ಮೈಸೂರು : ಕನ್ನಡ ಚಿತ್ರರಂಗದಲ್ಲಿ ಡಾ.ರಾಜಕುಮಾರ್ ಕಾಲದಿಂದಲೂ ಅನೇಕ ಹಾಸ್ಯ ಕಲಾವಿದರು ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಇದೀಗ ಕನ್ನಡ ಚಿತ್ರರಂಗದ ಮತ್ತೊಬ್ಬ ಹೊಸ ಹಾಸ್ಯ ನಟ ಹಾಗೂ ಹಲವು ಚಿತ್ರಗಳಲ್ಲಿ ನಾಯಕನಾಗಿ ಅಭಿನಯಿಸಿರುವ ಚಿಕ್ಕಣ್ಣ ಸೈಲೆಂಟಾಗಿ ಹಸೆಮಣೆ ಏರಲು ಸಜ್ಜಾದ್ದಾರೆ.
ಹೌದು ಹಾಸ್ಯನಟ ಚಿಕ್ಕಣ್ಣ ಸದ್ದಿಲ್ಲದೇ ಹಸಮಣೆ ಏರಲು ಸಜ್ಜಾಗಿದ್ದಾರೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಯುವತಿಯ ಜೊತೆ ಚಿಕ್ಕಣ್ಣ ಹಸಮಣೆ ಏರಲಿದ್ದಾರೆ.
ಮಹದೇವಪುರ ಗ್ರಾಮದ ಪಾವನಾ ಎಂಬ ಯುವತಿಯ ಜೊತೆ ಚಿಕ್ಕಣ್ಣ ಮದುವೆ ನಿಶ್ಚಯವಾಗಿದೆ. ಈಗಾಗಲೇ ಹೂ ಮುಡಿಸುವ ಶಾಸ್ತ್ರವನ್ನು ಎರಡು ಕುಟುಂಬಗಳು ನೇರವೇರಿಸಿರಿವೆ. ನಿಶ್ಚಿತಾರ್ಥ ಮತ್ತು ಮದುವೆ ದಿನಾಂಕ ಮುಂದಿನ ವಾರ ನಿಗದಿಯಾಗಲಿದೆ.