ಬಾಗಲಕೋಟೆ: ಮಹಿಳೆಯೊಬ್ಬರು ಸಿದ್ದರಾಮಯ್ಯ ಹಣ ವಾಪಸ್ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಮಹಿಳೆ ಹಣ ಎಸೆದಿದ್ದರ ಹಿಂದೆ ಎಸ್ ಡಿಪಿಐ ಪಕ್ಷದ ಕೈವಾಡವಿದೆ ಎಂದು ಆರೋಪಿಸಿದ್ದಾರೆ.
BREAKING NEWS: ವರದಾ ನದಿ ತುಂಬಿದ ಹಿನ್ನೆಲೆ: ಸೇತುವೆ ಮೇಲೆ ಸಿಲುಕಿದ ಆ್ಯಂಬುಲೆನ್ಸ್; ಗರ್ಭಿಣಿ ಪರದಾಟ
ಇಳಕಲ್ ನಲ್ಲಿ ಮಾತನಾಡಿದ ಅವರು, ನಾನು ಸ್ವತಃ ಎಸ್ ಡಿಪಿಐ ವ್ಯಕ್ತಿಯನ್ನು ನಿನ್ನೆ ಅಲ್ಲಿ ನೋಡಿದ್ದೇನೆ. ನಾನು ಕೂಡ ಸಿದ್ದರಾಮಯ್ಯ ಜೊತೆಗೆ ಇದ್ದೆ.ಸಿದ್ದರಾಮಯ್ಯ ಕೊಟ್ಟ ಹಣವನ್ನು ಎಸ್ ಡಿಪಿ ಐ ಮುಖಂಡ ಎಸೆಯೋಕೆ ಹೇಳಿದ್ದ. ಆತನೆ ಹಣ ಎಸೆಯೋದಕ್ಕೆ ಪ್ರೇರಣೆ ನೀಡಿದ್ದಾನೆ ಎಂದು ಆರೋಪಿಸಿದ್ದಾರೆ.
ಗಾಯಾಳುಗಳು ಸಿದ್ದರಾಮಯ್ಯ ಮುಂದೆ ತಮ್ಮ ನೋವನ್ನೆಲ್ಲ ಹೇಳಿದರು.ಅವರು ಬಹಳ ಚೆನ್ನಾಗಿ ಸ್ಪಂದಿಸಿದರು.
ಅವನು ಯಾವನೊ ಎಸ್ ಡಿಪಿ ಐ ಜಿಲ್ಲಾ ಮುಖಂಡ ಅಲ್ಲಿದ್ದ. ಇದರಲ್ಲಿ ೧೦೦ ಪ್ರತಿಶತ ಎಸ್ ಡಿ ಪಿ ಐ ಕೈವಾಡವಿದೆ.
ಅಲ್ಪಸಂಖ್ಯಾತರು ಎಲ್ಲರೂ ಸಿದ್ದರಾಮಯ್ಯನವರ ಜೊತೆಗಿದ್ದಾರೆ.ಇನ್ನು ಹಿಂದೂ ಕಾರ್ಯಕರ್ತ ಅರುಣ ಕಟ್ಟಿಮನಿ ಸಿದ್ದರಾಮಯ್ಯ ನೋಡೋಕೆ ಬರೋದು ಬೇಡ ಅಂತಾನೆ.ಆದರೆ ಈ ರೀತಿ ಹೇಳೋಕೆ ಅವನು ಯಾವ ದೊಣ್ಣೆ ನಾಯಕ ಒಬ್ಬ ಮಾಜಿ ಸಿಎಂ ಬರ್ತಾರೆ ಅಂದ್ರೆ ಹೀಗೆ ಹೇಳೋದಾ? ಎಂದು ಶಾಸಕರು ಪ್ರಶ್ನೆ ಮಾಡಿದ್ದಾರೆ.
BREAKING NEWS: ವರದಾ ನದಿ ತುಂಬಿದ ಹಿನ್ನೆಲೆ: ಸೇತುವೆ ಮೇಲೆ ಸಿಲುಕಿದ ಆ್ಯಂಬುಲೆನ್ಸ್; ಗರ್ಭಿಣಿ ಪರದಾಟ
ಸಿದ್ದುಗೆ ಮುಖಭಂಗ ಮಾಡಲು ಎಸ್ ಡಿಪಿಐ ತಂತ್ರ ರೂಪಿಸಿತ್ತಾ? ಕಾಂಗ್ರೆಸ್ ಮಾಜಿ ಶಾಸಕ ಕಾಶಪ್ಪನವರ ಹೇಳಿಕೆ ಇಂಥ ಪ್ರಶ್ನೆ ಹುಟ್ಟು ಹಾಕಿದೆ.
ನಿನ್ನೆ ಬಾಗಲಕೋಟೆಯಲ್ಲಿ ಸಿದ್ದರಾಮಯ್ಯ ಕೊಟ್ಟಿದ್ದ ಎರಡು ಲಕ್ಷ ರೂ. ಪರಿಹಾರ ಹಣ ತೀರಸ್ಕರಿಸಿ ಮುಸ್ಲಿಂ ಮಹಿಳೆ ವಾಹನದ ಕಡೆಗೆ ಎಸೆದಿದ್ದರು .ಈ ಬಗ್ಗೆ ಭಾರಿ ಚರ್ಚೆಯಾಗಿತ್ತು.