ಬೆಂಗಳೂರು : ಸಿಲಿಕಾನ್ ಸಿಟಿ ಜನರೇ ಎಚ್ಚರ..! ನಿಮ್ಮ ಮನೆಯಲ್ಲಿ ಮಗುವಿನಂತೆ ನೋಡಿಕೊಳ್ಳುವ ಸಾಕು ಶ್ವಾನಗಳನ್ನು ಮನೆಯಿಂದ ಆಚೆ ಬಿಡುವಾಗ ಸ್ವಲ್ಪ ಹುಷಾರ್.. ಯಾಕೆಂದ್ರೆ ಇದೀಗ ಮಕ್ಕಳ ಕಳ್ಳರಂತೆ ನಾಯಿಗಳಿಗೆ ಬಿಸ್ಕೇಟ್ ಹಾಕುವ ಮೂಲಕ ಕಳ್ಳತನ ಮಾಡುವವರು ಮಾರತಹಳ್ಳಿಯ ಬಿಆರ್ ಲೇಔಟ್ನಲ್ಲಿ ಪತ್ತೆಯಾಗಿದೆ
BIG NEWS : ಶೂನ್ಯ ಸಹಿಷ್ಣುತೆ ವಿಧಾನದಿಂದ ಮಾತ್ರ ಭಯೋತ್ಪಾದನೆಯನ್ನು ಸೋಲಿಸಲು ಸಾಧ್ಯ: ರುಚಿರಾ ಕಾಂಬೋಜ್
ಮಾರತಹಳ್ಳಿಯ ಬಿಆರ್ ಲೇಔಟ್ನಲ್ಲಿ ಒಂದು ವಾರದ ಹಿಂದೆ 38 ಕೆ.ಜಿ ತೂಕವಿರುವ, ಒಂದುವರೆ ವರ್ಷದ ಗೋಲ್ಡನ್ ರಿಟ್ರೀವರ್ ತಳಿಯ ನಾಯಿಯನ್ನು ಖದೀಮ ಕದ್ದು ಎಸ್ಕೇಪ್ ಆಗಿದ್ದು, ನೋಡುವಾಗ ನಾಯಿ ಪ್ರೇಮಿಯಂತಿದ್ರೂ ಆತನ ಕಳ್ಳತನ ದೃಶ್ಯಗಳು ಸಿಸಿಟಿವಿಯಲ್ಲಿ ಪತ್ತೆಯಾಗಿದ್ದು, ಆತ ಕೇವಲ ಬಿಸ್ಕೆಟ್ ಹಾಕುವ ಮೂಲಕ ಕಳ್ಳತನ ಮಾಡುತ್ತಾನೆಂಬ ಅಸಲಿ ಸತ್ಯ ಗೊತ್ತಾಗಿದೆ. ಈ ಬಗ್ಗೆ ಇದೀಗ ಘಟನೆ ಬಳಿಕ ಶ್ವಾನದ ಮಾಲೀಕ ಮಾರತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ.
BIG NEWS : ಶೂನ್ಯ ಸಹಿಷ್ಣುತೆ ವಿಧಾನದಿಂದ ಮಾತ್ರ ಭಯೋತ್ಪಾದನೆಯನ್ನು ಸೋಲಿಸಲು ಸಾಧ್ಯ: ರುಚಿರಾ ಕಾಂಬೋಜ್