ಬೆಂಗಳೂರು: ರಾಜ್ಯದಲ್ಲಿ ಪ್ರತ್ಯೇಕವಾಗಿ ಮಾದಕ ವಸ್ತುಗಳ ವಿರೋಧಿ ಕಾರ್ಯಪಡೆ ಘಟಕವನ್ನು ಸೃಜಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಮೂಲಕ ರಾಜ್ಯದಲ್ಲಿ ಮಾದಕ ವಸ್ತುಗಳ ನಿಯಂತ್ರಣಕ್ಕೆ ಮಹತ್ವದ ಕ್ರಮವನ್ನು ಕೈಗೊಂಡಿದೆ.
ಈ ಕುರಿತಂತೆ ಒಳಾಡಳಿತ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅವರು ನಡವಳಿ ಹೊರಡಿಸಿದ್ದು, ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು ಇವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ರಾಜ್ಯದಲ್ಲಿ ಮಾದಕ ವಸ್ತುಗಳ ವಿರೋಧಿ ಕಾರ್ಯಪಡೆ” (Anti Narcotic Task Force) ಘಟಕವನ್ನು 388 ವಿವಿಧ ದರ್ಜೆಯ ಹುದ್ದೆಗಳೊಂದಿಗೆ ಸೃಜಿಸಲು ಆವರ್ತಕ ವೆಚ್ಚ ರೂ.28,96,91,534/- ತಗಲುವುದಾಗಿ ತಿಳಿಸಲಾಗಿದ್ದ ಪ್ರಸ್ತಾವನೆಯನ್ನು ಪರಿಷ್ಕರಿಸಿ, ಪ್ರಸ್ತಾಪಿತ “ಮಾದಕ ವಸ್ತುಗಳ ವಿರೋಧಿ ಕಾರ್ಯಪಡೆ’ (Anti Narcotic Task Force) ಘಟಕವನ್ನು ಡಿಜಿಪಿ/ಎಡಿಜಿಪಿ (ಸಿಡಿಎನ್) ರವರ ಅಧೀನದಲ್ಲಿ ಕೇಂದ್ರಸ್ಥಾನದಲ್ಲಿ ಕೆಳಕಂಡ ವಿವಿಧ ದರ್ಜೆಯ 74 ಕಾರ್ಯಕಾರಿ/ಲಿಪಿಕ ಮತ್ತು 10 ತಾಂತ್ರಿಕ ಹುದ್ದೆಗಳೊಂದಿಗೆ ಸೃಜಿಸುವುದು ಅವಶ್ಯವಿದ್ದು, ಸದರಿ “ಮಾದಕ ವಸ್ತುಗಳ ವಿರೋಧಿ ಕಾರ್ಯಪಡೆ” (Anti Narcotic Task Force) ಘಟಕವು ಒಟ್ಟಾರೆಯಾಗಿ ಡಿಜಿ ಮತ್ತು ಐಜಿಪಿರವರ ಅಧೀನದಲ್ಲಿ ಕಾರ್ಯನಿರ್ವಹಿಸುವುದೆಂದು ತಿಳಿಸಿರುತ್ತಾರೆ.
ವಿವರಿಸಲಾದ ಹುದ್ದೆಗಳಲ್ಲಿ 02-ಪಿ.ಐ, 04-ಪಿ.ಎಸ್.ಐ, 20-ಸಿ.ಹೆಚ್.ಸಿ, 30-ಸಿ.ಪಿ.ಸಿ ಅಂದರೆ ಒಟ್ಟು 56 ಹುದ್ದೆಗಳ ಮಂಜೂರಾತಿ ಬಲವನ್ನು ನಕ್ಸಲ್ ನಿಗ್ರಹ ಪಡೆ (ಎ.ಎನ್.ಎಫ್) ಘಟಕದಿಂದ ಪ್ರಸ್ತಾಪಿತ “ಮಾದಕ ವಸ್ತುಗಳ ವಿರೋಧಿ ಕಾರ್ಯಪಡೆ’ (Anti Narcotic Task Force) ಘಟಕಕ್ಕೆ ಸ್ಥಳಾಂತರಿಸುವಂತೆ ಕೋರಿರುತ್ತಾರೆ.
ಜಿಲ್ಲಾ ನಗರ ಪೊಲೀಸ್ ಘಟಕಗಳಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸಿ.ಇ.ಎನ್ ಪೊಲೀಸ್ ಠಾಣೆಗಳು ಆಯಾ ಘಟಕಗಳ ವ್ಯಾಪ್ತಿಯಲ್ಲಿ ಮಾದಕ ದ್ರವ್ಯ ನಿಗ್ರಹ ಜಾರಿ ವಿಭಾಗಗಳಾಗಿ ಕಾರ್ಯನಿರ್ವಹಿಸಲು ಹಾಗೂ ಆಯಾ ಜಿಲ್ಲಾ ನಗರ ಪೊಲೀಸ್ ಘಟಕಗಳ ಸಹಾಯಕ ಅಭಿಯೋಗ ನಿರ್ದೇಶಕರು (Assistant Director of Prosecution) ಘಟಕಕ್ಕೆ ಸಂಬಂಧಿಸಿದ ಕಾನೂನಾತ್ಮಕ ವಿಷಯಗಳಲ್ಲಿ ಸಹಾಯಕರಾಗಿ ಕಾರ್ಯನಿರ್ವಹಿಸಲು ಪ್ರಸ್ತಾಪಿಸಿರುತ್ತಾರೆ.
ನಕ್ಸಲ್ ನಿಗ್ರಹ ಪಡೆ (ಎ.ಎನ್.ಎಫ್) ಘಟಕದಿಂದ ವರ್ಗಾಯಿಸಲು ಪ್ರಸ್ತಾಪಿಸಿರುವ 56 ಹುದ್ದೆಗಳನ್ನು ಹೊರತುಪಡಿಸಿ, ವಿವಿಧ ದರ್ಜೆಯ 28 ಹುದ್ದೆಗಳ ಸೃಜನೆಗೆ ವಾರ್ಷಿಕವಾಗಿ ಅಂದಾಜು ರೂ.277,86,556/-ಗಳ ಆವರ್ತಕ ವೆಚ್ಚವಾಗುವುದಾಗಿ ತಿಳಿಸಿ, “ಮಾದಕ ವಸ್ತುಗಳ ವಿರೋಧಿ ಕಾರ್ಯಪಡೆ” (Anti Narcotic Task Force) ಘಟಕವನ್ನು ಅವಶ್ಯಕ ಹುದ್ದೆಗಳೊಂದಿಗೆ ಸೃಜಿಸಿ, ಸರ್ಕಾರದ ಮಂಜೂರಾತಿ ನೀಡುವಂತೆ ಕೋರಿರುತ್ತಾರೆ.
ಮೇಲೆ ಓದಲಾದ (2)ರ ಆದೇಶದಲ್ಲಿ, ಕರ್ನಾಟಕ ರಾಜ್ಯದಲ್ಲಿ ಹೊಸದಾಗಿ ಸೈಬರ್ ಅಪರಾಧ ತಡೆ ಘಟಕವನ್ನು (Cyber Crimes Prevention Unit) ಸ್ಥಾಪಿಸಿ, 43 ಸಿ.ಇ.ಎನ್ ಪೊಲೀಸ್ ಠಾಣೆಗಳನ್ನು ಸೈಬರ್ ಅಪರಾಧ ಪೊಲೀಸ್ ಠಾಣೆಗಳೆಂದು (Cyber Crime Police Station) ಎಂದು ಮರುಪದನಾಮಿಕರಿಸಿ ಆದೇಶಿಸಲಾಗಿದೆ. ಉಳಿದಂತೆ ನಾರ್ಕೋಟಿಕ್ಸ್ ಮತ್ತು ಆರ್ಥಿಕ ಅಪರಾಧಗಳನ್ನು ಸಿ.ಇ.ಎನ್ ಪೊಲೀಸ್ ಠಾಣೆಗಳಿಂದ ಬೇರ್ಪಡಿಸಿ, ಸಿ.ಇ.ಎನ್ ಪೊಲೀಸ್ ಠಾಣೆಗಳಲ್ಲಿ 10 ನಿಯಮ/ಅಧಿನಿಯಮಗಳಡಿಯಲ್ಲಿ ಪ್ರಕರಣ ದಾಖಲಿಸುವ ಅಧಿಕಾರವನ್ನು ಹಿಂಪಡೆದು, ಸದರಿ ನಿಯಮ/ಅಧಿನಿಯಮಗಳಡಿಯಲ್ಲಿನ ಪಕರಣಗಳನ್ನು ವ್ಯಾಪ್ತಿಗನುಗುಣವಾಗಿ ಸಂಬಂಧಿತ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಠಾಣೆಗಳಲ್ಲಿ ನಿರ್ವಹಿಸಲು ಸೂಚಿಸಿದೆ.
ಮೇಲೆ ಓದಲಾದ (3)ರ ಅಧಿಸೂಚನೆಯಲ್ಲಿ ಸೈಬರ್ ಅಪರಾಧ ಪೊಲೀಸ್ ಠಾಣೆಗಳಲ್ಲಿ ಕೇವಲ Information Technology Act-2000 IPC/BNS de ದಾಖಲಾಗುವ ಪಕರಣಗಳನ್ನು ಮಾತ್ರ ದಾಖಲಿಸಲು ಹಾಗೂ ತನಿಖೆ ಕೈಗೊಳ್ಳಲು ಅಧಿಕಾರ ನೀಡಿ, ವ್ಯಾಪ್ತಿ ನಿಗದಿಪಡಿಸಿ ಅಧಿಸೂಚನೆ ಹೊರಡಿಸಲಾಗಿದೆ.
ಮುಂದುವರೆದು, ನಕ್ಸಲ್ ನಿಗ್ರಹ ಪಡೆ (Anti Naxal Force) ಘಟಕದಲ್ಲಿ ಪ್ರಸ್ತುತ ಉಳಿಕೆಯಾಗಿರುವ ವಿವಿಧ ದರ್ಜೆಯ 376 ಹುದ್ದೆಗಳಲ್ಲಿ, ಮಾದಕ ವಸ್ತುಗಳ ವಿರೋಧಿ ಕಾರ್ಯಪಡೆ (Anti Narcotic Task Force) ಘಟಕಕ್ಕೆ ಅವಶ್ಯವಿರುವ 02-ಪಿ.ಐ (ಸಿವಿಲ್), 04- ಪಿ.ಎಸ್.ಐ (ಸಿವಿಲ್), 20-ಸಿ.ಹೆಚ್.ಸಿ 30-ಸಿ.ಪಿ.ಸಿ ಅಂದರೆ ಒಟ್ಟು 56 ಹುದ್ದೆಗಳನ್ನು ವರ್ಗಾಯಿಸಿದ ನಂತರ ನಕ್ಸಲ್ ನಿಗ್ರಹ ಪಡೆ (Anti Naxal Force) ಘಟಕದಲ್ಲಿ ವಿವಿಧ ದರ್ಜೆಯ ಒಟ್ಟು 320 ಹುದ್ದೆಗಳು ಉಳಿಕೆಯಾಗಲಿದೆ.
ಪುಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಠಾಣೆಗಳಲ್ಲಿ ನಾರ್ಕೋಟಿಕ್ಸ್ ಸಂಬಂಧ ದಾಖಲಾಗುವ ಪ್ರಕರಣಗಳ ಮೇಲ್ವಿಚಾರಣೆಗಾಗಿ ಮಾದಕ ವಸ್ತುಗಳ ವಿರೋಧಿ ಕಾರ್ಯಪಡೆ (Anti Narcotic Task Force) ಘಟಕವನ್ನು ಕೆಳಕಂಡ 10 ಹುದ್ದೆಗಳೊಂದಿಗೆ ಸೃಜಿಸಲು ಮತ್ತು ಸದರಿ ಘಟಕಕ್ಕೆ ಅವಶ್ಯವಿರುವ ಕೆಳಕಂಡ 02-ಪಿ.ಐ (ಸಿವಿಲ್), 04-ಪಿ.ಎಸ್.ಐ (ಸಿವಿಲ್) 20-ಸಿ.ಹೆಚ್.ಸಿ, 30-ಸಿ.ಪಿ.ಸಿ ಅಂದರೆ ಒಟ್ಟು 56 ಹುದ್ದೆಗಳನ್ನು ನಕ್ಸಲ್ ನಿಗ್ರಹ ಪಡೆ (Anti Naxal Force) ಘಟಕದಿಂದ ವರ್ಗಾಯಿಸಲು ಹಾಗೂ ಮಾದಕ ವಸ್ತುಗಳ ವಿರೋಧಿ ಕಾರ್ಯಪಡೆ (Anti Narcotic Task Force) ಘಟಕವು ಒಟ್ಟಾರೆಯಾಗಿ ಡಿಜಿ ಮತ್ತು ಐಜಿಪಿರವರ ಅಧೀನದಲ್ಲಿ ಕಾರ್ಯನಿರ್ವಹಿಸುವಂತೆ ಮತ್ತು ಡಿ.ಜಿ. ಸೈಬರ್ ಕಮಾಂಡ್‌ರವರಿಗೆ ಕಾರ್ಯವರದಿ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ.
BIG NEWS: ಸಾಗರ ತಾಯಿ ಮಕ್ಕಳ ಆಸ್ಪತ್ರೆ ‘ಜನರೇಟರ್ ಕಳ್ಳತನ’ ಕೇಸ್: ಆರೋಗ್ಯ ಇಲಾಖೆ ‘ಕಚೇರಿ ಅಧೀಕ್ಷಕ’ನೇ ಸಾಥ್
ಮತಗಳ್ಳತನ ಆರೋಪ: ಕಾಂಗ್ರೆಸ್ ವಿರುದ್ಧ ಸಂಸದ ಡಾ.ಸಿಎನ್ ಮಂಜುನಾಥ್ ವಾಗ್ಧಾಳಿ