ದಾವಣಗೆರೆ : ಸಿದ್ದರಾಮಯ್ಯನದ್ದು ಟಿಪ್ಪು ಸಂಸ್ಕೃತಿ, ಮುಸ್ಲಿಮರು ಏನೇ ಕೇಳಿದರು ಕೊಟ್ಟುಬಿಡುತ್ತಾಮೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಿಪಕ್ಷ ನಾಯಕ ಆರ್ ಅಶೋಕ್ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ದಾವಣಗೆರೆಯಲ್ಲಿ ಆರ್ ಅಶೋಕ್ ಮಾಧ್ಯಮಗಳೊಂದಿಗೆ ಮಾತನಾಡಿ, ಸಿಎಂ ಸಿದ್ದರಾಮಯ್ಯ ಮುಸ್ಲಿಂರು ನಾಲ್ಕು ಕೇಳಿದರೆ ಎಂಟು ಕೊಡುತ್ತಾನೆ. ಉತ್ತರ ಕರ್ನಾಟಕದ ಅವನ್ಯಾರು ಮಾಜಿ ಸಚಿವ ಹೇಳಿದ್ದಾನಲ್ಲ ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ಎಲ್ಲವನ್ನು ಬಾಚಿಕೊಳ್ಳಿ ಎಂದು ಹಾಗಾಗಿ ಸಿದ್ದರಾಮಯ್ಯ ಮುಸ್ಲಿಮರು ನಾಲ್ಕು ಕೇಳಿದರೆ ಎಂಟು ಕೊಡುತ್ತಾನೆ ಎಂದು ಏಕವಚನದಲ್ಲಿ ವಾಗ್ದಾಳಿ ಮಾಡಿದರು.