ವಿಜಯಪುರ : ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದು, ಶ್ರೀಗಳ ನಿಧನಕ್ಕೆ ಇಡೀ ಕರುನಾಡು ಕಂಬನಿ ಮಿಡಿದಿದೆ.
ಸಿದ್ದೇಶ್ವರ ಸ್ವಾಮೀಜಿ’ ಅಂತಿಮ ಯಾತ್ರೆಗೆ ಜನಸಾಗರ ವೇ ಹರಿದು ಬಂದಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ಜನಸಾಗರ ಹರಿದು ಬಂದಿದ್ದು, ಎಲ್ಲೆಡೆ ಸಿದ್ದೇಶ್ವರ ಸ್ವಾಮೀಜಿಗೆ ಜೈ ಎಂಬ ಘೋಷಣೆ ಮೊಳಗಿದೆ.
ಯಾತ್ರೆ ಸಾಗುವ ಮಾರ್ಗದಲ್ಲಿ ರಂಗೋಲಿ ಹಾಕಲಾಗಿದ್ದು. ವಾಹನಕ್ಕೆ ಹೂವಿನ ಸುರಿಮಳೆ ಸುರಿಸಲಾಗಿದೆ. ಅಂತಿಮ ಯಾತ್ರೆ ಜ್ಞಾನಯೋಗಾಶ್ರಮಕ್ಕೆ ತೆರಳುತ್ತಿದ್ದು, ಮೆರವಣಿಗೆಯಲ್ಲಿ ವಿವಿಧ ಮಠದ ಮಠಾಧೀಶರು, ರಾಜಕೀಯ ಗಣ್ಯರು ಭಾಗವಹಿಸಿದ್ದಾರೆ.
ಸಿದ್ದೇಶ್ವರ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಆಗ್ರಹ
ಸಿದ್ದೇಶ್ವರ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂಬ ಕೂಗು ಕೇಳಿ ಬಂದಿದೆ. ಬಾಗಲಕೋಟೆ ಜಿಲ್ಲೆ ಇಳಕಲ್ ವಿಜಯಮಹಾಂತೇಶ್ ಮಠದ ಗುರುಮಹಾಂತ ಶ್ರೀಗಳು, ಸಿದ್ದೇಶ್ವರ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಆಗ್ರಹಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರ ಮಾತನಾಡಿದ ಅವರು ಸಿದ್ದೇಶ್ವರ ಶ್ರೀಗಳು ನಾಡಿನ ಮಹಾನ್ ಸಂತರು. ನಡೆದಾಡುವ ದೇವರು. ಅವರಿಗೆ ಜಾತಿಭೇದ ಪಂತವಿಲ್ಲ. ಹಾಗಾಗಿ ಅವರಿಗೆ ಭಾರತ ಸರಕಾರ ಭಾರತರತ್ನ ನೀಡಬೇಕು. ಇದರಿಂದ ಪ್ರಶಸ್ತಿ ಪ್ರಶಸ್ತಿ ಗೌರವ ಹೆಚ್ಚಾಗುತ್ತದೆ. ಆದ್ದರಿಂದ ಸಿದ್ದೇಶ್ವರ ಸ್ವಾಮೀಜಿಗಳಿಗೆ ಭಾರತ ರತ್ನ ನೀಡಬೇಕೆಂದು ಆಗ್ರಹಿಸಿದರು.
BJP ನಾಯಕರ ಹಣದಾಸೆಗೆ ಇನ್ನೆಷ್ಟು ಅಮಾಯಕ ಜೀವಗಳು ಬಲಿಯಾಗಬೇಕು?: ಟ್ವಿಟ್ ನಲ್ಲಿ ಸಿದ್ದು ಕಿಡಿಕಿಡಿ