ಚಿಕ್ಕಮಗಳೂರು : ಇಂದು ಚಿಕ್ಕಮಗಳೂರಿನ ಜಿಲ್ಲೆಯಾದ್ಯಂತ ಮಾಜಿ ಸಿಎಂ ಸಿದ್ದರಾಮಯ್ಯ ಪ್ರವಾಸ ಕೈಗೊಂಡಿದ್ದರು. ಈ ಸಂದರ್ಭದಲ್ಲೂ ʻಕಪ್ಪುಬಾವುಟ ಪ್ರದರ್ಶನ ʼ ಮಾಡಿ ಹಿಂದೂ ಕಾರ್ಯಕರ್ತರಿಂದ ʻ ಗೋ ಬ್ಯಾಕ್ ಘೋಷಣೆ ʼಆಕ್ರೋಶ ವ್ಯಕ್ತಪಡಿಸಿದ್ದರು.
ಶೃಂಗೇರಿ ತಾಲೂಕಿನ ಬಾಸೂರಿನಲ್ಲಿ ಸಿದ್ದರಾಮಯ್ಯ ಆಗಮಿಸುತ್ತಿದ್ದಂತೆ ಹಿಂದೂ ಕಾರ್ಯಕರ್ತರಿಂದ ಸಾವರ್ಕರ್ ಫೋಟೊ ಹಿಡಿದು ಕಪ್ಪುಬಾವುಟ ಪ್ರದರ್ಶನ ಮಾಡಿ ಗೋ ಬ್ಯಾಕ್ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಗಿ ಪೊಲೀಸ್ ಬಂದೋಬಸ್ತ್ ನಡುವೆಯೂ ಮಾಜಿ ಸಿಎಂ ಸಿದ್ದರಾಮಯ್ಯ ಧಿಕ್ಕಾರ, ಘೋಷಣೆ ಮೂಲಕ ಕೊಡಗಿನಂತೆ ಚಿಕ್ಕಮಗಳೂರಿನಲ್ಲೂ ನಡೆಯಿತು. ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.