ಬೆಂಗಳೂರು : ಕೆಂಪೇಗೌಡರ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮ ರಾಜಕೀಯ ವಲಯದಲ್ಲಿ ಸಾಕಷ್ಟು ಟೀಕೆಗೆ ಕಾರಣವಾಗಿದೆ. ಬಿಜೆಪಿ ವಿರುದ್ಧ ಕಾಂಗ್ರೆಸ್-ಜೆಡಿಎಸ್ ಅಸಮಾಧಾನ ಹೊರ ಹಾಕಿದೆ.
ಇದೀಗ ಈ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಪ್ರೋಟೋಕಾಲ್ ಪ್ರಕಾರ ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರು ಇರಬೇಕಿತ್ತು ಎಂದಿದ್ದಾರೆ.
ನಾನೊಬ್ಬ ವಿಧಾನಸಭೆ ವಿಪಕ್ಷ ನಾಯಕ, ಶಿಷ್ಟಾಚಾರದ ಪ್ರಕಾರ ಆಹ್ವಾನ ಪತ್ರಿಕೆಯಲ್ಲಿ ಸಿಎಂ, ಸ್ಪೀಕರ್, ರಾಜ್ಯಪಾಲರ ಜೊತೆ ನನ್ನ ಹೆಸರು ಇರಬೇಕಿತ್ತು ಎಂದಿದ್ದಾರೆ.
ಸಿಎಂ ತಮಗೆ ಕರೆ ಮಾಡಿದ್ದ ವಿಚಾರ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ‘ ಹಿಂದಿನ ಸಂಜೆ ಏಳು ಗಂಟೆ ಹೊತ್ತಿಗೆ ಸಿಎಂ ಕರೆ ಮಾಡಿದ್ದರು, ಆಗ ನಾನು ಆಹ್ವಾನ ಪತ್ರಿಕೆಯಲ್ಲಿ ಹೆಸರೇ ಇಲ್ಲ ಅಂದೆ, ಆದರೂ ಹೋಗುತ್ತಿದ್ದೆ, ಬೇರೆ ಮೀಟಿಂಗ್ ಇರುವ ಕಾರಣ ಬರಲು ಆಗಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
BREAKING NEWS: ದೈವಾರಾಧನೆ ವಿರುದ್ಧ ಅವಹೇಳನಕಾರಿ ಹೇಳಿಕೆ: ಮಾಜಿ ಸಚಿವೆ ಬಿ.ಟಿ ಲಲಿತಾ ನಾಯಕ್ ವಿರುದ್ಧ ದೂರು ದಾಖಲು