮಾಹಿತಿ
ಮೇರೆ ಮೀರಿದ ವಿಕೃತಿ ; ಸ್ನೇಹಿತನ ಜೊತೆಯೋದ ‘ಯುವತಿ’ ಮೇಲೆ 10 ಪಾಪಿ ಯುವಕರಿಂದ ಗ್ಯಾಂಗ್ ರೇಪ್
BIGG NEWS : ‘ದೀಪಾವಳಿ’ ಹಬ್ಬಕ್ಕೂ ಮುನ್ನವೇ ಬೆಂಗಳೂರಿನಲ್ಲಿ ದುರಂತ : ‘ಪಟಾಕಿ’ ಸಿಡಿದು ಇಬ್ಬರ ಕಣ್ಣಿಗೆ ಗಂಭೀರ ಗಾಯ