ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ಅವರ ‘ ಸಿದ್ದರಾಮಯ್ಯ 75’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಬ್ರಾಹ್ಮಣರನ್ನು ಗುರಿಯಾಗಿಸಿಕೊಂಡು ಅವಹೇಳನ ಮಾಡಲಾಗಿದೆ ಎಂದು ಬ್ರಾಹ್ಮಣ ಸಮುದಾಯದವರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯರ ಕಾರ್ಯಕ್ರಮದಲ್ಲಿ ಬ್ರಾಹ್ಮಣರ ಕುರಿತು ಅವಹೇಳನ ಹೇಳಿಕೆ ನೀಡಲಾಗಿದೆ., ಬ್ರಾಹ್ಮಣ ಸಮುದಾಯದವರನ್ನೇ ಗುರಿಯಾಗಿಸಿಕೊಂಡು ಮಾತನಾಡಲಾಗಿದೆ ಎಂದು ಬ್ರಾಹ್ಮಣ ನಿಗಮ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ನ.17 ರಂದು ( ನಾಳೆ) ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದಾರೆ.
ಸಿದ್ದರಾಮಯ್ಯ-75 ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪುಸ್ತಕದ ಲೇಖಕ , ಸಿದ್ದರಾಮಯ್ಯ ಆಪ್ತ ಮಲ್ಲೇಶ್ ಬ್ರಾಹ್ಮಣ ಸಮುದಾಯವನ್ನು ನೇರವಾಗಿ ಗುರಿ ಮಾಡಿ ಮಾತನಾಡಿದ್ದಾರೆ, ಬ್ರಾಹ್ಮಣ ಸಮುದಾಯವನ್ನು ನಂಬಬೇಡಿ, ಇದರಿಂದ ದೇಶ ನಾಶವಾಗುತ್ತದೆ ಎಂದು ಹೇಳಿದ್ದಾರೆ. ಇಂತಹ ಹೇಳಿಕೆಯನ್ನು ನಾವು ಖಂಡಿಸುತ್ತೇವೆ, ನ. 17 ರಂದು ( ನಾಳೆ) ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
BIGG NEWS : ಭಾರತದಲ್ಲಿ ಎಷ್ಟು ಮಂದಿ ‘ಮೊಬೈಲ್ ಫೋನ್’ ಬಳಸುತ್ತಿದ್ದಾರೆ ಗೊತ್ತಾ? ಇಲ್ಲಿದೆ ಅಗತ್ಯ ಮಾಹಿತಿ
ಬಿ.ಇಡಿ, ಡಿ.ಇಡಿ ಕೋರ್ಸ್ಗಳಿಗೆ ವಿಶೇಷ ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ