ರಾಯಚೂರು: ಕನಕ ಗುರುಪೀಠದ ಲಿಂಗೈಕ್ಯ ಸಿದ್ಧರಾಮನಂದ ಸ್ವಾಮೀಜಿಯವರನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.
ರಾಯಚೂರಿನ ತಿಂಥಣಿ ಬ್ರಿಡ್ಜ್ ಕನಕ ಗುರುಪೀಠದ ಸಿದ್ಧರಾಮನಂದಸ್ವಾಮಿಯವರು ಇಂದು ನಿಧನರಾಗಿದ್ದರು. ಅವರ ಪಾರ್ಥೀವ ಶರೀರವನ್ನು ಮಠದ ಆವರಣದಲ್ಲೇ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.
ಅಪಾರ ಭಕ್ತರನ್ನು ಹೊಂದಿದ್ದಂತ ಸಿದ್ದರಾಮನಂದ ಸ್ವಾಮೀಜಿಯವರ ಅಂತಿಮ ದರ್ಶನದ ಬಳಿಕ ಪೊಲೀಸ್ ಪಡೆ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ, ಗೌರವ ವಂದನೆ ಸಲ್ಲಿಸಿತು. ಸರ್ಕಾರದ ಪರವಾಗಿ ಸಚಿವ ಬೈರತಿ ಸುರೇಶ್, ಎನ್ ಎಸ್ ಬೋಸರಾಜು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಆನ್ ಲೈನ್ ವಂಚಕರು ನಿಮ್ಮ ನಂಬರ್ ಪಡೆಯೋದು ಹೇಗೆ ಗೊತ್ತಾ? ಇಲ್ಲಿದೆ ಮಾಹಿತಿ








