ಮೈಸೂರು : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ, ಮುಡಾಗೆ 14 ನಿವೇಶನಗಳನ್ನ ಹಿಂತಿರುಗಿಸಿದ್ದು, ಈ ಒಂದು ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಬಾಲ್ಯ ಸ್ನೇಹಿತ ಕರಿಯಪ್ಪ ಮಾತನಾಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬಾರದು ಎಂದು ಸಿದ್ದರಾಮಯ್ಯ ಬಾಲ್ಯ ಸ್ನೇಹಿತ ಕರಿಯಪ್ಪ ಹೇಳಿಕೆ ನೀಡಿದ್ದು, ಸಿದ್ದರಾಮಯ್ಯ ಎಲ್ಲಾ ಭಾಗ್ಯಗಳನ್ನು ಕೊಟ್ಟವರು. 40 ವರ್ಷದಿಂದ ಯಾವುದೇ ಕಳಂಕ ಇರಲಿಲ್ಲ. ಸೈಟ್ ವಿಚಾರ ನಮಗೆ ಸಾಕಷ್ಟು ಬೇಸರವಾಗಿತ್ತು.
ಜೊತೆಯಲ್ಲಿ ಉಂಡು ತಿಂದವರೇ ಸಿಎಂ ಸಿದ್ದರಾಮಯ್ಯ ಇಂದಿನ ಪರಿಸ್ಥಿತಿಗೆ ಕಾರಣರಾಗಿದ್ದಾರೆ. ಅಲ್ಲದೆ ಬಿಜೆಪಿ, ಜೆಡಿಎಸ್ ಪಕ್ಷದ ನಾಯಕರು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಿ ಎಂದು ಆಗ್ರಹಿಸುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ರಾಜೀನಾಮೆ ನೀಡಬಾರದು. ಯಾವುದೇ ಕಾರಣಕ್ಕೂ ಸಿಎಂ ಪತ್ನಿ ನಿವೇಶನಗಳನ್ನು ಹಿಂತಿರುಗಿಸಬಾರದಾಗಿತ್ತು ಎಂದು ಅವರು ತಿಳಿಸಿದರು.
ಮರಿಗೌಡ ನಮ್ಮ ಕೈಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಆತನಿಂದಲೇ ಇಷ್ಟೆಲ್ಲಾ ಆಗಿರುವುದು ವಿಶ್ವನಾಥ ಮಾತನ್ನು ಸಿಎಂ ಕೇಳಿದ್ದರೆ ಈ ಆರೋಪ ಬರುತ್ತಿರಲಿಲ್ಲ ಆದರೆ ಈಗ ಸೈಟ್ ವಾಪಸ್ ಕೊಡಲೇಬಾರದು ಅನಿಸುತ್ತದೆ ಎಂದು ಸಿದ್ದರಾಮಯ್ಯ ಬಾಲ್ಯ ಸ್ನೇಹಿತ ಕರಿಯಪ್ಪ ತಿಳಿಸಿದರು.